ಸವಣೂರು: ಶಾಂತಿನಗರ ಅಂಬೇಡ್ಕರ್ ಭವನದ ಬಳಿ ಹೋಟೆಲ್ ಸಂತೃಪ್ತಿ ಶುಭಾರಂಭ

0

ಪುತ್ತೂರು: ಸವಣೂರು ಶಾಂತಿನಗರ ಅಂಬೇಡ್ಕರ್ ಭವನದ ಬಳಿ ಮೇ.1 ರಂದು ಭಾಸ್ಕರ್ ಪೂವ ಮಾಲಕತ್ವದ ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲ್ ಸಂತೃಪ್ತಿ ಶುಭಾರಂಭಗೊಂಡಿತು.


ಊರಿನ ಪ್ರಮುಖರಾದ ಭಾಸ್ಕರ್ ಗೌಡ, ಉದಯ ಕುಮಾರ್, ಕಮಲ, ಮನೋಹರ್ ರೈ ಕೆರೆಕ್ಕೋಡಿ, ಬಾಲಚಂದ್ರ ರೈ ಕೆರೆಕ್ಕೋಡಿ, ಶೋಭಾ ಬಾಲಚಂದ್ರ ರೈ ಕೆರೆಕ್ಕೋಡಿ, ನಿಭಾ ಬಿ.ರೈ ಕೆರೆಕ್ಕೋಡಿ, ಪ್ರಭಾಕರ್ ಶೆಟ್ಟಿ ನಡುಬೈಲು, ಸೋಮನಾಥ, ಸೌಮ್ಯ ಸೋಮನಾಥ, ಕಟ್ಟಡದ ಮಾಲಕ ದಾಮೋದರ ಕುಲಾಲ್, ಅಬ್ದುಲ್ ಕರೀಮ್ ಎಸ್.ಆರ್, ಉಮ್ಮರ್ ಸೊಂಪಾಡಿ, ಪರಮೇಶ್ವರ ಇಡ್ಯಾಡಿ, ಶ್ರೀಧರ್ ಇಡ್ಯಾಡಿ, ಪ್ರೇಮಚಂದ್ರ ಮೆದು, ಸುಧೀರ್ ಕುಮಾರ್, ಮೋಹನ್ ಕುಮಾರ್, ಸಂಜೀವ ಭಂಡಾರಿ, ರಫೀಕ್ ಎಂ. ಎ, ಸಂಕಪ್ಪ ರೈ ಕಲಾಯಿ, ಕುಲದೀಪ್ ಇಡ್ಯಾಡಿ, ಹರಿಣಾಕ್ಷಿ ರೈ, ಗಣೇಶ್ ಪೂವ, ಉದಯ ಪೂವ ಸಹಿತ ಅನೇಕ ಮಂದಿ ಭಾಗವಹಿಸಿ, ಸಂಸ್ಥೆಗೆ ಶುಭಕೋರಿದರು. ಸಂಸ್ಥೆಯ ಮಾಲಕ ಭಾಸ್ಕರ್ ಪೂವ, ಸರಸ್ವತಿ ಭಾಸ್ಕರ್ ಪೂವ, ಪ್ರೀತಮ್ ಪೂವ, ಪ್ರೀತಿಕಾ ಪೂವರವರು ಅತಿಥಿಗಳನ್ನು ಗೌರವಿಸಿದರು.

ಗ್ರಾಹಕರ ಪ್ರೋತ್ಸಾಹ ಅಗತ್ಯ
ನಮ್ಮ ಹೋಟೆಲ್‌ನಲ್ಲಿ ಬೆಳಿಗ್ಗೆ ವಿವಿಧ ಬಗೆಯ ಉಪಹಾರದ ತಿಂಡಿಗಳು, ಮೀನು, ಮತ್ತು ಕೋಳಿ ಪದಾರ್ಥಗಳು, ಮಧ್ಯಾಹ್ನ ಗಂಜಿ ಊಟ, ಕಬಾಬ್, ಬೂತಾಯಿ, ಬಂಗುಡೆ ಸಹಿತ ಅನೇಕ ಬಗೆಯ ಮೀನುಗಳ ಖಾದ್ಯ, ಹಲಾಲ್ ಚಿಕನ್ ವ್ಯವಸ್ಥೆ ಇದೆ, ಸಂಜೆ ಫಾಸ್ಟ್‌ಪುಡ್‌ನೊಂದಿಗೆ ವಿವಿಧ ಬಗೆಯ ತಿಂಡಿಗಳು ಲಭ್ಯ, ವಿವಿಧ ಬಗೆಯ ಜ್ಯೂಸ್‌ಗಳು ನಮ್ಮಲ್ಲಿ ಲಭ್ಯ, ಗ್ರಾಹಕರ ಮನೆಮಾತಾಗಿರುವ ಸಂತೃಪ್ತಿ ಎಳ್ಳು ಜ್ಯೂಸ್ ಸದಾ ನಮ್ಮಲ್ಲಿ ಲಭ್ಯ, ಗ್ರಾಹಕರ ಪ್ರೋತ್ಸಾಹವನ್ನು ಸದಾ ಬಯಸುತ್ತೇವೆ
ಭಾಸ್ಕರ್ ಪೂವ ಮಾಲಕರು
ಹೋಟೆಲ್ ಸಂತೃಪ್ತಿ ಸವಣೂರು ಶಾಂತಿನಗರ

LEAVE A REPLY

Please enter your comment!
Please enter your name here