ಭಕ್ತಿ, ಭಾವದಿಂದ ನಡೆದ ಕೊಡಿನೀರು ಮಂಟಮೆ ಗ್ರಾಮದೈವ ಶಿರಾಡಿ ದೈವದ ನೇಮೋತ್ಸವ

0

ಪುತ್ತೂರು: ಸುಮಾರು 800 ವರ್ಷಗಳ ಇತಿಹಾಸವಿರುವ ನರಿಮೊಗರು ಗ್ರಾಮದ ಕೊಡಿನೀರು ಮಂಟಮೆ ಕೈಪಂಗಳದ ಗ್ರಾಮದೈವ ಶ್ರೀ ಶಿರಾಡಿ ದೇವಸ್ಥಾನದಲ್ಲಿ ವರ್ಷಾವಧಿ ನೇಮೋತ್ಸವವು ಮೇ.1ರಂದು ನಡೆಯಿತು.


ನೇಮೋತ್ಸವದ ಅಂಗವಾಗಿ ಎ.2ರಂದು ಸಂಜೆ ಭಕ್ತಾದಿಗಳಿಂದ ಹಸಿರು ಹೊರೆಕಾಣಿಕೆ ಸಮರ್ಪಣೆ, ರಾತ್ರಿ ದೈವದ ಭಂಡಾರ ತೆಗೆದ ಬಳಿಕ ಅನ್ನಸಂತರ್ಪಣೆ ನಡೆಯಿತು.
ಮೇ.1ರಂದು ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಮಾರಿಕಳ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.


ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯದರ್ಶಿ ಶ್ರೀಧರ ಗೌಡ ಪಾಣತ್ತಿಲ, ಖಜಾಂಚಿ ಯತೀಶ್ ದೇವ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೋಹನ್ ರೈ ನರಿಮೊಗರು, ಶ್ಯಾಂಪ್ರಸಾದ್ ರೈ ಬೆಂಗಳೂರು, ನಾರಾಯಣ ಗೌಡ ಬರೆಮೇಲು, ನಾರಾಯಣ ಪೂಜಾರಿ ಅರಿಪ್ಪೆಕಟ್ಟ, ದೈವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ವಿಜಯಕುಮಾರ್ ಜೈನ್, ಅಧ್ಯಕ್ಷ ಎ.ವಿ ನಾರಾಯಣ ಅಲುಂಬುಡ, ಪ್ರಧಾನ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಖಜಾಂಚಿ ಗುರುಪ್ರಸಾದ್ ರೈ, ವಿಜಿತ್ ಜ್ಯುವೆಲ್ಲರ‍್ಸ್‌ನ ಮ್ಹಾಲಕ ಅಚ್ಚುತ ಆಚಾರ್ಯ, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನವೀನ್ ದೋಳ್ತಟ್ಟ, ಯೋಗೀಶ್ ನಾೖಕ್‌ ಗಡಿಪ್ಪಿಲ, ಬೆಳಿಯಪ್ಪ ಗೌಡ ಕೆದ್ಕಾರ್, ಬಾಳಪ್ಪ ಗೌಡ ಕೆದ್ಕಾರ್, ನಾಗರಾಜ ಪೂಜಾರಿ ದೋಳ, ವಸಂತ ಪೂಜಾರಿ ದೊಳ, ವಸಂತ ಗೌಡ ಕೆದ್ಕಾರ್, ಜಯರಾಮ ಗೌಡ ಸೇರಾಜೆ, ರಘು ಮಣಿಯ, ಚಿದಾನಂದ ಗೌಡ ಬಜಪ್ಪಲ, ಸೀತಾರಾಮ ಗೌಡ ಸೇರಾಜೆ, ಮಾಧವ ಮಡಿವಾಳ ನಡುಬೈಲು, ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ನೂರಾರು ಮಂದಿ ಭಕ್ತಾದಿಗಳು ನೇಮೋತ್ಸವದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here