ಪಟ್ಟೆ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳಲ್ಲಿ ಬೀಳ್ಕೊಡುವ ಸಮಾರಂಭ ಹಾಗೂ ಸಮುದಾಯದತ್ತ ಸಭೆ

0

ಬಡಗನ್ನೂರು : “ಪರೀಕ್ಷೆ ಎಂದರೆ ಯಾವುದೇ ತಯಾರಿ ಇರಬಾರದು, ಕಲಿಯುವ ಪ್ರಕ್ರಿಯೆ ನಿರಂತರವಾಗಿರಬೇಕು, ಪರೀಕ್ಷೆ ದೈನಂದಿನ ಚಟುವಟಿಕೆ, ನಿರಂತರ ಪಯಣ ನಿಮ್ಮದಾಗಲಿ” ಎಂದು ಪಟ್ಟೆ ವಿದ್ಯಾ ಸಂಸ್ಥೆಯ ಅಧ್ಯಕ್ಷ  ಗೋಪಾಲಕೃಷ್ಣ ಭಟ್ ರವರು ಹೇಳಿದರು.

 ಅವರು  ಏ. 7 ರಂದು   ಪಟ್ಟೆ ವಿದ್ಯಾ ಸಂಸ್ಥೆಗಳಲ್ಲಿ ನಡೆದ 2025 -26 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಹಾಗೂ ಸಮುದಾಯದತ್ತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ  ಗಣರಾಜ ಕುಂಬ್ಳೆ ಅವರು ಸುಸಂಸ್ಕೃತ ಸಮಾಜವೇ ನಮ್ಮ ಧ್ಯೇಯ, ನಾವು ಕಲಿತ ಶಾಲೆ, ಗುರು ಹಿರಿಯರನ್ನು, ತಂದೆ-ತಾಯಿಯವರನ್ನು ಎಂದಿಗೂ ಮರೆಯಬಾರದೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತನಾಡಿದರು.

 ಕಾರ್ಯಕ್ರಮದಲ್ಲಿ 9ನೇ ತರಗತಿಯ ಯಶ್ವಿತ್ ಮತ್ತು ಜೀವಿತಾ ಹೆಚ್, 10ನೇ ತರಗತಿಯ ಧನ್ವಿತ್ ಗೌಡ ಕೆ ಪಿ. ತೃತಿಕ್ , ಪೂರ್ವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿಜ್ಞಾನ ಶಿಕ್ಷಕಿ   ಭವಿತಾ , ಕನ್ನಡ ಶಿಕ್ಷಕ ವಿಶ್ವನಾಥ ಬಿ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ  ಮುಖ್ಯ ಅತಿಥಿಯಾಗಿ ಸಂಸ್ಥೆಯ ನಿರ್ದೇಶಕ   ಜಿ ಪರಮೇಶ್ವರ್ ಭಟ್, ಸಂಚಾಲಕ ವಿಘ್ನೇಶ್ ಹಿರಣ್ಯ, ಪ್ರೌಢಶಾಲಾ ಎಸ್. ಡಿ. ಯಂ. ಸಿ  ಅಧ್ಯಕ್ಷ  ಲಿಂಗಪ್ಪಗೌಡ ಮೋಡಿಕೆ, ಪ್ರಾಥಮಿಕ ಶಾಲಾ  ಎಸ್. ಡಿ. ಯಂ. ಸಿ ಅಧ್ಯಕ್ಷ   ಕೇಶವ ಪ್ರಸಾದ್ ನೀಲಗಿರಿ, ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷ ಸತೀಶ್ ಕೊಪ್ಪಳ, ಪ್ರೌಢಶಾಲಾ ಮುಖ್ಯಗುರು  ಸುಮನಾ ಬಿ  ಪ್ರಾಥಮಿಕ ಶಾಲಾ ಮುಖ್ಯ ಗುರು  ರಾಜಗೋಪಾಲ ಯನ್ ಉಪಸ್ಥಿತರಿದ್ದರು.

 9ನೇ ತರಗತಿಯ ವಿಧ್ಯಾರ್ಥಿಗಳಾದ ಶ್ರಾವ್ಯ ಸ್ವಾಗತಿಸಿ, ನಿಶಾಂತ್ ವಂದಿಸಿದರು. 9ನೇ ತರಗತಿಯ ಯಶ್ವಿತಾ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಶಿಕ್ಷಕ ವೃಂದದವರು ಅಕ್ಷರದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here