







ಪೆರಾಬೆ: ಲಾರಿ ಡಿಕ್ಕಿಯಾಗಿ ಸ್ಕೂಟಿ ಸವಾರ ಗಾಯಗೊಂಡ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಕುಂತೂರಿನಲ್ಲಿ ಏ.29ರಂದು ಬೆಳಗ್ಗೆ ನಡೆದಿದೆ.


ಕುಂತೂರು ಗ್ರಾಮದ ಅನ್ನಡ್ಕ ನಿವಾಸಿ ಸತ್ಯನಾರಾಯಣ ಅವರ ಪುತ್ರ ಜಗತ್ ಎ.ಎಸ್.(20ವ.) ಗಾಯಗೊಂಡವರಾಗಿದ್ದಾರೆ. ಇವರು ಮಂಗಳೂರಿನಲ್ಲಿ ಡಿಪ್ಲೋಮಾ ಕಲಿಯುತ್ತಿದ್ದು ರಜೆ ಇದ್ದ ಕರಣ ಊರಿಗೆ ಬಂದವರು ಏ.29ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊಂಡಾ ಡ್ಯೂ ಸ್ಕೂಟಿಯಲ್ಲಿ ಕುಂತೂರು ಹಾಲಿನ ಡೈರಿಗೆ ಹಾಲು ಕೊಟ್ಟು ಮರಳಿ ಮನೆಗೆ ಬರುತ್ತಿದ್ದ ವೇಳೆ ಕುಂತೂರು ಬದ್ರಿಯಾ ಹಾರ್ಡ್‌ವೇರ್ ಶಾಪ್ ಬಳಿ ತಲುಪುತ್ತಿದ್ದಂತೆ ಅಲ್ಲಿಯೇ ನಿಂತಿದ್ದ ಲಾರಿಯನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೇ ರಾಜ್ಯ ಹೆದ್ದಾರಿ ಕಡೆಗೆ ತಿರುಗಿಸಿದ ಪರಿಣಾಮ ಲಾರಿಯ ಎದುರಿನ ಚಕ್ರಕ್ಕೆ ಸ್ಕೂಟಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಸ್ಕೂಟಿ ಸವಾರ ಜಗತ್ ಕೆಳಕ್ಕೆ ಬಿದ್ದು ಅವರ ಕೈ, ಕಾಲುಗಳಿಗೆ ಗಾಯವಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













