






ಇದು ಆರಂಭ ಮುಂದೆ ಆರು ತಿಂಗಳಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮ -ಶಾಸಕ ಅಶೋಕ್ ಕುಮಾರ್ ರೈ


ಕರ್ನಾಟಕದಲ್ಲಿ ಆಗದ ಹೊಸ ರೀತಿಯ ಅಭಿಯಾನ ಪುತ್ತೂರಿನಲ್ಲಿ ಆರಂಭ
ಜಾಗೃತಿ ಪಲಕ ಹಿಡಿದು ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು
ಭಾರಿ ಉದ್ದದ ಜಾಗೃತಿ ಬ್ಯಾನರ್ ವಿಶೇಷ ಆಕರ್ಷಣೆ



ಪುತ್ತೂರು: “ಪೈನ್ ಕಿಲ್ಲರ್ ತ್ಯಜಿಸಿ-ಕಿಡ್ನಿ ರಕ್ಷಿಸಿ-ಜೀವ ಉಳಿಸಿ” ಎಂಬ ಜನಜಾಗೃತಿ ಕಾರ್ಯಕ್ರಮ ವಿದ್ಯಾರ್ಥಿಗಳ ಜೊತೆಯಲ್ಲಿ ಜಾಥಾದೊಂದಿಗೆ ದರ್ಬೆ ಸರ್ಕಲ್ ಬಳಿಯಿಂದ ಬೊಳ್ವಾರ್ ವರೆಗೆ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಎ.6ರಂದು ನಡೆಯಿತು.

ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದುರಾಜ್ ಮತ್ತು ಪ್ರಗತಿ ಕಾಲೇಜ್ ಆಫ್ ನರ್ಸಿಂಗ್‌ನ ಪ್ರೀತಾ ಹೆಗ್ಡೆ ಅವರು ತೆಂಗಿನ ಕಾಯಿ ಒಡೆದು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಇದು ಆರಂಭ ಮುಂದೆ ಆರು ತಿಂಗಳಲ್ಲಿ ಇನ್ನಷ್ಟು ಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದರು.










