ಶ್ರೀರಾಮ ಹನುಮ ಜ್ಯೋತಿ ರಥ ಯಾತ್ರೆಗೆ ನಿಡ್ಪಳ್ಳಿ ದೇವಸ್ಥಾನದಲ್ಲಿ ಸ್ವಾಗತ

0

ನಿಡ್ಪಳ್ಳಿ : ಹನುಮಗಿರಿ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಏ.9ರಿಂದ 12ರ ತನಕ ನಡೆಯುವ ಅಷ್ಟಬಂದ ಬ್ರಹ್ಮಕಲಶೋತ್ಸವದ ಅಂಗವಾಗಿ ಅಯೋಧ್ಯೆಯಿಂದ ಆಗಮಿಸಿದ ಶ್ರೀರಾಮ ಜ್ಯೋತಿ, ಮೂಲ ಮೃತ್ತಿಕೆ, ಪ್ರಯಾಗರಾಜ್ ನ ತ್ರಿವೇಣಿ ಸಂಗಮದಿಂದ ಗಂಗಾಜಲ, ಅಂಜನಾದ್ರಿಯಿಂದ ಹನುಮ ಜ್ಯೋತಿ, ಮೃತ್ತಿಕೆ ಹಾಗೂ ಪಂಪ ಸರೋವರದ ಪವಿತ್ರ ಜಲ ಸಂಗ್ರಹಿಸಿಕೊಂಡು ಸಂಚರಿಸುತ್ತಿರುವ ಶ್ರೀರಾಮ ಹನುಮಜ್ಯೋತಿ ರಥಯಾತ್ರೆ ಏ.7 ರಂದು ನಿಡ್ಪಳ್ಳಿ ಗ್ರಾಮದ ಶ್ರೀ ಶಾಂತದುರ್ಗಾ ದೇವಸ್ಥಾನಕ್ಕೆ ಆಗಮಿಸಿತು.

 ಭಜನೆ, ಜಾಗಟೆಯೊಂದಿಗೆ ಶ್ರೀ ರಾಮ ಹನುಮ ಜ್ಯೋತಿ ರಥವನ್ನು ಅದ್ದೂರಿಯಾಗಿ ಬರಮಾಡಿ ಕೊಳ್ಳಲಾಯಿತು.ದೇವಸ್ಥಾನದ ಅರ್ಚಕ ನವೀನ್ ಹೆಬ್ಬಾರ್ ರಥಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿದರು.ಸೇರಿದ ಭಕ್ತಾದಿಗಳು ರಥಕ್ಕೆ ಪುಷ್ಪಾರ್ಚನೆ ಮಾಡಿದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ಗೌಡ ಸ್ವಾಗತಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ, ಕೋಟಿ ಶ್ರೀರಾಮ  ತಾರಕ ಜಪ ಯಜ್ಞದ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಅವರು ರಥಯಾತ್ರೆಯ ಮಹತ್ವ ಮತ್ತು ಬ್ರಹ್ಮಕಲಶೋತ್ಸವದ ರೂಪು ರೇಷೆಗಳ ಬಗ್ಗೆ ಮಾಹಿತಿ ನೀಡಿ ರಾಷ್ಟ್ರ ಮಟ್ಟದಲ್ಲಿಯೇ ವಿಶೇಷವಾಗಿ ನಡೆಯುವ ಒಂದು  ಈ ಒಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸರ್ವರನ್ನೂ ಆಮಂತ್ರಿಸಿದರು.

ಮುರಳೀಕೃಷ್ಣ ಹಸಂತಡ್ಕ ಹಾಗೂ ತಂಡ, ನಿಡ್ಪಳ್ಳಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು,ಬ್ರಹ್ಮಕಲಶೋತ್ಸವದ ಗ್ರಾಮ ಸಮಿತಿ ಸದಸ್ಯರು, ಊರ ಭಕ್ತಾದಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here