







ಉಪ್ಪಿನಂಗಡಿ:ಕ್ರೇನ್ ಡಿಕ್ಕಿಯಾಗಿ ಪಾದಚಾರಿಯೋರ್ವರು ದಾರುಣ ಸಾವಿಗೀಡಾದ ಘಟನೆ ಬೆಳ್ತಂಗಡಿ ಕಣಿಯೂರು ಗ್ರಾಮದ ಪಿಲಿಗೂಡು ಎಂಬಲ್ಲಿ ಏ.7ರಂದು ನಡೆದಿದೆ.


ರಬ್ಬರ್ ಟ್ಯಾಪರ್ ಆಗಿದ್ದು ಈ ಹಿಂದೆ ಬೆಳ್ಳಾರೆ ನೆಟ್ಟಾರು ಮೊಗಪ್ಪ ಸಿಆರ್ಸಿ ನಿವಾಸಿಯಾಗಿದ್ದ ನಿವಾಸಿಯಾಗಿದ್ದ ಮಹಾಲಿಂಗಂ(55ವ.) ಮೃತಪಟ್ಟವರು.



ಮೊಗಪ್ಪೆಯಿಂದ ಬಂದು ಕಳೆದ ಒಂದು ವರ್ಷದಿಂದ ಕಣಿಯೂರು ಪಿಲಿಗೂಡಲ್ಲಿ ಮಗಳು ರಾಧಿಕಾ ಅವರ ಗಂಡ ದಿವ್ಯರಾಜ್ ಅವರ ಮನೆಯಲ್ಲಿ ವಾಸ್ತವ್ಯವಿದ್ದರು. ಅಲ್ಲಿಯೇ ಅವರು ರಬ್ಬರ್ ಟ್ಯಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಅನಾರೋಗ್ಯದಿಂದಿದ್ದು ಔಷಧಿ ತರಲೆಂದು ಹೋಗಿದ್ದ ಅವರು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಗುರುವಾಯನಕೆರೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕ್ರೇನ್ ಅವರಿಗೆ ಡಿಕ್ಕಿಯಾಗಿತ್ತು.ಪರಿಣಾಮ ರಸ್ತೆಯ ಬದಿಗೆ ಬಿದ್ದ ಅವರ ದೇಹದ ಮೇಲೆಯೇ ಕ್ರೇನ್ನ ಹಿಂಬದಿ ಚಕ್ರ ಹರಿದ ಪರಿಣಾಮ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪುತ್ರಿಯರಾದ ರಾಧಿಕಾ, ಮಹಾಲಕ್ಷ್ಮೀ, ಮಗ ಸುದಿನ್, ಅಳಿಯಂದಿರಾದ ದಿವ್ಯರಾಜ್, ಮಣಿಕಂಠ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಪುತ್ತೂರು ಹಿಂದೂ ರುದ್ರ ಭೂಮಿಯಲ್ಲಿ ನಡೆಸಲಾಯಿತು ಎಂದು ಅಳಿಯ ತಿಳಿಸಿದ್ದಾರೆ. ಮೃತರ ಪುತ್ರ ನೀಡಿದ ದೂರಿನ ಮೇರೆಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










