






ಪುತ್ತೂರು:ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಧ್ವಜಾರೋಹಣವನ್ನು ದೇವಸ್ಥಾನದ ಅಧಿಕೃತ ಖಾಯಂ ಪದಾರ್ಥಿಗಳ ಹುದ್ದೆಯಲ್ಲಿರುವ ನೌಕರರಿಂದಲೇ ಮಾಡಿಸಿ, ಅಧಿಕೃತ ನೌಕರರಿಗೆ ಮಾತ್ರ ಗರ್ಭಗುಡಿಯ ಎಡನಾಳಿಯ ಪ್ರವೇಶಕ್ಕೆ ಅವಕಾಶ ನೀಡಿ ಎಂದು ಶೈವಕ್ಷೇತ್ರ ಸಂರಕ್ಷಣಾ ವೇದಿಕೆಯ ಸಂಸ್ಥಾಪಕ ಶ್ರೀನಾಥ್ ಟಿ.ಎಸ್ ಸುಬ್ರಹ್ಮಣ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.


ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷ ಜಾತ್ರೋತ್ಸವದ ಧ್ವಜಾರೋಹಣ ಹಾಗೂ ಧ್ವಜ ಅವರೋಹಣ ಮಾಡುವ ಜವಾಬ್ದಾರಿ, ಅನುಮತಿ ಇರುವುದು ದೇವಸ್ಥಾನದಲ್ಲಿ ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರಿಗೆ ಮಾತ್ರ.ಈ ಮಾಹಿತಿಯನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ನಮಗೆ ಲಿಖಿತವಾಗಿ ನೀಡಿದ್ದಾರೆ.ದೇವಸ್ಥಾನದಲ್ಲಿ ಪ್ರಸಕ್ತ ನಾಗೇಶ್, ಬಾಲಕೃಷ್ಣ ಇವರು ಖಾಯಂ ಪದಾರ್ಥಿ ಹುದ್ದೆಯಲ್ಲಿರುವ ನೌಕರರು. ಸದ್ರಿ ದೇವಸ್ಥಾನದಲ್ಲಿ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸುವ ಅವಕಾಶ ಇರುವುದು ದೇವಳದ ತಂತ್ರಿಗಳಿಗೆ, ಅರ್ಚಕರಿಗೆ, ಸಂಬಂಧಪಟ್ಟ ನೌಕರರಿಗೆ ಮಾತ್ರ ಎಂಬುದು ದೇವಸ್ಥಾನದ ಅಧಿಕೃತ ಮಾಹಿತಿ. ಹೀಗಿರುವಾಗ ದೇವಸ್ಥಾನದಲ್ಲಿ ಯಾವುದೇ ನೇಮಕಾತಿ ಹುದ್ದೆಯಲ್ಲಿಲ್ಲದ, ದೇವಸ್ಥಾನದಲ್ಲಿ ಯಾವುದೇ ನಿಟ್ಟಿನಲ್ಲಿ ನೌಕರರೂ ಅಲ್ಲದ, ಅನುವಂಶಿಕ ಹಕ್ಕೂ ಇಲ್ಲದ ಮತ್ತು ದೇವಸ್ಥಾನದಿಂದ, ಹಿಂದೂ ಧಾರ್ಮಿಕ ದತ್ತಿ ಇಲಾಖೆ, ತಂತ್ರಿಗಳಿಂದ ಯಾವುದೇ ಲಿಖಿತ ಅನುಮತಿ ಆದೇಶ ಇಲ್ಲದೆ ಪಿ.ಜಿ.ಜಗನ್ನಿವಾಸ ರಾವ್ರವರು ಜಾತ್ರೋತ್ಸವದ ಪವಿತ್ರ ಧ್ವಜಾರೋಹಣ ಮತ್ತು ಅವರೋಹಣವನ್ನು ಅಕ್ರಮವಾಗಿ ಮಾಡುತ್ತಾರೆ.