ಉಪ್ಪಿನಂಗಡಿ ಚಂದ್ರನಾಥ ಸ್ವಾಮಿ ಬಸದಿ ಪುನರ್ ಪ್ರತಿಷ್ಠಾ ಮಹೋತ್ಸವ: ಧಾರ್ಮಿಕ ಸಭೆ

0

ಉಪ್ಪಿನಂಗಡಿ: ಕೇವಲ ನಾಲ್ಕು ಜೈನ ಮನೆಗಳಿರುವ ಉಪ್ಪಿನಂಗಡಿಯಲ್ಲಿ ಸರ್ವಾಂಗ ಸುಂದರವಾದ ಬಸದಿಯನ್ನು ನಿರ್ಮಿಸಲು ಸರಕಾರದಿಂದ 1.10 ಕೋಟಿ ರೂಪಾಯಿ ಒದಗಿಸುವ ಮೂಲಕ ಜೈನ ಸಮುದಾಯದ ಭಾವನೆಗಳಿಗೆ ಸ್ಪಂದಿಸಲಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಉಪ್ಪಿನಂಗಡಿಯ ಗಾಂಧಿಪಾರ್ಕ್ ಎಂಬಲ್ಲಿ ಹೆದ್ದಾರಿ ಪಾರ್ಶ್ವದಲ್ಲಿ ಪುನರ್ ನಿರ್ಮಿತ ಕದಿಕಾರು ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಏಕಶಿಲಾ ಚತುರ್ಮುಖ ಮಾನಸ್ತಂಭೋಪರಿ ಶ್ರೀ ಜಿನಬಿಂಬಗಳ ಪಂಚಕಲ್ಯಾಣ ಹಾಗೂ ಧಾಮ ಸಂಪ್ರೋಕ್ಷಣಾಪೂರ್ವಕ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತೀ ದೇವಿ ಬಿಂಬಗಳ ಪುನರ್ ಪ್ರತಿಷ್ಠಾ ಮಹೋತ್ಸವದ 3ನೇ ದಿನವಾದ ಮೇ.1ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.


ಶಾಂತಿಯನ್ನೇ ಧ್ಯೇಯವಾಗಿರಿಸಿಕೊಂಡ ಜೈನ ಧರ್ಮ ಸಿದ್ದಾಂತಗಳು ಸಕಲ ಜೀವರಾಶಿಯ ಹಿತವನ್ನು ಬಯಸುತ್ತಿದ್ದು, ಅದರದ್ದೇ ಆದ ಮೌಲ್ಯವನ್ನು ಹೊಂದಿದೆ ಎಂದ ಅವರು, ಇನ್ನು ಮುಂದಕ್ಕೂ ಈ ಬಸದಿಯ ಅಭಿವೃದ್ಧಿ ಕಾರ್ಯಕ್ಕೆ ಸರಕಾರದ ಸಹಕಾರ ಬೇಕಾದಲ್ಲಿ ಸ್ಪಂದಿಸುವುದಾಗಿ ಭರವಸೆ ನೀಡಿದರು.


ಪ್ರಾಸ್ತಾವಿಕ ಮಾತುಗಳನ್ನಾಡಿದ ಭರತ್ ರಾಜ್ ಜೈನ್ ಮೂಡಾರು, ಒಂದೆಡೆ ನೀರವರತೆಯ ಭೂಮಿ, ಇನ್ನೊಂದೆಡೆ ಜೌಗು ಪ್ರದೇಶ, ಮತ್ತೊಂದೆಡೆ ಭಾರಿ ವಾಹನಗಳ ಸಂಚಾರವಿರುವ ಹೆದ್ದಾರಿ, ಈ ಎಲ್ಲಾ ಸೂಕ್ಷ್ಮತೆಯ ನಡುವೆ ಯಾವುದೇ ಭೌಗೋಳೀಕ ಸೌಕರ್ಯವಿಲ್ಲದ ಇಲ್ಲಿನ ಜಾಗದಲ್ಲಿ ಬಸದಿಯ ನಿರ್ಮಾಣಕ್ಕೆ 40 ಅಡಿ ಆಳದಿಂದ ಮೊದಲುಗೊಂಡು ಮೂರು ಹಂತದಲ್ಲಿ ಭೂಮಿಯನ್ನು ಗಟ್ಟಿಗೊಳಿಸುವ ಕಾರ್ಯ ನಡೆಸಬೇಕಾಯಿತು. ಬಳಿಕ ಸರಕಾರದಿಂದ ಅಗತ್ಯ ಅನುದಾನ ಲಭಿಸಿ ಸುಂದರವಾದ ಬಸದಿಯನ್ನು ನಿರ್ಮಿಸಲು ಸಾಧ್ಯವಾಯಿತು ಎಂದರು.


