






ಪುತ್ತೂರು: ಅನ್ಸಾರಿಯ ಜುಮಾ ಮಸ್ಜಿದ್ ಮಂಜ ಮತ್ತು ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಇದರ ವತಿಯಿಂದ ಕೂಟು ಝಿಯಾರತ್ ಹಾಗೂ ದುವಾ ಮಜ್ಲಿಸ್ ಗೌರವಾಧ್ಯಕ್ಷ ಹಾಫಿಝ್ ಅಸ್ಸಯ್ಯದ್ ಫಖ್ರುದ್ದೀನ್ ಹದ್ದಾದ್ ತಂಙಳ್‌ರವರ ನೇತೃತ್ವದಲ್ಲಿ ನಡೆಯಿತು.


ಅನ್ಸಾರಿಯ ಜುಮಾ ಮಸ್ಜಿದ್ ಅಧ್ಯಕ್ಷ ಯೂಸುಫ್ ಗೌಸಿಯಾ ಸಾಜ, ಖತೀಬ್ ರವೂಫ್ ಹಾಶಿಮಿ, ಸಾಜ ಖತೀಬ್ ಅಬ್ಬಾಸ್ ಮದನಿ, ಸಾರ್ಯ ಖತೀಬ್ ನಾಸಿರ್ ರಝ್ವಿ, ಅಬ್ದುರಹ್ಮಾನ್ ಮಹ್ಲರಿ, ಉಪಾಧ್ಯಕ್ಷ ಯು.ಟಿ ಅಲಿ ಪರಿಯಲ್ತಡ್ಕ, ಕಾರ್ಯದರ್ಶಿ ಅನಸ್ ಪೈಸಾರಿ, ಉಮರ್ ಕಲ್ಲಡ್ಕ, ಯೂಸುಫ್ ಪೈಸಾರಿ, ಎಂ.ಎಸ್ ಅಬ್ದುಲ್ಲಾ, ಕೆ ಕೆ ಅಬೂಬಕರ್, ಇಸ್ಮಾಯಿಲ್ ಎ ಕೆ, ಯಾಕುಬ್ ಪೈಸಾರಿ, ಇಸ್ಮಾಯಿಲ್ ಗೇಟ್, ರಿಯಾಝ್ ಎ.ಕೆ, ಅಬ್ದುಲ್ಲ ಕುಂಞಿ, ಅಬ್ದುರಹ್ಮಾನ್ ಸಾಜ, ಹಮೀದ್ ಸಾಜ, ಅಶ್ರಫ್ ಪೈಸಾರಿ, ಮುಹಮ್ಮದ್ ಅಜ್ಜಿನಡ್ಕ ಹಾಗೂ ಹಲವರು ಉಪಸ್ಥಿತರಿದ್ದರು. ಈ ವರ್ಷ ಪವಿತ್ರ ಹಜ್ಜ್ ಯಾತ್ರೆ ತೆರಳುತ್ತಿರುವ ಅನ್ಸಾರಿಯ ಜುಮಾ ಮಸ್ಜಿದ್‌ನ ಗೌರವಾಧ್ಯಕ್ಷ ಹಾಫಿಝ್ ಅಸ್ಸಯ್ಯದ್ ಫಖ್ರುದ್ದೀನ್ ಹದ್ದಾದ್ ತಂಙಳ್‌ರನ್ನು ಜಮಾಅತ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು.













