ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ- ಅಧ್ಯಕ್ಷ ; ಜಯಪ್ರಕಾಶ್ ಎನ್.ಆರ್ ಉಪಾಧ್ಯಕ್ಷ: ಅನ್ನಪೂರ್ಣ ಪ್ರಸಾದ್ ರೈ

0

ಪುತ್ತೂರು: ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಅಧ್ಯಕ್ಷರಾಗಿ ಜಯಪ್ರಕಾಶ್ ಎನ್.ಆರ್ ಹಾಗೂ ಉಪಾಧ್ಯಕ್ಷ ಅನ್ನಪೂರ್ಣ ಪ್ರಸಾದ್ ರೈ ಆಯ್ಕೆಯಾಗಿದ್ದಾರೆ.


ಅದೇ ರೀತಿ ಸಾಮಾನ್ಯ ಕ್ಷೇತ್ರದಿಂದ ನಿರ್ದೇಶಕರುಗಳಾಗಿ ಜಗನ್ನಾಥ ಪೂಜಾರಿ, ಸುರೇಶ ಬಿ, ವಸಂತ ಗೌಡ, ಶಾಂತರಾಮ, ನಾರಾಯಣ, ಮಹಿಳಾ ಮೀಸಲು ಕ್ಷೇತ್ರದಿಂದ ತೇಜಾಕ್ಷಿ ಬಿ., ಉಷಾ ಬಿ.ಕೆ. ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬಾಬು ಬಿ.ಸಿ ಹಾಗೂ ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಗಣೇಶ್ ನಾಯ್ಕ ಅವಿರೋಧವಾಗಿ ಆಯ್ಕೆಯಾದರು.

ರಿಟರ್ನಿಂಗ್ ಅಧಿಕಾರಿಯಾಗಿ ಸಹಕಾರ ಸಂಘಗಳ ಉಪನಿಬಂಧಕರಾದ ಶೋಭಾ ಎನ್. ಎಸ್ ಚುನಾವಣಾಧಿಕಾರಿಯಾಗಿದ್ದರು. ಬಂಬಿಲ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಕೋಮಲ ಹಾಗೂ ಪರೀಕ್ಷಕಿ ವಿಮಲ ಸಹಕರಿಸಿದರು.

LEAVE A REPLY

Please enter your comment!
Please enter your name here