






ಪುತ್ತೂರು: ನಿಡ್ಪಳ್ಳಿ ಪಟ್ಟೆ ನಿವಾಸಿ ವಸಂತ(49ವ) ಎಂಬವರು ಮಡಿಕೇರಿಯ ಮೂರ್ನಾಡು ಎಂಬಲ್ಲಿ ಮೇ.3ರಂದು ಹೃದಯಘಾತದಿಂದ ನಿಧನರಾದರು.


ಮೂರು ತಿಂಗಳ ಹಿಂದೆ ವಸಂತ ಅವರು ಪತ್ನಿ ಮಕ್ಕಳೊಂದಿಗೆ ಮಡಿಕೇರಿಯ ಮೂರ್ನಾಡು ಎಂಬಲ್ಲಿ ಕಾಫಿ ತೋಟದ ಕೆಲಸಕ್ಕೆಂದು ಹೋಗಿದ್ದರು. ಅಲ್ಲಿ ಅವರು ಹೃದಯಘಾತದಿಂದ ನಿಧನರಾದರು.



ಮೃತರ ಪುತ್ರ ಸಂಪತ್ ಕುಮಾರ್ ನಡೆದ ಘಟನೆಯನ್ನು ಪುತ್ತೂರು ದಲಿತ್ ಸಂಘಟನೆಯ ಜಿಲ್ಲಾಧ್ಯಕ್ಷ ರಾಜು ಹೊಸ್ಮಠ ಅವರಿಗೆ ಕರೆ ಮಾಡಿ ತಿಳಿಸಿದ್ದರು. ರಾಜು ಹೊಸ್ಮಠ ಅವರು ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮತ್‌ತು ನಿಡ್ಪಳ್ಳಿ ಗ್ರಾ.ಪಂ ಮಾಜಿ ಸದಸ್ಯ ಅವಿನಾಶ್ ರೈ ಅವರ ಸಹಕಾರದೊಂದಿಗೆ ಚಿಕ್ಕಪುತ್ತೂರು ಸ್ಮಶಾನದಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಿಸಿದರು.
ಈ ಸಂದರ್ಭ ಮೃತರ ತಂದೆ ಪರ್ಮನೆ, ಸಹೋದರಿ ಮತ್ತು ಪತ್ನಿ ಹಾಗು ಇಬ್ಬರು ಮಕ್ಕಳು ಉಪಸ್ಥಿತರಿದ್ದರು. ಘಟನೆ ಕುರಿತು ಮೂರ್ನಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










