






‘ಧ್ವಜಸ್ತಂಭದ ಕೆಳಗಡೆ ಪ್ರತಿಭಟನೆಯೆಂದಿಲ್ಲ, ತಂತ್ರಿಗಳ ಬಳಿ ನ್ಯಾಯ ಕೇಳುತ್ತೆನೆಂದಿದ್ದು’ – ಸಂತ್ರೆಸ್ತೆ ತಾಯಿ ಸ್ಪಷ್ಟನೆ



ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ವಂಚನೆಗೊಳಗಾದ ಸಂತ್ರಸ್ತೆ ತನ್ನ ಮಗು ಸಹಿತ, ಸಂತ್ರಸ್ತೆಯ ತಾಯಿ, ತಂದೆ, ತಂಗಿ ಹಾಗು ಜಿಲ್ಲಾ ವಿಶ್ವಕರ್ಮ ಸಮಾಜದ ಪ್ರಮುಖರು ಎ.9 ರಂದು ಬೆಳಿಗ್ಗೆ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನ್ಯಾಯಕ್ಕಾಗಿ ಮತ್ತು ಅನ್ಯಾಯ ಮಾಡಿದವರವನ್ನು ದೇವರೇ ನೋಡಿಕೊಳ್ಳಲಿ ಎಂದು ಅರ್ಚಕರ ಮೂಲಕ ಪ್ರಾರ್ಥನೆ ಸಲ್ಲಿಸಿದ್ದಾರೆ.




ಈ ಸಂದರ್ಭದಲ್ಲಿ ಮಾತನಾಡಿದ ಸಂತ್ರಸ್ಥೆ ತಾಯಿ ʼನಾವು ಧ್ವಜಸ್ತಂಭದ ಅಡಿಯಲ್ಲಿ ಪ್ರತಿಭಟನೆ ಮಾಡುತ್ತೇವೆಂದು ಅಪಪ್ರಚಾರ ಮಾಡಿದ್ದಾರೆ. ಆದರೆ ನಾವು ಪ್ರತಿಭಟನೆ ಮಾಡುತ್ತೇವೆಂದು ಹೇಳಿಲ್ಲ. ತಂತ್ರಿಗಳ ಬಳಿ ನ್ಯಾಯ ಕೇಳುತ್ತೇನೆಂದು ಹೇಳಿದ್ದೆವು. ಆದರೆ ನಮ್ಮ ಮೇಲೆ ಅಪಪ್ರಚಾರವಾಗಿದೆ. ಅದೇ ಮಗು ಡೆಲಿವರಿ ಆದ ಮರು ದಿನವೇ ಜಗನ್ನಿವಾಸ ರಾವ್ ಅವರು ದೇವಸ್ಥಾನಕ್ಕೆ ಬಂದರೆ ಅಪಚಾರ ಆಗುವುದಿಲ್ಲ. ನಾವು ಧ್ವಜಸ್ತಂಭದ ಅಡಿಯಲ್ಲಿ ಕೂತರೆ ಅದು ಅಪಪ್ರಚಾರ ಎಂದಾಗುತ್ತದೆ. ಹಾಗಾಗಿ ದೇವಳಕ್ಕೆ ಬಂದು ಪ್ರಾರ್ಥನೆ ಮಾಡಿದ್ದೇವೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಪ್ರಾರ್ಥನೆಯ ಬಳಿಕ ದೇವಳದ ಕೆರೆಯ ಬಳಿ ಕಟ್ಟೆಯ ಕಲಶ ಪೂಜೆ ಸಂದರ್ಭ ಉಪಸ್ಥಿತರಿದ್ದರು.










