







ಪುತ್ತೂರು : ಸುವರ್ಣ ಕುಟುಂಬ ತರವಾಡು ಓಲಾಡಿನಲ್ಲಿ ಏ.21ರಿಂದ ಏ.25ವರೆಗೆ ಕುಕ್ಕೇ ಶ್ರೀ ಸುಬ್ರಹ್ಮಣ್ಯದ ಪರ್ವತಮುಖ ವೇದ ಮೂರ್ತಿ ಶ್ರೀ ರಘುರಾಮ ಅಮ್ಮಣ್ಣಾಯರ ನೇತೃತ್ವದಲ್ಲಿ ಧರ್ಮದೈವ ಜುಮಾದಿ, ಜುಮಾದಿ ಬಂಟ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ತರವಾಡು ಮನೆಯ ಗೃಹಪ್ರವೇಶ ಹಾಗೂ ನೇಮೋತ್ಸವವು ನಡೆಯಲಿದೆ.


ಕಾರ್ಯಕ್ರಮಗಳು
ಏ.21ರಂದು ಸಂಜೆ ಗಂಟೆ 5.00ಕ್ಕೆ : ತಂತ್ರಿಗಳ ಆಗಮನ, ಪೂರ್ಣ ಕುಂಭ ಸ್ವಾಗತ,ಸಾಯಂಕಾಲ ಗಂಟೆ 6.00ರಿಂದ : ದೇವತಾ ಪ್ರಾರ್ಥನೆ, ಸ್ಥಳ ಶುದ್ದಿ, ಪ್ರಸಾದ ಶುದ್ದಿ, ಸಪ್ತಶುದ್ದಿ, ವಾಸ್ತು ಪೂಜೆ, ವಾಸ್ತು ರಕ್ಷೆಘ್ನ ಹೋಮ, ಬಿಂಬ ಶುದ್ದಿ-ಬಿಂಬಾದಿವಾಸ, ವಾಸ್ತು ಬಲಿ, ಪ್ರಕಾರ ಬಲಿ, ಮಹಾಪೂಜೆ, ಅನ್ನ ಸಂತರ್ಪಣೆ.
ಏ.22ರಂದು ಪ್ರಾಥಃಕಾಲ ,ಮಹಾಗಣಪತಿ ಹೋಮ,ಬೆಳಿಗ್ಗೆ ಗಂಟೆ 9.00ರಿಂದ : ಭಜನಾ ಕಾರ್ಯಕ್ರಮ,ಬೆಳಿಗ್ಗೆ 11.20ರ ನಂತರ ಮಿಥುನ ಲಗ್ನದಲ್ಲಿ ಗೃಹಪ್ರವೇಷ, ಮುಡಿಪು ಸೇವೆ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ.ಸಾಯಂಕಾಲ ಗಂಟೆ 6.00ರಿಂದ : ಸ್ಥಳಶುದ್ದಿ, ಸಪ್ತಶುದ್ದಿ, ದೇವತಾ ಪ್ರಾರ್ಥನೆ, ವಾಸ್ತುರಕ್ಷೆಘ್ನ ಹೋಮ, ವಾಸ್ತು ಬಲಿ, ಬಿಂಬ ಶುದ್ದಿ, ಬಿಂಬಾದಿವಾಸ, ಪ್ರಾಕಾರ ಬಲಿ, ಅನ್ನಸಂತರ್ಪಣೆ ನಡೆಯಲಿದೆ.



ಏ.23ರಂದು ಬೆಳಿಗ್ಗೆ ಗಂಟೆ 6.00ರಿಂದ : ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶ ಪೂಜೆ,ಬೆಳಿಗ್ಗೆ 8.02ರ ವೃಷಭ ಲಗ್ನ ಶುಭ ಮುಹೂರ್ತದಲ್ಲಿ ಧರ್ಮದೈವ ಜುಮಾದಿ, ಜುಮಾದಿ ಬಂಟ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ, ಕಲ್ಲಲ್ತಾಯ ಗುಳಿಗ, ಪುನಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಪ್ರಾರ್ಥನೆ, ಅನ್ನಸಂತರ್ಪಣೆ. ಸಂಜೆ ಗಂಟೆ 5.00 ಕ್ಕೆ : ದೈವಗಳ ಭಂಡಾರ ತೆಗೆದು ರಾತ್ರಿ ಗಂಟೆ 7.00ಕ್ಕೆ ಕಲ್ಲಲ್ತಾಯ ಗುಳಿಗ ನೇಮ,ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 9.30ಕ್ಕೆ : ವರ್ಣಾರ, ಪಂಜುರ್ಲಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ ನೇಮ ನಡೆಯಲಿದೆ.
ಏ.24ರಂದು ಪ್ರಾತಃ ಕಾಲ : ಧರ್ಮದೈವ ಜುಮಾದಿ, ಜುಮಾದಿ ಬಂಟ ದೈವದ ನೇಮ,ಮಧ್ಯಾಹ್ನ 1.00ಕ್ಕೆ : ಅನ್ನಸಂತರ್ಪಣೆ,ಏ.25ರಂದು ದೈವಗಳಿಗೆ ತಂಬಿಲ ನಡೆಯಲಿದೆ.










