






ಪುತ್ತೂರು: ಕೆಮ್ಮಾಯಿ ಭರತಪುರದ ಒಳಿತು ಮಾಡು ಸಾಂತ್ವನ ಸೇವಾಶ್ರಮದ ವತಿಯಿಂದ ಅನಾಥ ಮಕ್ಕಳು, ಸಿಂಗಲ್ ಪೇರೆಂಟ್ ಗಂಡು ಮಕ್ಕಳಿಗೆ ಗುರುಕುಲ ಮಾದರಿಯಲ್ಲಿ ಉಚಿತ ಊಟ, ವಸತಿ, ಶಾಲಾ ಖರ್ಚುವೆಚ್ಚದೊಂದಿಗೆ ಶಿಕ್ಷಣ ನೀಡಲಾಗುವುದು. ಮಕ್ಕಳಿಗೆ 6ರಿಂದ 8ನೇ ತರಗತಿವರೆಗೆ ಕೆಮ್ಮಾಯಿಯ ಕೃಷ್ಣನಗರ ಹಿರಿಯ ಪ್ರಾಥಮಿಕ ಶಾಲೆ ಹಾಗೂ 9 ರಿಂದ 11ನೇ ತರಗತಿವರೆಗೆ ಕೊಂಬೆಟ್ಟು ಪ್ರೌಢಶಾಲೆಯಲ್ಲಿ ಉಚಿತ ಶಿಕ್ಷಣ ಕೊಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8762665613 ಸಂಪರ್ಕಿಸಬಹುದು ಎಂದು ಚೇತನ್ ಗುರೂಜಿಯವರು ತಿಳಿಸಿದ್ದಾರೆ.











