ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಶೀಟ್ ಅಳವಡಿಕೆ : ಸಹಕರಿಸಿದ ದಾನಿಗಳಿಗೆ ಗೌರವ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ಸುಮಾರು 6ಲಕ್ಷ ರೂಪಾಯಿ ವೆಚ್ಚದಲ್ಲಿ ಶೀಟ್ ಅಳವಡಿಸುವಲ್ಲಿ ಸಹಕರಿಸಿದ ದಾನಿಗಳಿಗೆ ದೇವಳದ ವತಿಯಿಂದ ಗೌರವಿಸಲಾಯಿತು.


ದಾನಿಗಳಾದ ಅರ್ಚಕರಾದ ಉದಯಕೃಷ್ಣ ಭಟ್, ಜಯರಾಮ ಭಟ್, ಉದ್ಯಮಿ ರಾಜರಾಮ ಪ್ರಭು, ಬಾಲಕೃಷ್ಣ ಗೌಡ, ಯೋಗೀರಾಜ್ ಜೈನ್, ಸಂತೋಷ್ ಕುಮಾರ್ ರೈ, ನಾಗರಾಜ ಗೌಡ, ಗಣಪತಿ ನಾಯಕ್, ವಿಶ್ವಾಸ್ ಶೆಣೈ, ಕೇಶವ ಶೆಣೈ, ಪ್ರಶಾಂತ್ ಶೆಣೈ, ಪ್ರಕಾಶ್ ಘಾಟೆ, ಪ್ರತಾಪ ಸಿಂಹವರ್ಮ ಅವರಿಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಅವರು ಗೌರವಿಸಿದರು. ದೇವಳದ ಪ್ರಧಾನ ಅರ್ಚಕರು ದಾನಿಗಳಿಗೆ ಪ್ರಸಾದ ನೀಡಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹಾಬಲ ರೈ ವಳತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here