ಮದುವೆ, ಶುಭಸಮಾರಂಭ : ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ

0

ಪುತ್ತೂರು: ಮೇ.3 ಭಾನುವಾರ ಪುತ್ತೂರಿನಲ್ಲಿ ಎಲ್ಲೆಡೆ ಮದುವೆ ಶುಭಸಮಾರಂಭಗಳು ನಡೆದ ಹಿನ್ನೆಲೆಯಲ್ಲಿ ಪೇಟೆಯಲ್ಲಿ ಜನಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಇದರ ಪರಿಣಾಮವಾಗಿ ಪುತ್ತೂರು ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿ ತುಳುಕಿದ ದೃಶ್ಯ ಕಂಡುಬಂತು.

ಬಸ್ ಹತ್ತಲು ನೂಕುನುಗ್ಗಲು:
ಭಾನುವಾರ ಪುತ್ತೂರಿನ ವಿವಿಧ ಸಭಾ ಭವನ ಸೇರಿದಂತೆ ಎಲ್ಲೆಡೆ ಮದುವೆ ಸಹಿತ ಇತರ ಸಮಾರಂಭಗಳಿದ್ದು, ಪೇಟೆಯಲ್ಲಿ ಜನಸಂದಣಿ ಹೆಚ್ಚಿತ್ತು. ಸಂಜೆ ವೇಳೆ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿತ್ತು. ಹಲವರು ಬಸ್ ಕಡಿಮೆ ಆಗಿದೆ ಎಂದು ಹೇಳಿದರೂ ಬಸ್ ಆಗಾಗ್ಗೆ ಬರುತ್ತಲೇ ಇತ್ತು. ಬಸ್ ಬಂದಂತೆ ನಿಮಿಷ ಮಾತ್ರದಲ್ಲಿ ಪ್ರಯಾಣಿಕರು ಬಸ್ ಹತ್ತಲು ನೂಕುನುಗ್ಗಲು ನಡೆಸುತ್ತಿರುವುದು ಕಂಡುಬಂತು. ಆದರೂ ಬಸ್ ಸಂಚಾರ ಯಥಾಸ್ಥಿತಿಯಲ್ಲಿ ನಡೆಯುತ್ತಿತ್ತು.

ಬಸ್ ಕಾರ್ಯಾಚರಣೆಯಲ್ಲಿ ಕೊರತೆ ಇಲ್ಲ
“ಬಸ್ ಬೇಕಾದಷ್ಟು ಇದೆ. ಗ್ರಾಮಾಂತರ ಸಾರಿಗೆ ನಿರಂತರ ಕಾರ್ಯಾಚರಣೆಯಲ್ಲಿದೆ. ರಾತ್ರಿ ಬೆಂಗಳೂರಿಗೆ ಹೆಚ್ಚುವರಿ 8 ಬಸ್ ಹಾಕಲಾಗಿತ್ತು. ಅದು ಕೂಡಾ ಸೀಟ್ ಫುಲ್ ಆಗಿದೆ” ಎಂದು ಪುತ್ತೂರು ಘಟಕ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಕಾಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here