ಶ್ರೀರಾಮಹನುಮ ಜ್ಯೋತಿ ರಥಯಾತ್ರೆಗೆ ಬೆಟ್ಟಂಪಾಡಿ ದೇವಾಲಯದಲ್ಲಿ ಸ್ವಾಗತ

0

ಪುತ್ತೂರು: ಎ.9ರಿಂದ 12ರವರೆಗೆ ನಡೆಯಲಿರುವ ಹನುಮಗಿರಿ ಶ್ರೀಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್‌ನ ತ್ರಿವೇಣಿ ಸಂಗಮದ ಗಂಗಾಜಲ, ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ, ಪಂಪ ಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಸಂಚರಿಸುತ್ತಿರುವ ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಎ.7ರಂದು ಬೆಳಿಗ್ಗೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯಕ್ಕೆ ಆಗಮಿಸಿತು.


ಬೆಟ್ಟಂಪಾಡಿಗೆ ಆಗಮಿಸಿದ ಸಂದರ್ಭ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ವಿನೋದ್ ಕುಮಾರ್ ಬಲ್ಲಾಳ್‌ರವರು ತೆಂಗಿನ ಕಾಯಿ ಒಡೆದು ದೇವಾಲಯಕ್ಕೆ ಸ್ವಾಗತಿಸಿದರು. ಬಳಿಕ ಮೆರವಣಿಗೆಯ ಮೂಲಕ ದೇವಾಲಯಕ್ಕೆ ರಥ ಆಗಮಿಸಿತು. ದೇವಾಲಯದ ಅರ್ಚಕರಾದ ವೆಂಕಟ್ರಮಣ ಭಟ್‌ರವರು ಹೂಹಾರ ಹಾಕಿ, ಆರತಿ ಬೆಳಗಿದರು. ಬಳಿಕ ದೇವಾಲಯದ ಮೊಕ್ತೇಸರರಿಗೆ ಶ್ರೀರಾಮ ಹನುಮ ಜ್ಯೋತಿಯನ್ನು ಹಸ್ತಾಂತರಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ರಥಯಾತ್ರೆಯ ಮಾಹಿತಿ ನಿಡಿದರು. ದೇವಾಲಯದ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಇರ್ದೆ ಬೆಟ್ಟಂಪಾಡಿ ಸಮಿತಿ ಅಧ್ಯಕ್ಷ ರಂಗನಾಥ ರೈ ಗುತ್ತು, ಕಾರ್ಯದರ್ಶಿ ಪ್ರಕಾಶ್ ರೈ ಬೈಲಾಡಿ, ಜಪಯಜ್ಞ ಸಮಿತಿ ಸಂಚಾಲಕ ಕರುಣಾಕರ ಶೆಟ್ಟಿ ಕೊಮ್ಮಂಡ, ರಥಯಾತ್ರೆ ಸಂಚಾಲಕ ಶುಭಕರ ರೈ ಬೈಲಾಡಿ, ನಾರಿಕೇಳ ಸಂಚಾಲಕ ಜಗನ್ನಾಥ ರೈ ಕೊಮ್ಮಂಡ, ಭಜನಾ ಸಂಕೀರ್ತನಾ ಸಂಚಾಲಕ ಶಿವಕುಮಾರ್ ಬಲ್ಲಾಳ್, ಮಹಿಳಾ ಸಮಿತಿ ಸಂಚಾಲಕಿ ಸವಿತಾ ರೈ ಮದಕ, ಸಮಿತಿ ಪದಾಧಿಕಾರಿಗಳಾದ ಮೀನಾಕ್ಷಿ ಮಂಜುನಾಥ್, ಉಮಾವತಿ, ಅರುಣ್ ಪ್ರಕಾಶ್ ರೈ ಮದಕ, ಸಂದೀಪ್ ರೈ, ಸುಜಿತ್ ಕಜೆ, ಮಹೇಶ್ ಕೋರ್ಮಂಡ, ನಾಗೇಶ್ ಕಜೆ ಸೇರಿದಂತೆ ಹಲವಾರು ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here