“ಲುಡೋ” ಅಪರಾಧದ ಕರಾಳ ನೆರಳಿನಲ್ಲಿ ಅರಳಿದ ಮೂಕ ಪ್ರೇಮಕಥೆ-ನಾಳೆ ತೆರೆಗೆ

0

ಕನ್ನಡ ಚಿತ್ರರಂಗದಲ್ಲಿ ಹೊಸತನದ ಕಥಾಹಂದರವನ್ನು ಹುಡುಕುತ್ತಿರುವ ಪ್ರೇಕ್ಷಕರಿಗಾಗಿ, ವಿಭಿನ್ನ ಹೈಪರ್‌ಲಿಂಕ್ ನಿರೂಪಣಾ ಶೈಲಿಯ “ಲುಡೋ” ಚಿತ್ರ ನಾಳೆ ಏ.24ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಹೈಪರ್‌ಲಿಂಕ್ ಶೈಲಿಯಲ್ಲಿ ಸಾಗುವ ಈ ಚಿತ್ರ ಕೇವಲ ಕ್ರೈಮ್ ಥ್ರಿಲ್ಲರ್ ಮಾತ್ರವಲ್ಲ, ಅದರ ಆಳದಲ್ಲಿ ಒಂದು ಹೇಳದ ಪ್ರೇಮಕಥೆಯೂ ಅಡಗಿದೆ. ಜೀವನದ ಅನಿರೀಕ್ಷಿತ ತಿರುವುಗಳು, ಸಣ್ಣ ನಿರ್ಧಾರಗಳು ಬದುಕಿನ ಮೇಲೆ ಬೀರುವ ಭಾರಿ ಪರಿಣಾಮಗಳನ್ನು ಇಲ್ಲಿ ಅತ್ಯಂತ ಸಹಜವಾಗಿ ಮತ್ತು ಭಾವನಾತ್ಮಕವಾಗಿ ತೆರೆದಿಡಲಾಗಿದೆ.

  • ಡಿ. ಯೋಗರಾಜ್ ನಿರ್ದೇಶನದಲ್ಲಿ ಬೆಂಗಳೂರಿನ ಹೆಸರಾಂತ ‘ನೀಲಕಂಠ ಫಿಲ್ಮ್ ಸ್ಟುಡಿಯೋಸ್’ನ ಛಾಯಾಗ್ರಹಣ, ಸಂಕಲನ ಮತ್ತು ಕಲರ್ ಗ್ರೇಡಿಂಗ್ ನಿರ್ವಹಿಸಲ್ಪಟ್ಟಿದ್ದು ಇದು ಚಿತ್ರಕ್ಕೆ ಅತ್ಯುತ್ತಮ ದೃಶ್ಯ ವೈಭವವನ್ನು ಒದಗಿಸಿದೆ. ಚಿತ್ರದ ಭಾವನೆಗಳಿಗೆ ಜೀವ ತುಂಬುವ ಹಿನ್ನೆಲೆ ಸಂಗೀತವನ್ನು ರಾಜ್ ಭಾಸ್ಕರ್ ಸಂಯೋಜಿಸಿದ್ದಾರೆ.


  • ಚಿತ್ರದ ಬಹುಭಾಗವನ್ನು ಮಂಗಳೂರು, ಕಾಸರಗೋಡು ಮತ್ತು ಬೆಂಗಳೂರಿನ ನೈಜ ಪರಿಸರದಲ್ಲಿ ಚಿತ್ರೀಕರಿಸಲಾಗಿದೆ. ಕರಾವಳಿಯ ಬೀದಿ ಜೀವನ, ಪ್ರಾದೇಶಿಕ ಸಂಸ್ಕೃತಿ ಮತ್ತು ನೈಸರ್ಗಿಕ ಪರಿಸರವನ್ನು ಯಾವುದೇ ಕೃತಕತೆಯಿಲ್ಲದೆ ತೆರೆಗೆ ತರಲಾಗಿದೆ.
  • ಮುಖ್ಯ ಪಾತ್ರಗಳಲ್ಲಿ ಶರಣ್ ರಾಜ್ ಕಾಸರಗೋಡು, ಜೀವಿತಾ ಪ್ರಭಾಕರ್ ಮತ್ತು ಆರ್ಯನ್ ಅಭಿನಯಿಸಿದ್ದಾರೆ. ಲಕ್ಷ್ಮೀಶ್ ಸುವರ್ಣ, ಪವನ್ ಬಂಗೇರ, ಬೋಜರಾಜ್ ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ಶಿವರಾಜ್, ಅಶೋಕ್, ಮಂಜುಳಾ, ಪ್ರದೀಪ್ ಪೆರಿಯಲ್, ದೀಕ್ಷಿತ್ ಪೂಜಾರಿ, ಯಶು ಪೂಜಾರಿ, ಶಂಕರ್ ಶೆಟ್ಟಿ ಪಚ್ಚನಾಡಿ, ಹರಿಣಿ ಕುಳಾಲ್, ಅಶೋಕ್ ಬೈಲೂರು, ಗಣೇಶ್ ಕೆವಿ ಮತ್ತು ಸಚಿನ್ ದಾಸ್ ಈ ಚಿತ್ರದಲ್ಲಿ ಅಭಿನಯಿಸಿದ್ದು, ಡೈಜಿ ವಲ್ಡ್‌ ನ ವಾಲ್ಟರ್ ನಂದಳಿಕೆ, ಮಾಜಿ ಶಾಸಕ ಮೊಯ್ದೀನ್ ಬಾವಾ ಮತ್ತು ಇಸ್ಮಾಯಿಲ್ ಮೂಡುಶೆಡ್ಡೆ ವಿಶೇಷ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

  • “ಲುಡೋ ಕೇವಲ ಒಂದು ಕ್ರೈಮ್ ಕಥೆಯಲ್ಲ, ಇದು ನಮ್ಮ ದೈನಂದಿನ ಬದುಕಿನ ಅನಿಶ್ಚಿತತೆಯ ಒಂದು ಸಣ್ಣ ಪ್ರತಿಬಿಂಬ.”

ಚಿತ್ರದ ಟ್ರೈಲರ್ ಈಗಾಗಲೇ DYOGARAJ Page ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವಿಭಿನ್ನ ಪ್ರಯೋಗಕ್ಕೆ ಕರಾವಳಿಯ ಹಾಗೂ ರಾಜ್ಯದ ಸಮಸ್ತ ಪ್ರೇಕ್ಷಕರ ಸಹಕಾರವನ್ನು ಚಿತ್ರತಂಡ ಬಯಸಿದ್ದು, ಏಪ್ರಿಲ್ 24ರಿಂದ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ “ಲುಡೋ” ವೀಕ್ಷಿಸಬಹುದಾಗಿದೆ.

LEAVE A REPLY

Please enter your comment!
Please enter your name here