







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಅನ್ನು ಈ ಭಾರಿ ಅತಿ ದೊಡ್ಡ ಮೊತ್ತಕ್ಕೆ ಹರಾಜು ಮೂಲಕ ಪಡೆದಿರುವ ನವೀನ್ ಚಂದ್ರ ನಾೖಕ್ ಅವರನ್ನು ದೇವಳದಿಂದ ಗೌರವ ಪ್ರಸಾದ ನೀಡಿ ಗೌರವಿಸಲಾಯಿತು.


ಈ ಭಾರಿ ಅಮ್ಯೂಸ್‌ಮೆಂಟ್ ಪಾರ್ಕ್ ಅನ್ನು ನವೀನ್‌ಚಂದ್ರ ನಾೖಕ್ ಅವರು ರೂ.66 ಲಕ್ಷಕ್ಕೆ ಹರಾಜು ಮೂಲಕ ಪಡೆದಿದ್ದರು. ಈ ಮೊತ್ತವನ್ನು ದೇವಳಕ್ಕೆ ಸಮಯಕ್ಕೆ ಸರಿಯಾಗಿ ಪಾವತಿಸಿದ ಹಿನ್ನೆಲೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ದೇವಳದ ಗೌರವಾರ್ಥ ಶಲ್ಯ ತೊಡಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಸಾದ ವಿತರಿಸಿದರು. ಈ ಸಂದರ್ಭ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ನವೀನ್‌ಚಂದ್ರ ನಾೖಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.













