ಏ.9:ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನಲ್ಲಿ ವಿಶೇಷ ಆರೋಗ್ಯ ತಪಾಸಣಾ ಶಿಬಿರ

0

ಪುತ್ತೂರು:ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಮಧುಮೇಹ ಹಾಗೂ ವೈದ್ಯಕೀಯ ತಜ್ಞ ಡಾ.ನಝೀರ್ ಅಹಮದ್ ಕೆ.ರವರ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇವುಗಳ ಸಹಯೋಗದಲ್ಲಿ 13ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ವಿಶೇಷ ಆರೋಗ್ಯ ತಪಾಸಣಾ ಶಿಬಿರವು ಏ.9 ರಂದು ಕಲ್ಲಾರೆ ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ನಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಲಿದೆ.


ಪಾದಾರ್ಪಣೆ ಪ್ರಯುಕ್ತ ಆಗಮಿಸುವ ಫಲಾನುಭವಿಗಳಿಗೆ ವಿಶೇಷ ಪರೀಕ್ಷೆಯಾದ ಸಂಪೂರ್ಣ ದೇಹದ ಕೊಬ್ಬು ಹಾಗೂ ಮೆಟಾಬಾಲಿಕ್ ವಿಶ್ಲೇಷಣೆಯಲ್ಲಿ ದೇಹದ ಕೊಬ್ಬಿನ ಪ್ರಮಾಣ, ಒಳಾಂಗಿಕ ಕೊಬ್ಬು, ದೇಹದ ವಯಸ್ಸು, ಸ್ನಾಯು ಪ್ರಮಾಣ ಪರೀಕ್ಷಿಸಲಾಗುತ್ತದೆ. ರಕ್ತದ ಸಕ್ಕರೆ ಹಾಗೂ HbA1C(3 ತಿಂಗಳ ಸರಾಸರಿ ಸಕ್ಕರೆ ಮಟ್ಟ) ಅನ್ನು ಉಚಿತವಾಗಿ ಮಾಡಲಾಗುತ್ತದೆ. ಲಿಪಿಡಿ ಪ್ರೊಫೈಲ್ ರೂ.500 ರ ಬದಲು ರೂ.200 ಹಾಗೂ ಥೈರಾಯ್ಡ್ ಪರೀಕ್ಷೆಯನ್ನು ರೂ.430 ರ ಬದಲು ರೂ.200 ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ. ಸೀಮಿತ ಸ್ಥಾನಗಳು ಮಾತ್ರ ಇದ್ದು ಮುಂಚಿತ ನೋಂದಾವಣೆಗಾಗಿ 9481451929 ಮೊಬೈಲ್ ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಡಾ.ನಝೀರ್ಸ್ ಡಯಾಬೆಟ್ಸ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಕ್ಸ್
ವಿಶೇಷ ಪರೀಕ್ಷೆ..
ಸಂಪೂರ್ಣ ದೇಹದ ಕೊಬ್ಬು ಹಾಗೂ ಮೆಟಾಬಾಲಿಕ್ ವಿಶ್ಲೇಷಣೆಯಲ್ಲಿ ದೇಹದ ಕೊಬ್ಬಿನ ಪ್ರಮಾಣ, ಒಳಾಂಗಿಕ ಕೊಬ್ಬು, ದೇಹದ ವಯಸ್ಸು, ಸ್ನಾಯು ಪ್ರಮಾಣ ಪರೀಕ್ಷಿಸಲಾಗುತ್ತದೆ.

ಉಚಿತ ಪರೀಕ್ಷೆ..
ರಕ್ತದ ಸಕ್ಕರೆ ಹಾಗೂ HbA1C(3 ತಿಂಗಳ ಸರಾಸರಿ ಸಕ್ಕರೆ ಮಟ್ಟ) ಅನ್ನು ಉಚಿತವಾಗಿ ಮಾಡಲಾಗುತ್ತದೆ.

ರಿಯಾಯಿತಿ ದರದ ಪರೀಕ್ಷೆ..
ಲಿಪಿಡಿ ಪ್ರೊಫೈಲ್ ರೂ.500 ರ ಬದಲು ರೂ.200 ಹಾಗೂ ಥೈರಾಯ್ಡ್ ಪರೀಕ್ಷೆಯನ್ನು ರೂ.430 ರ ಬದಲು ರೂ.200

ಕ್ಯಾರಪ್ ಮೊರಾಸ್

LEAVE A REPLY

Please enter your comment!
Please enter your name here