






ಪುತ್ತೂರು:ವಾಣಿಯನ್/ಗಾಣಿಗ ಸಮಾಜದ ವ್ಯಾಪ್ತಿಗೊಳಪಟ್ಟ ಪುರಾತನ, ಕಾರಣಿಕ ಕ್ಷೇತ್ರವಾಗಿರುವ ಕೇರಳದ ಕಾಸರಗೋಡು ಜಿಲ್ಲೆಯ ಪೆರ್ಣೆ ಶ್ರೀಮುಚ್ಚಿಲೋಟ್ ಭಗವತಿ ಕ್ಷೇತ್ರದ ಆಡಳಿತ ಮಂಡಳಿಗೆ ಸದಸ್ಯರಾಗಿ ಕರ್ನಾಟಕ ರಾಜ್ಯದಿಂದ ಇಬ್ಬರು ಸದಸ್ಯರನ್ನು ಆಯ್ಕೆ ಮಾಡಿದ್ದು ಪುತ್ತೂರಿನಿಂದ ದಾಮೋದರ ಪಾಟಾಳಿ ಮುಕ್ರಂಪಾಡಿ ಹಾಗೂ ಬಂಟ್ವಾಳದಿಂದ ಪುಣಚದ ಉದಯ ಕುಮಾರ್ ದಂಬೆ ಆಯ್ಕೆಯಾಗಿದ್ದಾರೆ.


ವಾಣಿಯನ್ ಸಮುದಾಯದ ಏಕಮಾತ್ರ ಕ್ಷೇತ್ರವಾಗಿರುವ ಪೆರ್ಣೆ ಮುಚ್ಚಿಲೋಟ್ ಭಗವತಿ ಕ್ಷೇತ್ರದ ಆಡಳಿತ ಮಂಡಳಿಯಲ್ಲಿ 7 ಮಂದಿ ಕಾರ್ನವರು ಹಾಗೂ 9 ಮಂದಿ ಆಡಳಿತ ಮಂಡಳಿ ಸದಸ್ಯರನ್ನು ಒಳಗೊಂಡಿದೆ. ಈ ಪೈಕಿ ಆಡಳಿತ ಮಂಡಳಿಯ 9 ಸ್ಥಾನಗಳಲ್ಲಿ ಎರಡು ಸ್ಥಾನಗಳು ಕರ್ನಾಟಕದಿಂದ ಆಯ್ಕೆ ಮಾಡಲಾಗಿದೆ. ಉಳಿದಂತೆ ಎಲ್ಲಾ ಎಳು ಸ್ಥಾನಗಳಿಗೆ ಕೇರಳ ರಾಜ್ಯದಿಂದ ಆಯ್ಕೆ ಮಾಡಲಾಗಿದೆ. ಮೆ.3ರಂದು ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನೂತನ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.



ದಾಮೋದರ ಪಾಟಾಳಿ:
ಮುಕ್ರಂಪಾಡಿ ನಿವಾಸಿಯಾಗಿರುವ ದಾಮೋದರ ಪಾಟಾಳಿಯವರು ಪ್ರಸ್ತುತ ವಿಶ್ವಹಿಂದು ಪರಿಷತ್ ಪುತ್ತೂರು ನಗರ ಪ್ರಖಂಡದ ಅಧ್ಯಕ್ಷರಾಗಿರುತ್ತಾರೆ. ಇವರು ಪುತ್ತೂರು ಜೇಸಿಐಯ ಮಾಜಿ ಅಧ್ಯಕ್ಷರು, ವಲಯ ತರಬೇತುದಾರರು, ಪುತ್ತೂರು ವಾಣಿಯನ್/ಗಾಣಿಗ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು ಸೇರಿದಂತೆ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಪರ್ಣೆ ಮುಚ್ಚಿಲೋಟ್ ಕ್ಷೇತ್ರದಲ್ಲಿ ನಡೆದ ಕಳಿಯಾಟ ಮಹೋತ್ಸವದ ಕಾರ್ಯದರ್ಶಿಯಾಗಿ, ಕಾರ್ಯಕ್ರಮದಲ್ಲಿ ಆಹಾರ ವಿತರಣೆ ಜವಾಬ್ದಾರಿಯನ್ನು ನಿರ್ವಹಿಸಿದ್ದರು.
ಉದಯ ಕುಮಾರ್ ದಂಬೆ:
ಪುಣಚ ಗ್ರಾಮದ ದಂಬೆ ನಿವಾಸಿಯಾಗಿರುವ ಉದಯ ಕುಮಾರ್ ಅವರು ಪುಣಚ ಮಹಿಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಪುಣಚ ಗ್ರಾ.ಪಂ ಮಾಜಿ ಅಧ್ಯಕ್ಷ, ವಿಟ್ಲ ವಾಣಿಯನ್ ಗಾಣಿಗ ಸಮುದಾಯ ಸೇವಾ ಸಂಘದ ಮಾಜಿ ಅಧ್ಯಕ್ಷರಾಗಿರುವ ಇವರು ಕಳಿಯಾಟ ಮಹೋತ್ಸವದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.










