ವಿಶ್ವ ಪಶುವೈದ್ಯಕೀಯ ದಿನ

0

ನಮ್ಮ ದೇಶದ ಒಂದು ಪುಟ್ಟ ಗ್ರಾಮದ ನಿಶ್ಯಬ್ದ ಬೆಳಗಿನ ಜಾವ ತನ್ನ ಮನೆಯ ಏಕೈಕ ಆರ್ಥಿಕ ಆಧಾರಸ್ತಂಭವಾಗಿರುವ ಹಸ ಅಸ್ಪಷ್ಟವಾಗಿದೆ ಎಂಬ ಆತಂಕದಲ್ಲಿ ಒಬ್ಬ ರೈತ ಕಾದಿದ್ದಾನೆ. ದೂರದ ಹಾದಿಗಳನ್ನು ದಾಟಿಕೊಂಡು ಪಶುವೈದ್ಯರು ಆಗಮಿಸುತ್ತಾರೆ. ಅವರು ಹನುವನ್ನು ಪರಿಶೀಲಿಸಿ, ಚಿಕಿತ್ಸೆ ನೀಡಿ ಆತಂತದಲ್ಲಿರುವ ರೈತನಿಗೆ ಧೈರ್ಯ ತುಂಬುತ್ತಾರೆ. ಸಂಜೆ ವೇಳೆಗೆ ಹನು ಚೇತರಿಸಿಕೊಳ್ಳಲು ಆರಂಭಿಸುತ್ತದೆ. ಅದರೊಂದಿಗೆ ರೈತನ ಬದುಕಿನ ಆಸೆಯ ಪುನಃ ಅರಳುತ್ತದೆ. ಇಂತಹ ಅನೇಕ ಕಥೆಗಳು ಪ್ರತಿದಿನ ವಿಶ್ವದಾದ್ಯಂತ ನಡೆಯುತ್ತಲೇ ಇದೆ. ಆದರೆ ಅವು ಸಾಮಾನ್ಯವಾಗಿ ಯಾರ ಗಮನಕ್ಕೆ ಬರುವುದಿಲ್ಲ. ಇದೇ ಪಶುವೈದ್ಯದ ಮೌನ ಸೇವೆಯ ಕಥೆ-ಪ್ರಾಣಿಗಳ ಆರೋಗ್ಯ, ಮಾನವ ಜೀವನ ಮತ್ತು ದೇಶದ ಅಭಿವೃದ್ಧಿಯ ನಡುವೆ ಸೇತುವೆಯಾಗಿರುವ ಮಹತ್ವದ ವೃತ್ತಿ ಅದುವೇ ಪಶುವೈದ್ಯ ವೃತ್ತಿ.


ಪ್ರತಿ ವರ್ಷ ಏಪ್ರಿಲ್ ತಿಂಗಳ ಕೊನೆಯ ಶನಿವಾರವನ್ನು ವಿಶ್ವ ಪಶುವೈದ್ಯಕೀಯ ದಿನವಾಗಿ ಆಚರಿಸಲಾಗುತ್ತದೆ. ವಿಶ್ವ ಪಶುವೈದ್ಯಕೀಯ ದಿನವು ಒಂದು ಅಗಾಧವಾದ ಹಿನ್ನೆಲೆಯನ್ನು ಹೊಂದಿದೆ. ಪಶುವೈದ್ಯಕೀಯ ವೃತ್ತಿಯ ಜಾಗತಿಕ ಸಂಘಟನೆಯಾದ ವರ್ಲ್ಡ್ ವೆಟರಿನರಿ ಅಸೋಸಿಯೇಷನ್ (WVA) 2000ನೇ ಇಸವಿಯಲ್ಲಿ ಪಶುವೈದ್ಯಕೀಯ ದಿನವನ್ನು ಆಚರಿಸಲು ನಿರ್ಧರಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ತಪ್ಪದೇ ಏಪ್ರಿಲ್ ತಿಂಗಳ ಕೊನೆಯ ಶನಿವಾರ ಪಶು ವೈದ್ಯಕೀಯ ದಿನವನ್ನು ಆಚರಿಸಲಾಗುತ್ತಿದೆ ಪ್ರಾಣಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಅದು ಮಾನವನ ಯೋಗಕ್ಷೇಮದ ಮೇಲೆ ಬೀರುವ ಆಳವಾದ ಪ್ರಭಾವವನ್ನು ಗುರುತಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ವಿಶೇಷವೆಂದರೆ, ಈ ದಿನವು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆಯ (OIE) ಸ್ಥಾಪನೆಯ ದಿನದೊಂದಿಗೆ ಹೊಂದಾಣಿಕೆಯಾಗುತ್ತದೆ .1863ರಲ್ಲಿ ಪ್ರೊಫೆಸರ್ ಜಾನ್ ಗ್ಯಾಮ್ಗೀ ಅವರು ಹ್ಯಾಂಬರ್ಗ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಪಶುವೈದ್ಯಕೀಯ ಕಾಂಗ್ರೆಸ್ ಸಭೆಯನ್ನು ಆಯೋಜಿಸುವ ಮೂಲಕ ಈ ಜಾಗತಿಕ ಸಹಯೋಗಕ್ಕೆ ನಾಂದಿ ಹಾಡಿದ್ದರು.


