






ಹಿಂದೂ ಧರ್ಮ ಉಳಿಯಬೇಕಾದರೆ ಜಿಹಾದ್ ನಾಶವಾಗಬೇಕು: ಕೃಷ್ಣ ಪ್ರಸನ್ನ


ಪುತ್ತೂರು: ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಿರುವ ಲವ್ ಜಿಹಾದ್ ಹಾಗೂ ನಾಸಿಕ್ನ ಪ್ರತಿಷ್ಠಿತ ಟಿಸಿಎಸ್ ಕಂಪನಿಯಲ್ಲಿ ಬೆಳಕಿಗೆ ಬಂದ ಕಾರ್ಪೋರೇಟ್ ಜಿಹಾದ್ ಖಂಡಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಜಿಲ್ಲಾ ಘಟಕ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳಿಂದ ದರ್ಬೆ ವೃತ್ತದಲ್ಲಿ ಏ.24 ರಂದು ಪ್ರತಿಭಟನೆ ನಡೆಯಿತು.



ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ, ಭಾರತದಲ್ಲಿ 1200 ವರ್ಷಗಳಿಂದ ಹಿಂದೂ ಸಮಾಜ ಮತ್ತು ಸಂಸ್ಕೃತಿಯ ಮೇಲೆ ದಬ್ಬಾಳಿಕೆ ನಡೆಯುತ್ತಿದೆಯಾದರೂ, ಹಿಂದೂ ಸಮಾಜ ಸವಾಲುಗಳನ್ನು ಎದುರಿಸುತ್ತಾ ಬಲಿಷ್ಠವಾಗಿ ಉಳಿದಿದೆ ಎಂದು ಹೇಳಿದರು.
ಕಳೆದ ದಶಕದಿಂದ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಅನೇಕ ನಿದರ್ಶನಗಳಿದ್ದರೂ ಅದನ್ನು ಸುಳ್ಳು ಆರೋಪ ಎಂದು ಬಿಂಬಿಸುವ ಪ್ರಯತ್ನ ಬುದ್ಧಿಜೀವಿಗಳು ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ರತನ್ ಟಾಟಾ ಅವರಿಗೆ ವಿಶ್ವ ಮಟ್ಟದಲ್ಲಿ ಇದ್ದ ಹೆಸರಿನಂತೆಯೇ ಟಿಸಿಎಸ್ಗೂ ಗೌರವವಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಜಿಹಾದಿ ಮನೋಭಾವದವರು ಕಂಪನಿಯ ಹೆಸರು ಕೆಡಿಸುತ್ತಿದ್ದಾರೆ. 2020ರಿಂದ ಸಂಸ್ಥೆಯೊಳಗೆ ಲವ್ ಜಿಹಾದ್ ಚಟುವಟಿಕೆಗಳು ಆರಂಭವಾಗಿವೆ ಎಂಬ ಮಾಹಿತಿ ಹೊರಬಂದಿದೆ. ಹಿಂದೂ ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ದೌರ್ಜನ್ಯ, ಗೋಮಾಂಸ ಸೇವನೆಗೆ ಒತ್ತಾಯ, ಮತಾಂತರಕ್ಕೆ ಕುಮ್ಮಕ್ಕು, ಹಿಂದೂ ದೇವತೆಗಳ ಅವಮಾನ ಸೇರಿದಂತೆ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಈ ಕೃತ್ಯಗಳಲ್ಲಿ ಉನ್ನತ ಅಽಕಾರಿಗಳೂ ಭಾಗಿಯಾಗಿರುವುದು ಆಘಾತಕಾರಿ ಎಂದರಲ್ಲದೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಾಗಬಹುದು. ಎಂದು ಹೇಳಿದರು.
