ಏ.21, 22: ನೆಲ್ಯಾಡಿ ಪಟ್ಟೆದಮೂಲೆ ಶ್ರೀದೇವಿ ನಿಲಯದಲ್ಲಿ ಹರಕೆಯ ಒತ್ತೆಕೋಲ, ದೈವಗಳ ನೇಮೋತ್ಸವ

0

ನೆಲ್ಯಾಡಿ: ನೆಲ್ಯಾಡಿ ಪಟ್ಟೆದಮೂಲೆ ಶ್ರೀದೇವಿ ನಿಲಯದಲ್ಲಿ ಹರಕೆಯ ಒತ್ತೆಕೋಲ, ಕಲ್ಲುರ್ಟಿ, ಧರ್ಮದೈವ ವರ್ಣಾರ ಪಂಜುರ್ಲಿ, ಚಾಮುಂಡಿ ಹಾಗೂ ಗುಳಿಗ ದೈವಗಳಿಗೆ ನೇಮೋತ್ಸವ ಏ.21 ಮತ್ತು 22ರಂದು ನಡೆಯಲಿದೆ ಎಂದು ಪಟ್ಟೆದಮೂಲೆ ಶ್ರೀದೇವಿ ನಿಲಯದ ಶಿವಣ್ಣ ಪಿ.ಹೆಗ್ಡೆ ಅವರು ತಿಳಿಸಿದ್ದಾರೆ.

ಏ.21ರಂದು ಸಂಜೆ 3ಕ್ಕೆ ಕಲ್ಲಪಣೆ ತರವಾಡು ಮನೆಯಿಂದ ಭಂಡಾರ ತರುವುದು, ಸಂಜೆ 5ಕ್ಕೆ ನೆಲ್ಯಾಡಿ ಪೇಟೆಯಿಂದ ಪಟ್ಟೆದಮೂಲೆ ಶ್ರೀದೇವಿ ನಿಲಯದ ವರೆಗೆ ಕುಣಿತ ಭಜನೆಯೊಂದಿಗೆ ಭವ್ಯ ಮೆರವಣಿಗೆ, ಸಂಜೆ 6ಕ್ಕೆ ಮೇಲೇರಿಗೆ ಬೆಂಕಿ ಕೊಡುವುದು, ರಾತ್ರಿ 7ಕ್ಕೆ ಕಲ್ಲುರ್ಟಿ ದೈವದ ಕೋಲ, ರಾತ್ರಿ ೯ಕ್ಕೆ ಅನ್ನಸಂತರ್ಪಣೆ, ರಾತ್ರಿ 11ಕ್ಕೆ ಕುಳಿಚ್ಚಾಟು ನಡೆಯಲಿದೆ. ಏ.22ರಂದು ಬೆಳಗ್ಗೆ 1ಕ್ಕೆ ಮೊಡ ಚಾಮುಂಡಿ ಮತ್ತು ಪಡಿಂಞರ್ ಚಾಮುಂಡಿ ದೈವಗಳ ಕೋಲ, ಬೆಳಗ್ಗೆ 3ಕ್ಕೆ ಚಾಮುಂಡಿ ಗುಳಿಗ ಮತ್ತು ಪರ್ದಾಳಿ ಗುಳಿಗ ದೈವಗಳ ಕೋಲ, ಬೆಳಗ್ಗೆ 4.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಧರ್ಮದೈವ ವರ್ಣಾರ ಪಂಜುರ್ಲಿ ದೈವದ ಕೋಲ, ಬೆಳಗ್ಗೆ 7ಕ್ಕೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here