ಈ ವರ್ಷ ಅಂದರೆ 2026ರಲ್ಲಿ ಏಪ್ರಿಲ್ 25ರಂದು ದಿನವನ್ನು ಆಚರಿಸಲಾಗುತ್ತಿದೆ. ಬಹುಮಟ್ಟಿಗೆ ಗಮನಕ್ಕೆ ಬಾರದಿರುವ ಈ ವೃತ್ತಿಯ ಮಹತ್ವವನ್ನು ಈ ದಿನವು ನೆನಪಿಸುತ್ತದೆ ವಶುವೈದ್ಯರು ಕೇವಲ ಪ್ರಾಣಿಗಳ ವೈದ್ಯರು ಮಾತ್ರವಲ್ಲ, ಅವರು ಆಹಾರ ಸುರಕ್ಷತೆಗೆ ಗಮನಕೊಡುವವರು ಕಾಯುವವರು ಸಮುದಾಯ ಆರೋಗ್ಯದ ರಕ್ಷಕರು ಮತ್ತು ಆರ್ಥಿಕ ಸ್ಥಿರತೆಯ ಪ್ರಮುಖ ರೂವಾರಿಗಳು ಪ್ರತಿ ವರ್ಷ ಈ ದಿನವನ್ನು ಒಂದೊಂದು ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತದೆ 2026ರ ಘೋಷವಾಕ್ಯ “ಆಹಾರ ಮತ್ತು ಆರೋಗ್ಯದ ರಕ್ಷಕರು ಪಶುವೈದ್ಯರು” ಎಂಬುದು ನಮ್ಮ ಭಾರತದಂತಹ ದೇಶದಲ್ಲಿ ಇನ್ನಷ್ಟು ಅರ್ಥಪೂರ್ಣವಾಗಿದೆ. ಏಕೆಂದರೆ ಅಲ್ಲಿ ಮಾನವ ಮತ್ತು ಪ್ರಾಣಿಗಳ ಜೀವನ ಪರಸ್ಪರ ಒಬ್ಬರನ್ನೊಬ್ಬರು ಅವಲಂಬಿತವಾಗಿದ್ದಾರೆ.


