






ಆರ್ಯುವೇದ ಚಿಕಿತ್ಯೆಗೆ ಜಗತ್ತಿನಲ್ಲಿ ಮಾನ್ಯತೆ- ವಿದ್ಯಾಗೌರಿ


ಪುತ್ತೂರು: ಕುಂಬ್ರದಲ್ಲಿ ಕಾರ್ಯಚರಿಸುತ್ತಿದ್ದ ಕಾಯಕಲ್ಪ ಆರೋಗ್ಯಧಾಮ ಮೇ.2 ರಂದು ಸ್ಥಳಾಂತರಗೊಂಡು, ಪುತ್ತೂರಿನ ದರ್ಬೆ ಜಂಕ್ಷನ್ ಶಶಿಶಂಕರ ಸಭಾಂಗಣದಲ್ಲಿ ಶುಭಾರಂಭಗೊಂಡಿತು.



ಪುತ್ತೂರು ನಗರ ಸಭಾ ನಿಕಟಪೂರ್ವ ಸದಸ್ಯೆ ವಿದ್ಯಾಗೌರಿಯವರು ಮಾತನಾಡಿ, ಅನಾದಿಕಾಲದಿಂದ ಆರ್ಯುವೇದ ವೈದ್ಯ ಪದ್ಧತಿಗೆ ಬಹಳಷ್ಟು ಮಹತ್ವ ಇದೆ. ದೇಶದ ಪ್ರಧಾನಿ ನರೇಂದ್ರ ಮೋದಿ, ಆರ್ಯುವೇದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ. ಆರ್ಯುವೇದ ಚಿಕಿತ್ಸೆಯನ್ನು ಅನಾದಿ ಕಾಲದಿಂದಲೂ ಜನರು ಮಾಡುತ್ತಿದ್ದಾರೆ. ಆರ್ಯುವೇದ ಎಂಬುದು ವೈದ್ಯಕೀಯ ರಂಗದ ನಂಬಿಕೆಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಇದರಿಂದ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ, ಯೋಗದ ಹಾಗೆ ಜಗತ್ತಿನಲ್ಲಿಯೇ ಆರ್ಯುವೇದ ಪದ್ಧತಿಗೆ ಮಾನ್ಯತೆ ಇದೆ. ಈ ನಿಟ್ಟಿನಲ್ಲಿ ಲಕ್ಷ್ಮಣರವರು ಪುತ್ತೂರಿನ ನಾಗರಿಕರಿಗೆ ತಮ್ಮ ಕಾಯಕಲ್ಪ ಆರೋಗ್ಯ ಧಾಮದ ಮೂಲಕ ಉತ್ತಮವಾದ ಆರ್ಯುವೇದ ಪದ್ಧತಿಯ ಚಿಕಿತ್ಯೆಯನ್ನು ನೀಡಿ, ಹೆಸರನ್ನು ಪಡೆಯಲಿ, ನಾವೆಲ್ಲ ಇವರ ಸಂಸ್ಥೆಗೆ ಪ್ರೋತ್ಸಾಹವನ್ನು ನೀಡೋಣ ಎಂದು ಹೇಳಿದರು.
ಕುಂಬ್ರ ವರ್ತಕರ ಸಂಘದ ಸ್ಥಾಪಕಾಧ್ಯಕ್ಷ ಶ್ಯಾಂ ಸುಂದರ ರೈ ಕೊಪ್ಪಳರವರು ಮಾತನಾಡಿ ಲಕ್ಷ್ಮಣರವರು ಕುಂಬ್ರದಲ್ಲಿ ಮೂರು ವರ್ಷಗಳಿಂದ ಕಾಯಕಲ್ಪ ಆರೋಗ್ಯ ಧಾಮವನ್ನು ನಡೆಸಿಕೊಂಡು ಬಂದು, ಇದೀಗ ಪುತ್ತೂರಿಗೆ ತಮ್ಮ ಸಂಸ್ಥೆಯನ್ನು ಸ್ಥಳಾಂತರ ಮಾಡಿದ್ದಾರೆ. ಅವರ ಸರಳ ವ್ಯಕ್ತಿತ್ವದ ಮೂಲಕ ಉತ್ತಮವಾದ ಸೇವೆಯನ್ನು ಕುಂಬ್ರ ಆಸುಪಾಸಿನ ಜನರಿಗೆ ನೀಡಿದ್ದಾರೆ. ಅವರು ಕುಂಬ್ರ ವರ್ತಕರ ಸಂಘದ ಸದಸ್ಯರಾಗಿ ಸಂಘದ ಪ್ರತಿಯೊಂದು ಕಾರ್ಯದಲ್ಲೂ ನಿಷ್ಠೆ, ಪ್ರಾಮಾಣಿಕತೆಯಿಂದ ಭಾಗವಹಿಸುತ್ತಿದ್ದರು. ಅದು ನಮಗೆ ಸಂತೋಷದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಗೆ ಮತ್ತಷ್ಟು ಯಶಸ್ಸು ದೊರೆಯಲಿ ಎಂದು ಶುಭಹಾರೈಸಿದರು.
ಪುತ್ತೂರು ನಗರ ಸಭೆಯ ನಿಕಟಪೂರ್ವ ಸದಸ್ಯೆ ಪೂರ್ಣಮಾ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ.ಮಹಮ್ಮದ್, ಉಪಾಧ್ಯಕ್ಷ ಸದಾಶಿವ, ಸದಸ್ಯರಾದ ನಾರಾಯಣ ಪೂಜಾರಿ ಕುರಿಕ್ಕಾರ, ಮೆಲ್ವಿನ್ ಕುಂಬ್ರ, ಪ್ರದೀಪ್ ಕುಮಾರ್ ಶಾಂತಿವನ, ಕುಂಬ್ರ ಮೂರ್ತೆದಾರರ ಸೊಸೈಟಿ ಸಿಇಓ ಭವಾನಿ, ಜಯರಾಮ ಕೆವಿಜಿ, ಕುಂಬ್ರ, ಚೇತನ್ ಗುರುಜಿ ಕೆಮ್ಮಾಯಿ ಭರತಪುರ, ಶ್ರೀಮಾತ ಇಂಜಿನಿಯರ್ ವರ್ಕ್ಸ್ ಮಾಲಕ ರುಕ್ಮಯ್ಯ ಗೌಡ, ಹೂವಪ್ಪ ಗೌಡ ಪರ್ಪುಂಜ, ನಾಗವೇಣಿ ಪರ್ಪುಂಜ ಸಹಿತ ಅನೇಕರು ಭಾಗವಹಿಸಿ, ಸಂಸ್ಥೆಗೆ ಶುಭಕೋರಿದರು. ಕಾಯಕಲ್ಪ ಆರೋಗ್ಯಧಾಮದ ಮಾಲಕ ಲಕ್ಷ್ಮಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ವಸಂತಿ ಕೆ ಸಹಕರಿಸಿದರು.
ಕುಂಬ್ರದಲ್ಲಿ ಕಾರ್ಯಚರಿಸುತ್ತಿದ್ದ ಕಾಯಕಲ್ಪ ಆರೋಗ್ಯ ಧಾಮ ಸ್ಥಳಾಂತರಗೊಂಡು ಪುತ್ತೂರಿನ ದರ್ಬೆ ಜಂಕ್ಷನ್ ಸಮೀಪದ ರೋಡ್ರಿಗಸ್ ಚಿಕನ್ ಸೆಂಟರ್ ಹತ್ತಿರದ ಶಶಿಶಂಕರ ಸಭಾಂಗಣಕ್ಕೆ ಸ್ಥಳಾಂತರಗೊಂಡಿದೆ. ಇಲ್ಲಿ ಜೌಷಧಿ ರಹಿತ ಚಿಕಿತ್ಯೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಮಾಡಿ-
9901622365
ಲಕ್ಷ್ಮಣ ಮಾಲಕರು
ಕಾಯಕಲ್ಪ ಆರೋಗ್ಯಧಾಮ ದರ್ಬೆ ಪುತ್ತೂರು