ಅದೇ ರೀತಿ ಅವರ ಸಹೋದರ ಪಿ.ಜಿ.ಚಂದ್ರಶೇಖರ ರಾವ್, ಪುತ್ರ ಕೃಷ್ಣ ಜೆ ರಾವ್ ಅವರು ಜಾತ್ರೋತ್ಸವ, ಧನುಪೂಜೆ ಸೇರಿದಂತೆ ಪಂಚ ಪರ್ವಗಳ ವಿಶೇಷ ದಿನಗಳಂದು ಯಾವುದೇ ಅನುಮತಿ ಇಲ್ಲದೇ, ಅನಽಕೃತವಾಗಿ, ಅಕ್ರಮವಾಗಿ ದೇವಸ್ಥಾನದ ಗರ್ಭಗುಡಿಯ ಎಡನಾಳಿಗೆ ಪ್ರವೇಶಿಸುತ್ತಾರೆ ಎಂದು ಆರೋಪಿಸಿದ ಶ್ರೀನಾಥ್ ಟಿ.ಎಸ್.,ಕಳೆದ ವರ್ಷದ ಜಾತ್ರೋತ್ಸವದ ಸಂದರ್ಭದಲ್ಲಿ ಪಿ.ಜಿ.ಜಗನ್ನಿವಾಸ ರಾವ್ ಅವರು ರಥೋತ್ಸವದಂದು ದೇವರು ರಥ ಏರುವುದಕ್ಕೆ ಮುಂಚಿತವಾಗಿ ಪವಿತ್ರ ಬ್ರಹ್ಮರಥವನ್ನು ಏರಿ ನಿಂತಿದ್ದಾರೆ.ಜಾತ್ರೆಯ ಕೊನೆಯ ಅವಭೃತದ ಸಂದರ್ಭದಲ್ಲಿ ಶ್ರೀದೇವರು ವೀರಮಂಗಲದಲ್ಲಿ ಪವಿತ್ರ ಅವಭೃತ ಸ್ನಾನ ಮಾಡುವ ಸಮಯದಲ್ಲಿ ಕೂಡಾ ಪಿ.ಜಿ.ಜಗನ್ನಿವಾಸ ರಾವ್ ಮತ್ತು ಕೃಷ್ಣ ಜೆ ರಾವ್ರವರು ಅಕ್ರಮವಾಗಿ ಶ್ರೀದೇವರ ಅತೀ ಸಮೀಪಕ್ಕೆ ಹೋಗಿದ್ದಾರೆ ಎಂದು ಆಪಾದಿಸಿದರು. ಬ್ರಾಹ್ಮಣ ಪಂಗಡಕ್ಕೆ ಸೇರದ ಇವರು ಬ್ರಾಹ್ಮಣ ಎಂದು ಸುಳ್ಳು ಹೇಳಿ, ವೇದ ಸಂವರ್ಧನಾ ಪ್ರತಿಷ್ಠಾನದ ಮೂಲಕ ಶ್ರೀ ದೇವಳದಲ್ಲಿ ರುದ್ರಪಾರಾಯಣ ಮಾಡುತ್ತಾರೆ.ಬ್ರಾಹ್ಮಣ ಪಂಕ್ತಿಯಲ್ಲಿ ಬ್ರಾಹ್ಮಣರ ಮಧ್ಯೆ ಕುಳಿತು ಊಟ ಮಾಡುತ್ತಾರೆ ಎಂಬ ಮಾತುಗಳು ಭಕ್ತವಲಯದಲ್ಲಿ ಸಾಕಷ್ಟು ಕೇಳಿ ಬರುತ್ತಿವೆ.ಇದೆಲ್ಲಾ ದೊಡ್ಡ ಪ್ರಮಾದ.ಇದೀಗ ಪಿ.ಜಿ.ಜಗನ್ನಿವಾಸ ರಾವ್ ಇವರ ಮಗ ಕೃಷ್ಣ ಜೆ.ರಾವ್ ವಿರುದ್ಧ ತನ್ನ ಸಹಪಾಠಿ ಹಿಂದು ಹುಡುಗಿಗೆ ಮದುವೆಯಾಗುತ್ತೇನೆಂದು ನಂಬಿಸಿ ಮಗು ಕರುಣಿಸಿ ನಂತರ ಮದುವೆ ಆಗಲ್ಲ ಎಂದು ಮೋಸ ಮಾಡಿದ್ದ ಕ್ರಿಮಿನಲ್ ಅಪಾದನೆ ಇದ್ದು ಪ್ರಕರಣ ತನಿಖೆಯಲ್ಲಿರುವ ವಿಚಾರ ಎಲ್ಲರಿಗೂ ತಿಳಿದಿರುವುದೇ ಆಗಿದೆ.