ಭಾರತದಲ್ಲಿ ಪಶುನಂಗೋದನೆ ಎಂಬುದು ಕೇವಲ ಒಂದು ಕೃಷಿ ಉಪಕನಬಲ್ಲ ಅದು ಗ್ರಾಮೀಣ ಭಾರತದ ಜೀವನೋಪಾಯದ ಜೀವನಾಡಿ ವಿಶ್ವದಲ್ಲೇ ಅತಿ ದೊಡ್ಡ ಪಶುಸಂಪತ್ತನ್ನು ಹೊಂದಿರುವ ನಮ್ಮ ದೇಶದ ಕೃಷಿ ಕ್ಷೇತ್ರದ ಒಟ್ಟು ಮೌಲ್ಯವರ್ಧನೆಯಲ್ಲಿ (GVA) ವಶುಸಂಗೋಪನೆಯು ಶೇ. 10.21 ರಷ್ಟು ಪಾಲನ್ನು ಹೊಂದಿದೆ ಒಡ್ತಾರೆ ರಾಷ್ಟ್ರೀಯ ಆರ್ಥಿಕತೆಗೆ (GDP) ಸುಮಾರು ಶೇ. 3.5 ರಷ್ಟು ಕೊಡುಗೆ ನೀಡುವ ಮೂಲಕ ಈ ಕ್ಷೇತ್ರವು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಶುವೈದ್ಯರು ಕೇವಲ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಷ್ಟೇ ಅಲ್ಲ, ಅವರು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ನಿಂತಿದ್ದಾರೆ. ದೇಶದ ಕೋಟ್ಯಾಂತರ ರೈತ ಕುಟುಂಬಗಳಿಗೆ ಜೀವನೋಪಾಯ ಒದಗಿಸುತ್ತಿರುವ ಪಶುಸಂಗೋಪನೆಯು, ಕೃಷಿಕರಿಗೆ ಬೆಳ ವೈಫಲ್ಯದಂತಹ ಸಂಕಷ್ಟದ ಸಮಯದಲ್ಲಿ ಜೀವಂತ ಬ್ಯಾಂಕ್ ಅಥವಾ ಆರ್ಥಿಕ ವಿಮೆಯಂತೆ ಹಣಕಾಸಿನ ಭದ್ರತೆ ನೀಡುತ್ತದೆ.

ಪಶುವೈದ್ಯರ ಅನಿಯಮಿತ ಪರಿಶ್ರಮದ ಫಲವಾಗಿ ಇಂದು ಭಾರತವು ಜಾಗತಿಕ ಮಟ್ಟದಲ್ಲಿ ಹಾಲಿನ ಉತ್ಪಾದನೆಯಲ್ಲಿ ಪ್ರಥಮ 247.8 ಮಿಲಿಯನ್ ಟನ್) ಮೊಟ್ಟೆ ಉತ್ಪಾದನೆಯಲ್ಲಿ ದ್ವಿತೀಯ (149 .11 ಬಿಲಿಯನ್) ಮತ್ತು ಮಾಂಸ ಉತ್ಪಾದನೆಯಲ್ಲಿ ನಾಲ್ಕನೇ ಸ್ಥಾನವನ್ನು (10.50 ಮಿಲಿಯನ್‌ ಟನ್) ಹಾಲು, ಮಾಂಸ ಮತ್ತು ಮೊಟ್ಟೆಗಳಂತಹ ಉತ್ಪನ್ನಗಳು ಕೇವಲ ಜನರ ಪೌಷ್ಟಿಕತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಗ್ರಾಮೀಣ ಆರ್ಥಿಕತೆಯ ಆಧಾರ ಸ್ತಂಭಗಳಾಗಿವೆ. ಪಶುವೈದ್ಯರು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವ ಮೂಲಕ ಅವುಗಳ ಉತ್ಪಾದಕತೆಯನ್ನು ಹೆಚ್ಚಿಸುತ್ತಿದ್ದಾರೆ. ಇದರ ಮೂಲಕ ಲಕ್ಷಾಂತರ ರೈತ ಕುಟುಂಬಗಳಿಗೆ ನೇರ ಆರ್ಥಿಕ ಬೆಂಬಲ ನೀಡುತ್ತಾ, ಗ್ರಾಮೀಣ ಭಾರತದ ಆರ್ಥಿಕ ಸ್ಥಿರತೆಯನ್ನು ಕಾಪಾಡುವಲ್ಲಿ ಮೌನ ಕ್ರಾಂತಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ.


