







ಪುತ್ತೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಲಿಟಲ್ ಚಾಂಪ್ಸ್ ಸ್ಪರ್ಧೆಗೆ ಪುತ್ತೂರಿನ ಸಾಲ್ಮರ ನಿವಾಸಿ ಮಾಸ್ಟರ್ ಸನ್ಮಯ್ ಎನ್ ಆಯ್ಕೆಯಾಗಿದ್ದಾರೆ.


ವಿದುಷಿ ಜಯಂತಿ ಹೆಬ್ಬಾರ್ ರವರಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಗಮಕವನ್ನು, ಶಾರದಾ ಭಟ್ ಇವರಲ್ಲಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು, ನಟರಾಜ ಶರ್ಮರಲ್ಲಿ ಕೀಬೋರ್ಡನ್ನು ಅಭ್ಯಾಸ ಮಾಡುತ್ತಿರುವ ಇವರಿಗೆ ಪುತ್ತೂರಿನ ಗಾನಸಿರಿಯ ಡಾ.ಕಿರಣ್ ಕುಮಾರ್ ಸುಗಮ ಸಂಗೀತದ ಗುರುಗಳು. ಪುತ್ತೂರಿನ ಅಂಬಿಕಾ ವಿದ್ಯಾಲಯದ 9ನೇ ತರಗತಿಯ ವಿದ್ಯಾರ್ಥಿಯಾಗಿರುವ ಇವರು ಡಾ.ಸಂತೋಷ್ ಹಾಗೂ ಡಾ.ಶ್ರುತಿ ದಂಪತಿ ಪುತ್ರ.













