ದ್ವಿತೀಯ ಪಿಯುಸಿ; ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿಗೆ ವಾಣಿಜ್ಯ ವಿಭಾಗದಲ್ಲಿ ಶೇ.100, ಕಲಾವಿಭಾಗದಲ್ಲಿ ಶೇ.96 ತೇರ್ಗಡೆ ಫಲಿತಾಂಶ

0

ನೆಲ್ಯಾಡಿ; ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿಯುಸಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಕಲಾ ಹಾಗೂ ವಾಣಿಜ್ಯ ವಿಭಾಗ ಹೊಂದಿರುವ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿಗೆ ಶೇ.98.30 ತೇರ್ಗಡೆ ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ ಶೇ.100 ಹಾಗೂ ಕಲಾವಿಭಾಗದಲ್ಲಿ ಶೇ.96.15 ಫಲಿತಾಂಶ ಲಭಿಸಿದೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 66 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ.100 ಫಲಿತಾಂಶ ಬಂದಿದೆ. 10 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ 87 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಓರ್ವ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಅನುಶ್ರೀ ಪಿ.ನಾಯರ್ 580, ಅಕ್ಷತಾ ಪಿ.ವಿ. 579, ಆಯಿಷತ್ ಫಾಹಿಮಾ 577, ಫಾತಿಮತ್ ಸಹಾನ563, ದೀಕ್ಷಾ 560, ಜಸ್ಟಿನ್ 556, ಆದಿತ್ಯನ್ ಎಸ್.ಪಿ. 555, ಲಿಖಿತಾ 534, ತನುಷ್ 524, ಇಶ್ರತ್ ರಂಸಿಯಾ 515 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 50 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು 96.15 ಶೇ.ಫಲಿತಾಂಶ ಬಂದಿದೆ. 4 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 11 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 3 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ರಶ್ಮಿತಾ 545, ಗೌಸಿಯಾ ಬಾನು 542, ಸಿಮ್ರಾನ್ ಬಾನು 526, ದೀಕ್ಷಿತ್ ಕೆ. 513 ಅಂಕ ಪಡೆದುಕೊಂಡು ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here