ಆದರೆ ಪಶುವೈದ್ಯರ ಪಾತ್ರ ಇಲ್ಲಿ ಇಷ್ಟಕ್ಕೆ ಕೊನೆಗೊಳ್ಳುವುದಿಲ್ಲ. ಇಂದಿನ ಜಗತ್ತಿನಲ್ಲಿ ಆನೇಕ ರೋಗಗಳು ಪ್ರಾಣಿಗಳಿಂದ ಮಾನವರಿಗೆ ಹರಡುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಪಶುವೈದ್ಯರು ಸಮುದಾಯ ಆರೋಗ್ಯದ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ ಮಾನವರಲ್ಲಿ ಕಾಣಿಸುವ ಹಲವಾರು ಸೋಂಕುಗಳು ಪ್ರಾಣಿಗಳಿಂದಲೇ ಉಂಟಾಗುತ್ತವೆ. ರೇಬಿನ್, ಪಕ್ಷಿ ಜ್ವರ ಮತ್ತು ಕ್ಷಯರೋಗ ಮುಂತಾದ ರೋಗಗಳ ನಿಯಂತ್ರಣದಲ್ಲಿ ಪಶುವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮನುಷ್ಕರಿಗೆ ಕಾಡುತ್ತಿರುವ ಹೊಸರೋಗಗಳಲ್ಲಿ ಪ್ರಾಣಿಮೂಲದ ಕಾಯಿಲೆಗಳೇ ಹೆಚ್ಚು (ಶೇ 600 ಕ್ಕೂ ಹೆಚ್ಚು) ಅದರಲ್ಲೂ ಶೇ 100 ರಷ್ಟು ವನ್ಯಜೀವಿಗಳಿಂದ ಮನುಷ್ಯರಿಗೆ ಬರುತ್ತಿದೆ. ಮುಂಚಿತವಾಗಿ ರೋಗಗಳನ್ನು ಗುರುತಿಸಿ ನಿಯಂತ್ರಿಸುವ ಮೂಲಕ ಮಾನವ ನಮುದಾಯವನ್ನು ದೊಡ್ಡ ಅನಾಹುತಗಳಿಂದ ರಕ್ಷಿಸುತ್ತಾರೆ. ಒನ್ ಹೆಲ್ತ್’ (ಏಕ ಆರೋಗ್ಯ) ಎಂಬ ಪರಿಕಲ್ಪನೆ-ಮಾನವ ಪ್ರಾಣಿ ಮತ್ತು ಪರಿಸರ ಆರೋಗ್ಯಗಳ ನಡುವಿನ ಸಂಬಂಧ ಈ ಕಾರ್ಯದ ಕೇಂದ್ರಬಿಂದು ಆಗಿದೆ ಎಲ್ಲರೂ ಒಗ್ಗಟ್ಟಿನಿಂದ ದುಡಿದು ಸಕಲಜೀವಿಗಳ ಅಂದರೆ ಪ್ರಾಣಿಗಳ ಪರಿಸರದ ಹಾಗೂ ಮಾನವರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.