ಹಾಗಾಗಿ ಅನಧಿಕೃತ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಧ್ವಜಾರೋಹಣ ಮಾಡಲು,ಬ್ರಹ್ಮರಥ ಏರಲು, ಅವಭೃತ ಸ್ನಾನದ ಸಮಯ ಸಮೀಪವರ್ತಿಗಳಾಗುವುದಕ್ಕೆ ಅವಕಾಶ ನೀಡತಕ್ಕದ್ದಲ್ಲ ಎಂದು ದೇವಳದ ತಂತ್ರಿಗಳಲ್ಲಿ, ಆಡಳಿತ ವರ್ಗದವರಲ್ಲಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಽಕಾರಿಗಳಲ್ಲಿ ಮಾಧ್ಯಮಗಳ ಮುಖಾಂತರ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ ಎಂದ ಅವರು,ಒಂದು ವೇಳೆ ಇದನ್ನು ಮೀರಿ ಧ್ವಜಾರೋಹಣ ನಡೆಸಿದರೆ ಕಾನೂನು ಹೋರಾಟ ನಡೆಸಲಾಗುವುದು. ದೇವಸ್ಥಾನದ ಕಾರ್ಯನಿರ್ವಹಣಾಽಕಾರಿ ಹಾಗೂ ಅರ್ಚಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.



ನನ್ನ ಹೋರಾಟ ಒಂದು ವಿಷಯಕ್ಕೆ ಸೀಮಿತವಲ್ಲ
ದೇವಸ್ಥಾನದಲ್ಲಿ ನಡೆದ ಅವ್ಯವಹಾರಗಳನ್ನೂ ಬಯಲಿಗೆಳೆದು ಸರಿಪಡಿಸಿದ್ದೇನೆ.ದೇವಸ್ಥಾನದ ಜೀರ್ಣೋದ್ದಾರದ ಬಳಿಕ ಒಳಾಂಗಣದಲ್ಲಿ ದುರ್ಗೆ ಗುಡಿಯನ್ನು ಲಕ್ಷ್ಮೀಗುಡಿ ಮಾಡಿದ್ದರು.ಆಗಲೂ ಹೋರಾಟ ಮಾಡಿ ಶಿವನ ಕ್ಷೇತ್ರದಲ್ಲಿ ಲಕ್ಷ್ಮೀ ಬರುವುದಿಲ್ಲ ಎಂದು ಮತ್ತೆ ದುರ್ಗಾ ಗುಡಿಯನ್ನಾಗಿ ಮಾಡಿದ್ದೇವೆ.ಕೆಮ್ಮಿಂಜೆ ಷಣ್ಮುಖ ದೇವಸ್ಥಾನದಲ್ಲಿ ವಿಷ್ಣುಮೂರ್ತಿ ದೇವಸ್ಥಾನ ಕಟ್ಟಿದ್ದನ್ನು ಡೆಮಾಲಿಷ್ಗೆ ಆರ್ಡ್ರ್ ಮಾಡಿಸಿದ್ದೇವೆ.ಆ ದೇವಸ್ಥಾನದ ಜಾಗವನ್ನು ಒಬ್ಬರು ಅತಿಕ್ರಮಣ ಮಾಡಿ ಟ್ರಸ್ಟ್ ಮಾಡಿಕೊಂಡಿರುವ ವಿರುದ್ಧವೂ ಹೋರಾಟ ಮಾಡಿದ್ದೇನೆ.ಎಲ್ಲಾ ಶಿವ ದೇವಸ್ಥಾನಗಳಲ್ಲಿ ಅಥವಾ ವಿಷ್ಣು ದೇವಸ್ಥಾನದಲ್ಲಿ ಏನೇನು ಇರಬೇಕು ಅದೇ ಪ್ರಕಾರ ಇರಬೇಕು.ಅದಕ್ಕಾಗಿ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತಾ ಬಂದಿದ್ದೇನೆ
-ಶ್ರೀನಾಥ್ ಟಿ.ಎಸ್ ಸುಬ್ರಹ್ಮಣ್ಯ,
ಸಂಸ್ಥಾಪಕರು ಶೈವಕ್ಷೇತ್ರ ಸಂರಕ್ಷಣಾ ವೇದಿಕೆ