ಲೆನ್ಸ್ ಕಾರ್ಟ್ನಲ್ಲೂ ಜಿಹಾದಿ ನಿಯಮಗಳನ್ನು ಜಾರಿಗೆ ತರಲು ಮುಂದಾಗಿರುವುದು ಕಳವಳಕಾರಿಯಾಗಿದೆ. ಭಾರತದಲ್ಲಿ ಹಿಂದೂಗಳ ಆಚರಣೆ ಪಾಲನೆಗೂ ಅವಕಾಶವಿಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದಾದರೆ, ಇದು ಜಾತ್ಯಾತೀತ ರಾಷ್ಟ್ರವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಶೇ.80 ಹಿಂದೂಗಳಿರುವ ಭಾರತದಲ್ಲೇ ಹೋರಾಟದ ಪರಿಸ್ಥಿತಿ ಎದುರಾದರೆ, ಬಾಂಗ್ಲಾದೇಶದ ಹಿಂದೂಗಳ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿ ಎಂದವರು ಹೇಳಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಮುರುಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ನಾಸಿಕ್ ಟಿಸಿಎಸ್ ಪ್ರಕರಣ ಗಂಭೀರ ಹಾಗೂ ನೋವಿನ ಸಂಗತಿಯಾಗಿದೆ. ಹಿಂದೂ ಹೆಣ್ಣುಮಕ್ಕಳ ಮತಾಂತರಕ್ಕೆ ಹುನ್ನಾರ ನಡೆದಿದೆ ಎಂಬ ಆರೋಪ ತನಿಖೆಯಲ್ಲಿ ದೃಢಪಟ್ಟಿದ್ದು, ಆರೋಪಿಗಳ ಬಂಧನವೂ ನಡೆದಿದೆ. ಮಹಿಳಾ ಹೆಚ್ಆರ್ ನಿಧಾ ಖಾನ್ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ಮಾಹಿತಿ ತನಿಖೆಯಲ್ಲಿ ಬಹಿರಂಗವಾಗಿದೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಎನ್ಐಎ ಬಂಧಿಸಿರುವ ಉಗ್ರರೊಂದಿಗೆ ಆಕೆಗೆ ಸಂಬಂಧವಿದೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.
ಕರಾವಳಿಯ ಮಾಜಿ ಶಾಸಕರ ಪುತ್ರನೊಬ್ಬ ಹಿಂದೂ ಮಹಿಳೆಯನ್ನು ಮದುವೆಯಾಗಿ ಬಳಿಕ ಕಾಶ್ಮೀರಕ್ಕೆ ಕಳುಹಿಸಿ, ಆಕೆ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾಳೆ ಎಂದು ಉಲ್ಲೇಖಿಸಿದ ಹಸಂತಡ್ಕ ಕೇರಳ ಹೈಕೋರ್ಟ್ ಕೂಡ ಲವ್ ಜಿಹಾದ್ ಕುರಿತು ಕಳವಳ ವ್ಯಕ್ತಪಡಿಸಿದೆ ಎಂದು ಹೇಳಿ, ಹಿಂದೂಗಳು ಎಚ್ಚರಿಕೆಯಿಂದ ಇರಬೇಕೆಂದು ಕರೆ ನೀಡಿದರು.
ಹಿರಿಯ ವೈದ್ಯ ಡಾ. ಎಂ.ಕೆ. ಪ್ರಸಾದ್, ಪುತ್ತೂರು ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪೋಷಕರು ಮಕ್ಕಳಲ್ಲಿ ಜಾಗೃತಿ ಮೂಡಿಸಿ
ಮುಂಬೈ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿನ ಕಂಪನಿಗಳು, ಶಿಕ್ಷಣ ಸಂಸ್ಥೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಕ್ಷೇತ್ರಗಳಲ್ಲಿ ವ್ಯವಸ್ಥಿತ ಲವ್ ಜಿಹಾದ್ ಪ್ರಕರಣಗಳು ನಡೆಯುತ್ತಿದ್ದು, ಪೋಷಕರು, ಹೆತ್ತವರು ತಮ್ಮ ಮಕ್ಕಳಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮುರಳಿಕೃಷ್ಣ ಹಸಂತ್ತಡ್ಕ ಹೇಳಿದರು.