ಭಾರತ ಅಭಿವೃದ್ಧಿಯತ್ತ ಸಾಗುತ್ತಿರುವಂತೆ ಪಶುವೈದ್ಯರ ಜಪಾಬ್ದಾರಿಗಳು ಸಹ ವಿಸ್ತಾರವಾಗುತ್ತಿವೆ. ಇಂದಿನ ಪಶುವೈದ್ಯರು ಸಂಶೋಧನೆ ಮತ್ತು ನವೀನತೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಪ್ರಯೋಗಾಲಯದಲ್ಲಿ ಲಸಿಕೆಗಳ ಅಭಿವೃದ್ಧಿ, ರೋಗಗಳ ಅಧ್ಯಯನ ಮತ್ತು ಪಶು ಆಹಾರ ಸುಧಾರಣೆ ಕುರಿತು ಸಂಶೋಧನೆ ಮಾಡುತ್ತಿದ್ದಾರೆ ಜೈವಿಕತಂತ್ರಜ್ಞಾನ, ಅಣುಜೀವಶಾಸ್ತ್ರ ಮತ್ತು ಔಷಧಶಾಸ್ತ್ರದಂತಹ ಕ್ಷೇತ್ರಗಳಲ್ಲಿ ನಡೆದಿರುವ ಪ್ರಗತಿಗಳು ಪಶುವೈದ್ಯ ವಿಜ್ಞಾನಕ್ಕೆ ಹೊಸ ಆಯಾಮಗಳನ್ನು ನೀಡಿವೆ. ಈ ಸಂಶೋಧನೆಗಳು ಕೇವಲ ಪ್ರಾಣಿಗಳಿಗಷ್ಟೇ ಅಲ್ಲ ಮಾನವ ಆರೋಗ್ಯಕ್ಕೂ ಮಹತ್ವದ ಕೊಡುಗೆ ನೀಡುತ್ತಿವೆ. ಆಹಾರ ಸುರಕ್ಷತೆ ಕ್ಷೇತ್ರದಲ್ಲೂ ಪಶುವೈದ್ಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನಮ್ಮ ಮನೆಗಳಿಗೆ ತಲುಪುವ ಪ್ರತಿಯೊಂದು ಹಾಲಿನ ಹನಿ, ಪ್ರತಿಯೊಂದು ಮೊಟ್ಟೆ ಮತ್ತು ಮಾಂಸದ ತುಂಡು ವಶುವೈದ್ಯರ ಪರಿಶೀಲನೆ ಹರಿವೀಕ್ಷಣೆಯ ಮೂಲಕವೇ ಹೊರ ಬರುತ್ತದೆ. ಆಹಾರವು ನುರಕ್ಷಿತವಾಗಿರಲು ಶುದ್ಧವಾಗಿರಲು ಮತ್ತು ಯಾವುದೇ ಹಾನಿಕಾರಕ ಅಂಶಗಳಿಂದ ಮುಕ್ತವಾಗಿರಲು ಅವರು ಮಹತ್ವದ ಪಾತ್ರವಹಿಸುತ್ತಾರೆ.


ಪಶುವೈದ್ಯಕೀಯ ವೃತ್ತಿಯಲ್ಲಿ ಕಠಿಣ ಸವಾಲುಗಳಿಗೆ ವೃತ್ತಿಯ ವಯಣ ಸುಲಭವಲ್ಲ.ಗ್ರಾಮೀಣ ಪ್ರದೇಶಗಳಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸಬೇಕಾಗಿದೆ. ನೋವಿನಿಂದ ಬಳಲುತ್ತಿರುವ ಮೂಕ ಪ್ರಾಣಿಗಳ ರೋಧನೆ. ರೈತರ ಆತಂಕ ದಿನವಿಡೀ ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಪಶುವೈದ್ಯರನ್ನು ಮಾನಸಿಕ ಒತ್ತಡದ ಬರುತಿಗೆ ಕನ್ನಡಿಯಾಗಿದೆ ಹಲವಾರು ಕಠಿಣ ಪರಿಸ್ಥಿತಿಯಲ್ಲಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಜಾನುವಾರುಗಳ ವನ್ಯಜೀವಿಗಳ ನಡುವಳಿಕೆಗೆ ಹೆಚ್ಚು ಗಮನ ಹರಿಸಬೇಕಾಗಿದೆ. ಈ ಸೇವೆಯಿಂದ ಸಿಗುವ ತೃಪ್ತಿ ಖುಷಿ ಅಷ್ಟಿಷ್ಟಲ್ಲ ಜಾನುವಾರು ವನ್ಯಜೀವಿಗಳ ಮೇಲೆ ಅಪಾರವಾದ ಪ್ರೀತಿ ಬೆಳೆಸುತ್ತದೆ. ಪ್ರಪಂಚವನ್ನೇ ಮರೆಯುವಂತೆ ಮಾಡುತ್ತೆ ಕಡೆಗೆ ಜೀವನವನ್ನು ಪಣವಾಗಿ ಇಟ್ಟಿರುವ ಎಷ್ಟೋ ನಿದರ್ಶನಗಳಿದೆ. ಇತ್ತೀಚೆಗೆ ಮೃಗಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಹಿಪಪಾಟಮಸ್ ದಾಳಿಯಿಂದ ಮೃತಪಟ್ಟ ಡಾ. ಸಮೀಕ್ಷಾ ರೆಡ್ಡಿ ಅವರ ಜೀವನವು ಈ ವೃತ್ತಿಯ ಮೇಲಿರುವ ಅಗಾಧವಾದ ಪ್ರೀತಿ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ.

