






ಪುತ್ತೂರು : ದಕ್ಷಿಣ ಕನ್ನಡ ಬೆಳೆಗಾರರ ಸಾವಯವ ಸಂಯುಕ್ತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಇದರ ವಿಟ್ಲ ಶಾಖೆಯ ಉದ್ಘಾಟನಾ ಸಮಾರಂಭ ಎ.10ರಂದು ಬೆಳಿಗ್ಗೆ 11ಕ್ಕೆ ಪುತ್ತೂರು ರಸ್ತೆಯ ಖಾದರ್ ಕಾಂಪ್ಲೆಕ್ಸ್ ನ 1ನೇ ಮಹಡಿಯಲ್ಲಿ ನಡೆಯಲಿದೆ.


ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಲ್ವಿನ್ ಡೋಯಲ್ ನೊರೊನ್ಹಾ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ,
ರೆವೆ.ಫಾ, ಐವನ್ ಮೈನರ್ ರೋಡ್ರಿಗಸ್ (ಧರ್ಮಗುರುಗಳು, ಶೋಕಮಾತಾ ದೇವಾಲಯ, ವಿಟ್ಲ) ಕರುಣಾಕರ ನಾಯ್ತೊಟ್ಟು (ಅಧ್ಯಕ್ಷ, ಪಟ್ಟಣ ಪಂಚಾಯತ್, ವಿಟ್ಲ), ಡಾ. ಗೀತಾ ಪ್ರಕಾಶ್ (ಸುರಕ್ಷ ಹೆಲ್ತ್ ಸೆಂಟರ್, ವಿಟ್ಲ) ಎಮ್. ಎಸ್. ಮೊಹಮ್ಮದ್ ಹಾಜಿ (ಜಿಲ್ಲಾ ಪಂಚಾಯತ್ ಸದಸ್ಯರು), ಮನ್ಮಥ ಶೆಟ್ಟಿ (ಮಧ್ಯಸ್ಥರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು),ವಿ.ಎ. ರಶೀದ್ (ಉದ್ಯಮಿಗಳು, ಕಟ್ಟಡ ಮಾಲಿಕರು), ರಾಮಕೃಷ್ಣ (ಸೋಲಿಸ್ ಸಬ್ ಇನ್ಸ್ ಪೆಕ್ಟರ್, ವಿಟ್ಲ ಠಾಣೆ),ಶ್ರೀ ಕೃಷ್ಣ ಉಪಧ್ಯಾಯ (ಪುರೋಹಿತರು ಹಾಗೂ ಚಿಂತಕರು) ಭಾಗವಹಿಸಲಿದ್ದಾರೆ.













