ಓಲಾಡಿ ಸುವರ್ಣ ಕುಟುಂಬ ತರವಾಡಿನಲ್ಲಿ ಧರ್ಮ ದೈವ ಜುಮಾದಿ, ಜುಮಾದಿ ಬಂಟ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಗೃಹಪ್ರವೇಶ, ನೇಮೋತ್ಸವ

0

ಪುತ್ತೂರು: ಶಾಂತಿಗೋಡು ಗ್ರಾಮದ ಸುವರ್ಣ ಕುಟುಂಬ ತರವಾಡು ಓಲಾಡಿನಲ್ಲಿ ಏ.21ರಿಂದ ಏ.25ವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯದ ಪರ್ವತಮುಖ ವೇದ ಮೂರ್ತಿ ರಘುರಾಮ ಅಮ್ಮಣ್ಣಾಯರ ನೇತೃತ್ವದಲ್ಲಿ ಧರ್ಮದೈವ ಜುಮಾದಿ, ಜುಮಾದಿ ಬಂಟ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ , ತರವಾಡು ಮನೆಯ ಗೃಹಪ್ರವೇಶ ಹಾಗೂ ನೇಮೋತ್ಸವವು ವಿಜೃಂಭಣೆಯಿಂದ ನಡೆಯಿತು.


ಏ.೨೨ರಂದು ಪ್ರಾತಃಕಾಲ ಮಹಾಗಣಪತಿ ಹೋಮ ನೆರವೇರಿತು. ಬಳಿಕ ಗಂಟೆ9 ರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಂಟೆ 11.20ರ ನಂತರ ಮಿಥುನ ಲಗ್ನದಲ್ಲಿ ಗೃಹಪ್ರವೇಶ , ಮುಡಿಪು ಸೇವೆ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು. ಸಾಯಂಕಾಲ ಗಂಟೆ 6 ರಿಂದ ಸ್ಥಳಶುದ್ದಿ, ಸಪ್ತಶುದ್ದಿ, ದೇವತಾ ಪ್ರಾರ್ಥನೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಬಿಂಬ ಶುದ್ದಿ, ಬಿಂಬಾಽವಾಸ, ಪ್ರಾಕಾರ ಬಲಿ ಬಳಿಕ ಪ್ರಸಾದ ವಿತರಣೆ ನಡೆದು, ತದನಂತರ ಅನ್ನಸಂತರ್ಪಣೆ ನಡೆಯಿತು.


ಏ.23ರಂದು ಬೆಳಿಗ್ಗೆ ಗಂಟೆ 6.00ರಿಂದ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶ ಪೂಜೆ, ಬೆಳಿಗ್ಗೆ 8.02ರ ವೃಷಭಲಗ್ನ ಶುಭ ಮುಹೂರ್ತದಲ್ಲಿ ಧರ್ಮದೈವ ಜುಮಾದಿ, ಜುಮಾದಿ ಬಂಟ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ, ಕಲ್ಲಲ್ತಾಯ ಗುಳಿಗ, ಪುನಃಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಪ್ರಾರ್ಥನೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಗಂಟೆ 5.00ಕ್ಕೆ ದೈವಗಳ ಭಂಡಾರ ತೆಗೆದು ರಾತ್ರಿ ಗಂಟೆ 7.00ಕ್ಕೆ ಕಲ್ಲಲ್ತಾಯ ಗುಳಿಗ ನೇಮ, ರಾತ್ರಿ ಗಂಟೆ 9.00ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 9.30ಕ್ಕೆ ವರ್ಣಾರ, ಪಂಜುರ್ಲಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ ನೇಮವೂ ನಡೆದವು. ಏ.24ರಂದು ಪ್ರಾತಃ ಕಾಲ ಧರ್ಮದೈವ ಜುಮಾದಿ, ಜುಮಾದಿ ಬಂಟ ದೈವದ ನೇಮ ನಡೆದು, ಮಧ್ಯಾಹ್ನ ಅನ್ನಸಂತರ್ಪಣೆ ನೆರವೇರಿತು.


ಈ ವೇಳೆ ಕುಟುಂಬದ ಯಜಮಾನ ನಾರಾಯಣ ಪೂಜಾರಿ ಓಲಾಡಿ , ಅಧ್ಯಕ್ಷ ಸಚ್ಚಿಂದ್ರ ಸುವರ್ಣ ಬೊಳಿಯಾಲ , ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ ಮತ್ತು ಖಜಾಂಚಿ ವಿನಯ ಕುಮಾರ್ ಬಿ ಸಹಿತ ಸುವರ್ಣ ಕುಟುಂಬ ಸೇವಾ ಟ್ರಸ್ಟ್ ಇದರ ಎಲ್ಲಾ ಸದಸ್ಯರು , ಕುಟುಂಬ ವರ್ಗದವರು ಹಾಗೂ ಭಕ್ತಾದಿಗಳು ಪಾಲ್ಗೊಂಡಿದ್ದರು.

ಇಂದು ತಂಬಿಲ ಸೇವೆ
ಏ.25ರಂದು ದೈವಗಳಿಗೆ ತಂಬಿಲ ನಡೆಯಲಿದೆಯೆಂದು ಸುವರ್ಣ ಕುಟುಂಬ ಓಲಾಡಿ ಸೇವಾ ಟ್ರಸ್ಟ್ ಇದರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here