ಪ್ರಾಣಿಗಳ ಸೇವೆಯೇ ಪರಮೋಚ್ಚ ಎಂಬ ಅವರ ಅಚಲವಾದ ನಿಷ್ಠೆ ಮತ್ತು ವೃತ್ತಿಯ ಕಡೆಗಿನ ಅವರ ಸಮರ್ಪಣಾ ಮನೋಭಾವವು ಮುಂದಿನ ಪೀಳಿಗೆಯ ಎಲ್ಲಾ ಪಶುವೈದ್ಯರಿಗೆ ದೊಡ್ಡ ಪ್ರೇರಣೆಯಾಗಿದೆ.ಇನ್ನೊಂದು ಪ್ರಮುಖ ಸವಾಲು ಎಂದರೆ ಅಂಟಿಬಯೋಟೆಕ್ ಉಳಿಗೆ ಅದವ ಪ್ರತಿರೋಧ (ಆಂಟಿಮೈಕ್ರೋಬಿಯಲ್ ರೆಸಿಸ್ಟೆನ್ಸ್). ಔಷದಿಗಳ ಎಲೆ ಮೀರಿದ ಬಳಕೆಯಿಂದ ಉಂಟಾಗುತ್ತಿರುವ ಈ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಪಶುವೈದ್ಯರ ಪಾತ್ರ ಅತ್ಯಂತ ಮುಖ್ಯವಾಗಿದೆ. ರೈತರಿಗೆ ಜಾಗೃತಿ ಮೂಡಿಸುವುದು, ಸರಿಯಾದ ಚಿಕಿತ್ಸೆ ವಿಧಾನಗಳನ್ನು ಅನುಸರಿಸುವುದು ಮತ್ತು ವರ್ಯಾಯ ಮಾರ್ಗಗಳನ್ನು ಪ್ರೋತ್ಸಾಹಿಸುವುದು ಅವರ ಕರ್ತವ್ಯವಾಗಿದೆ. ಹವಾಮಾನ ಬದಲಾವಣೆಯೂ ಸಹ ಪಶು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು, ಹೊಸ ಸವಾಲುಗಳನ್ನು ತಂದಿದೆ. ಇಷ್ಟೊಂದು ಸವಾಲುಗಳ ನಡುವೆಯೂ ವನುವೈದ್ಯ ವೃತ್ತಿಯಲ್ಲಿ ಅಪಾರ ಅವಕಾಶಗಳಿವೆ. ಕ್ಲಿನಿಕಲ್ ಸೇವೆಗಳು, ಸಂಶೋಧನೆ, ಶಿಕ್ಷಣ, ಸಾರ್ವಜನಿಕ ಆರೋಗ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಔವಧೋದ್ಯಮ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವೃತ್ತಿ ನಿರ್ಮಿಸಬಹುದು. ನಗರ ಪ್ರದೇಶಗಳಲ್ಲಿ ಸಾಕುಪ್ರಾಣಿಗಳ ಸಂಖ್ಯೆಯ ಹೆಚ್ಚಳವು ಹೊಸ ಅವಕಾಶಗಳನ್ನು ಸೃಷ್ಟಿಸಿದೆ.