ಉದ್ಯಮಿ ಹಾಗೂ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ವಜ್ರಕುಮಾರ್ ಜೈನ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಲಾವಣ್ಯ ಬಲ್ಲಾಳ್ ಜೈನ್ , ಭಾರತೀಯ ಜೈನ್ ಮಿಲನ್ ವಲಯ 8 ರ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು , ವಾಸ್ತು ತಜ್ಞ ಸುದರ್ಶನ್ ಇಂದ್ರ ಪಾದೂರು, ಆಳ್ವ ಕನ್‌ಸ್ಟ್ರಕ್ಷನ್ ನ ಧನಂಜಯ್ ಆಳ್ವ, ಪುತ್ತೂರು ಸಮವಸರಣದ ವಿ.ಕೆ. ಜೈನ್ , ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಧನ್ಯ ಕುಮಾರ್ ರೈ , ಬಸದಿಯ ಸ್ಥಳದಾನಿಗಳಾದ ಪದ್ಮನಾಭ ಚಕ್ರವರ್ತಿ, ವಜ್ರ ಕುಮಾರ್ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನವೀನ್ ಪಡಿವಾಳ್ ಪ್ರಾರ್ಥಿಸಿದರು. ಮಿತ್ರಸೇನ್ ಜೈನ್ ಸ್ವಾಗತಿಸಿದರು. ನಿರನ್ ಜೈನ್ ವಂದಿಸಿದರು. ಡಾ. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರದಂದು ಬಸದಿಯಲ್ಲಿ ಜಿನಬಾಲಕನ ಜನ್ಮ ಕಲ್ಯಾಣ , ಅಷ್ಠ ದಿಕ್ಷು ಧಾಮ ಸಂಪ್ರೋಕ್ಷಣೆ , ಚತುರ್ದಿಕ್ಷು ಹೋಮ, ಗ್ರಹ ಯಜ್ಞ ವಿಧಾನ ,ಜಲಾಗ್ನಿ ಹೋಮ, ಪಾಂಡುಕಾಶಿ ಲೋಪರಿ 108 ಕಲಶಗಳಿಂದ ಜಿನ ಬಾಲಕನ ಜನ್ಮ ಅಭಿಷೇಕ, ನಾಮಕರಣ, ಬಾಲಲೀಲಾ ಮಹೋತ್ಸವ , ಪಂಚ ಕಲ್ಯಾಣ ಆರಾಧನಾ ವಿಧಾನ, ಯಾಗ ಮಂಡಲ ಆರಾಧಾನಾ ವಿಧಾನ , ಶ್ರೀ ಸ್ವಾಮಿಗೆ ನವಕಲಶಾಭಿಷೇಕ, ಮಹಾಮಂಗಳಾರತಿ, ಶ್ರೀ ಜಿನ ಗಂಧೋಧಕ ನಡೆಯಿತು.
ಸಮಾರಂಭದಲ್ಲಿ ಪಂಚಕಲ್ಯಾಣ ಸಮಿತಿ ಅಧ್ಯಕ್ಷ ವಿಧ್ಯಾಧರ ಜೈನ್ , ಕಾರ್ಯದರ್ಶಿ ಶಾಂತಿಪ್ರಕಾಶ್, ಸಮಿತಿಯ ಸದಸ್ಯರಾದ ಪ್ರಶಾಂತ್ ಜೈನ್ ಬಾರ್ಯ, ಅನುದೀಪ್ ರೈ, ಸುಭಾಶ್ ಜೈನ್, ನಿರಂಜನ್ ಕೊಂಡೆ, ಪಾರ್ಶ್ವನಾಥ್ ನೆಲ್ಯಾಡಿ, ಸಮಂತ್ ನೆಲ್ಯಾಡಿ, ಮಹೇಶ್ ಪಡಿವಾಳ, ಪಾರ್ಶ್ವನಾಥ ಜೈನ್ , ಪುನಿತ್ ನೆಲ್ಯಾಡಿ, ಉದಯ ಕುಮಾರ್ ಜೈನ್, ಅಭಯ್ ಜೈನ್, ವಿಜೇತ್ ಜೈನ್, ಸಂಪತ್ ಕುಮಾರ್ ಅಲಂಕಾರು, ಸನ್ಮತಿ ಹೆಗ್ಡೆ, ಸತೀಶ್ ಪಡಿವಾಳ್ ಮೊದಲಾದವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here