ಪುತ್ತೂರು ಜಾತ್ರೆಯಲ್ಲಿ ತೊಂದರೆ ಕೊಡುವವರ ವಿರುದ್ಧ ಕ್ರಮ : ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಡಿವೈಎಸ್ಪಿ ಭರವಸೆ

0

ಪುತ್ತೂರು:ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ ಏ.10ರಿಂದ ಆರಂಭಗೊಳ್ಳಲಿದೆ.ಶ್ರೀ ದೇವರ ಉತ್ಸವ ಸಂದರ್ಭದಲ್ಲಿ ಯಾರಾದರೂ ತೊಂದರೆ ಕೊಡುವುದರ ಕುರಿತು ಮಾಹಿತಿ ದೊರೆತಲ್ಲಿ ಮುಂಜಾಗ್ರತೆ ಕ್ರಮವಾಗಿ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪುತ್ತೂರು ಡಿವೈಎಸ್ಪಿ ಪ್ರಮೋದ್ ಕುಮಾರ್ ಬಿ ಅವರು ಎಚ್ಚರಿಸಿದ್ದಾರೆ.


ಏ.10ರಂದು ಜಾತ್ರೆಗೆ ಧ್ವಜಾರೋಹಣ ನಡೆಯಲಿದೆ.ಬಳಿಕ ರಾತ್ರಿ ದೇವರ ಪೇಟೆ ಸವಾರಿ ನಡೆಯಲಿದೆ.ಈ ವೇಳೆ ಯಾವುದೇ ತೊಂದರೆ ಆಗಬಾರದು ಮತ್ತು ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗೆ ಕಾರಣಕರ್ತರಾದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ವಿನಂತಿಸಿದರು.

ಉತ್ತರಿಸಿದ ಡಿವೈಎಸ್ಪಿ ಅವರು ಈ ಕುರಿತು ಪೊಲೀಸ್ ಬಂದೋಬಸ್ತ್ ನೀಡಲಾಗುವುದು ಎಂದರು.ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಸುಭಾಶ್ ರೈ, ಉದ್ಯಮಿ ಶಿವಪ್ರಸಾದ್ ಕಿನಾರ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಸಂತೋಷ್ ಕುಮಾರ್, ಉದ್ಯಮಿ ಶಶಾಂಕ ಕೊಟೇಚಾ, ಲ್ಯಾನ್ಸಿ ಮಸ್ಕರೇನಸ್, ಅಬೂಬಕ್ಕರ್ ಸಿದ್ದಿಕ್, ವಿವಿಧ ಮಸೀದಿಗಳ ಅಧ್ಯಕ್ಷರು ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here