ವಶುವೈದ್ಯ ವಿಜ್ಞಾನವು ಕೇವಲ ವೃತ್ತಿಯಲ್ಲ-ಇದು ಕರುಣೆಯ ಪ್ರಾಯೋಗಿಕ ಅಭಿವ್ಯಕ್ತಿಯಾಗಿದೆ. ಬಿಡಾಡಿ ಪ್ರಾಣಿಗಳ ಚಿಕಿತ್ಸೆಯಿಂದ ಹಿಡಿದು ಕಾಡುಜೀವಿಗಳ ರಕ್ಷಣೆಯವರೆಗೆ, ರೈತರ ಸಂಕಷ್ಟದಲ್ಲಿ ನೆರವಾಗುವವರೆಗೆ, ಪಶುವೈದ್ಯರು ಎಲ್ಲಾ ಜೀವಿಗಳಿಗೂ ಕರುಣೆ ತೋರಿಸುತ್ತಾರೆ. ಅವರ ಸೇವೆ ಬಹಳಷ್ಟು ಸಮಯ ಗಮನಕ್ಕೆ ಬಾರದಿದ್ದರೂ, ಅದರ ಪರಿಣಾಮ ಸಮಾಜದ ಪ್ರತಿಯೊಂದು ಭಾಗದಲ್ಲೂ ಕಾಣಿಸುತ್ತದೆ.


ಭಾರತ ಮುಂದುವರಿಯುತ್ತಿರುವ ಈ ಶುಭ ಸಮಯದಲ್ಲಿ, ಈ ವೃತ್ತಿಗೆ ಇನ್ನೂ ಹೆಚ್ಚಿನ ಮಾನ್ಯತೆ ಮತ್ತು ಬೆಂಬಲ ಪ್ರೋತ್ಸಾಹ ಅಗತ್ಯವಾಗಿದೆ. ಉತ್ತಮ ಮೂಲಸೌಕರ್ಯ, ಸಂಶೋದನಾ ಸೌಲಭ್ಯಗಳು ಮತ್ತು ಶಿಕ್ಷಣ ವ್ಯವಸ್ಥೆಗಳ ಮೂಲಕ ಪಶುವೈದ್ಯಕೀಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವುದು ಅವಶ್ಯಕವಾಗಿದೆ. ಸಮುದಾಯ ಆರೋಗ್ಯ ಮತ್ತು ಅಭಿವೃದ್ಧಿ ನೀತಿಗಳಲ್ಲಿ ವಶುವೈದ್ಯಕೀಯ ಸೇವೆಗಳನ್ನು ಸೇರಿಸುವುದು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮುಖ್ಯವಾಗಿದೆ. ಆರೋಗ್ಯಕರ ಪ್ರಾಣಿಗಳು, ಸುರಕ್ಷಿತ ಆಹಾರ, ಸ್ಥಿರ ಜೀವನೋಪಾಯ ಮತ್ತು ನಿಯಂತ್ರಿತ ರೋಗಗಳು, ಇವೆಲ್ಲವೂ ಅವರ ಪ್ರತ್ಯಕ್ಷ ಹಾಗೂ ಪರೋಕ್ಷ ಕೊಡುಗೆಯ ಭಾಗಗಳಾಗಿವೆ. ಈ ವಿಶ್ವ ಪಶುವೈದ್ಯಕೀಯ ದಿನದಂದು, ಈ ಮೌನ ಸೇವಕರನ್ನು ಸ್ಮರಿಸಿ, ಅವರ ಸೇವೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಏಕೆಂದರೆ ಪ್ರಾಣಿಗಳು ಆರೋಗ್ಯವಾಗಿದ್ದರೆ, ಮಾನವ ಸಮಾಜವೂ ಆರೋಗ್ಯವಾಗಿರುತ್ತದೆ ಅದನ್ನು ಸಾಧ್ಯವಾಗಿಸುವವರು ಪಶುವೈದ್ಯರು.
ಡಾ. ರಶ್ಮಿ ಕೆ.ಎಂ.
ಸಹಾಯಕ ಪ್ರಾಧ್ಯಾಪಕರು, ವಶುವೈದ್ಯಕೀಯ ಮಹಾವಿದ್ಯಾಲಯ,  ಕೊೖಲ

LEAVE A REPLY

Please enter your comment!
Please enter your name here