







ಆಲಂಕಾರು: ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶರವೂರು ಇದರ ನೇಮೋತ್ಸವ ಮೇ.3 ಮತ್ತು ಮೇ.4 ರಂದು ನಡೆಯಲಿದೆ.


ಮೇ.3 ರಂದು ಆದಿತ್ಯವಾರ ಮಧ್ಯಾಹ್ನ ಶ್ರೀ ಮೊಗೇರ್ಕಳ ದೈವಗಳಿಗೆ ಮಂಜ ಸೇವೆ, ಸಂಜೆ ದೈವಗಳ ಭಂಡಾರ ತೆಗೆದು, ಸಂಜೆ ಬಿರ್ಮೆರೆ ಪೂಜೆ ರಾತ್ರಿ ಅನ್ನಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ಮೊಗೇರ್ಕಳ ದೈವಗಳು ಗರಡಿ ಇಳಿಯುವುದು ತನ್ನಿ ಮಾನಿಗ ದೈವ ಗರಡಿ ಇಳಿಯುವುದು ದೈವ ಪಾತ್ರಿಗಳ ದರ್ಶನ ಶ್ರೀ ಮೊಗೇರ ದೈವಗಳ ಗಂಧ ಬೂಳ್ಯ ಹಾಗೂ ದೈವಗಳು ಹಾಲು ಕುಡಿಯಲು ಹೋಗುವುದು. ಮೇ.4 ರಂದು
ಪ್ರಾತಃ ಕಾಲದಲ್ಲಿ ಕೊರಗ ತನಿಯ ದೈವದ ನೇಮ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.



ಭಕ್ತಾದಿಗಳು ಆಗಮಿಸಿ, ಶ್ರೀ ದೈವಗಳ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಸುಬ್ರಹ್ಮಣ್ಯ ರಾವ್ ನಗ್ರಿ ಅಧ್ಯಕ್ಷರು ಮತ್ತು ಸದಸ್ಯರು ವ್ಯವಸ್ಥಾಪನ ಸಮಿತಿ, ಯಂ. ಗೋಪಾಲಕೃಷ್ಣ ಪಡ್ಡಿಲ್ಲಾಯ ಅಧ್ಯಕ್ಷರು ಮತ್ತು ಸದಸ್ಯರು ಬ್ರಹ್ಮಕಲಶೋತ್ಸವ ಸಮಿತಿ, ಡಾ| ಹೇಮಂತ್ ರೈ ಮನವಳಿಕೆಗುತ್ತು ಅಧ್ಯಕ್ಷರು ಮತ್ತು ಸದಸ್ಯರು ಅಭಿವೃದ್ಧಿ ಸಮಿತಿ, ಎನ್. ಹರೀಶ್ ಆಚಾರ್ಯ ನಗ್ರಿಗುತ್ತು ಪವಿತ್ರಪಾಣಿ ,
ಅರ್ಚಕರು ಮತ್ತು ಸಿಬ್ಬಂದಿವರ್ಗ, ಸೀಮೆಯ ಹತ್ತು ಸಮಸ್ತರು, ಕುಂಞ ಮುಗೇರ ಕಮ್ಮಿತ್ತಿಲು ಗೌರವಾಧ್ಯಕ್ಷರು, ಮಾಯಿಲಪ್ಪ ಮುಗೇರ ಪಾಂಜೋಡಿ ಅಧ್ಯಕ್ಷರು, ತಿಮ್ಮಪ್ಪ ಮುಗೇರ ಪಾಂಜೋಡಿ ಕಾರ್ಯಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ನೇಮೋತ್ಸವ ಸಮಿತಿ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನ ಶರವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










