ಅಗಲಿದ ವಿನೋದ್ ಶೆಟ್ಟಿ ಅರಿಯಡ್ಕರವರ ಪಾರ್ಥಿವ ಶರೀರಕ್ಕೆ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನಿಂದ ಮಾಲಾರ್ಪಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಣೆ

0

ವಿನೋದ್ ಶೆಟ್ಟಿಯವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು: ಪ್ರಕಾಶ್ಚಂದ್ರ ರೈ ಕೈಕಾರ

ಪುತ್ತೂರು: ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷ, ಹಿರಿಯ ಸಹಕಾರ ಧುರೀಣರಾಗಿದ್ದ ಅರಿಯಡ್ಕ ವಿನೋದ್ ಶೆಟ್ಟಿಯವರು ಎ.೮ ರಂದು ನಿಧನರಾಗಿದ್ದು ಇವರ ಪಾರ್ಥಿವ ಶರೀರವನ್ನು ಬೆಳಿಗ್ಗೆ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿ ಬಳಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು ಈ ವೇಳೆ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬ್ಬಂದಿ ವರ್ಗದವರು, ನಿರ್ದೇಶಕರುಗಳು, ಸದಸ್ಯರುಗಳು, ಗ್ರಾಮಸ್ಥರು ಪಾರ್ಥಿವ ಶರೀರಕ್ಕೆ ಮಾಲಾರ್ಪಣೆ ಮಾಡುವುದರೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಕುಂಬ್ರ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು, ವಿನೋದ್ ಶೆಟ್ಟಿ ಅರಿಯಡ್ಕರವರು ಓರ್ವ ಸಜ್ಜನ ವ್ಯಕ್ತಿಯಾಗಿದ್ದು ಸಮಾಜ ಸೇವಕರಾಗಿ, ಸಹಕಾರಿ ಧುರೀಣರಾಗಿ ನಮ್ಮ ಸಂಘದ ಅಧ್ಯಕ್ಷರಾಗಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರಾಗಿದ್ದರು. ಇವರು ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿ ಎಲ್ಲರೊಂದಿಗೆ ಪ್ರೀತಿ ವಾತ್ಸಲ್ಯದಿಂದ ಬೆರೆಯುತ್ತಿದ್ದರು ಇಂತಹ ವ್ಯಕ್ತಿಯನ್ನು ಕಳೆದುಕೊಂಡಿರುವುದು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನಲ್ಲಿ ಲೀನವಾದ ವಿನೋದ್ ಶೆಟ್ಟಿಯವರು ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.


ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್, ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್, ನಿರ್ದೇಶಕರುಗಳಾದ ರಾಜೀವಿ ಎಸ್ ರೈ, ಉಮೇಶ್ ಗೌಡ, ಮಲ್ಲಿಕಾ ಎ.ಜೆ, ಶಿವರಾಮ ಬಿ, ಅಮರನಾಥ ರೈ, ವಸಂತ ಕುಮಾರ್, ಸತೀಶ್ ಕರ್ಕೇರ, ಸಂತೋಷ್ ಆಳ್ವ, ಶ್ರೀನಿವಾಸ ಪ್ರಸಾದ್ ಮುಡಾಲ, ಸಿಬ್ಬಂದಿಗಳಾದ ವೀಣಾ ರೈ, ರಾಜ್‌ಪ್ರಕಾಶ್ ರೈ, ಉದಯಶಂಕರ, ರಾಜ್‌ಕಿರಣ್, ಭರತ್, ಶಾಂತ ಕುಮಾರ, ವೆಂಕಪ್ಪ, ಹರೀಶ್, ಪ್ರೀತಿ, ಹರ್ಷಿತಾ, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ನೇಮಾಕ್ಷ ಸುವರ್ಣ,ರಾಜೇಶ್ ರೈ ಪರ್ಪುಂಜ, ರತನ್ ರೈ ಕುಂಬ್ರ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಆನಂದ ರೈ ಡಿಂಬ್ರಿ, ಸಾರ್ಥಕ್ ರೈ ಅರಿಯಡ್ಕ, ಕರುಣಾ ರೈ ಬಿಜಳ, ನಾರಾಯಣ ಪೂಜಾರಿ ಮಡ್ಯಂಗಳ, ಮಹೇಶ್ ರೈ ಕೇರಿ, ದಿನೇಶ್ ಕಂಪ, ಲತೀಫ್ ಟೈಲರ್, ಹರಿಪ್ರಸಾದ್ ರೈ ಇಂತ್ರುಮೂಲೆ, ವಿಜಯ ಕುಮಾರ್ ರೈ ಮುಗೇರು, ರಮೇಶ್ ಆಳ್ವ ಕಲ್ಲಡ್ಕ, ಬಾಬಣ್ಣ ರೈ ಪಯಂದೂರು, ಸಂದೀಪ್ ಶೆಟ್ಟಿ, ಭವ್ಯ ರೈ, ಡಾ.ರಾಜೇಶ್ ಪಿ.ಎನ್, ಜಯರಾಮ ಗೌಡ ಬೊಳ್ಳಾಡಿ ಸೇರಿದಂತೆ ಹಲವು ಮಂದಿ ಮಾಲಾರ್ಪಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಸಹಕಾರಿ ಸಂಘದ ಕಛೇರಿಗೆ ರಜೆ
ವಿನೋದ್ ಶೆಟ್ಟಿಯವರ ನಿಧನದ ಹಿನ್ನಲೆಯಲ್ಲಿ ಅವರ ಗೌರವಾರ್ಥ ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಛೇರಿಗೆ ಎ.8ರಂದು ರಜೆಯನ್ನು ಸಂಘದ ಅಧ್ಯಕ್ಷರು ಘೋಷಿಸಿದರು.

LEAVE A REPLY

Please enter your comment!
Please enter your name here