






ಪುತ್ತೂರು: ಬೊಳುವಾರು ಶ್ರೀ ದುರ್ಗಾ ಪರಮೇಶ್ವರಿ ಉಳ್ಳಾಲ್ತಿ ಮಲರಾಯ ಸಪರಿವಾರ ದೇವಸ್ಥಾನದಲ್ಲಿ ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ (ರಿ) ವತಿಯಿಂದ ನಡೆದ ತಿಂಗಳ ತಾಳಮದ್ದಳೆ ಕಾರ್ಯಕ್ರಮದಲ್ಲಿ ಮೇ ತಿಂಗಳಿನ ತಾಳಮದ್ದಳೆ “ಧರ್ಮ ಸಾಮ್ರಾಜ್ಯ” ಪ್ರಸಂಗವು ಮೇ 3ರಂದು ಅಪರಾಹ್ನ ಕ್ಷೇತ್ರದಲ್ಲಿ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲೆಚ್ಚಾರು, ರಾಜಗೋಪಾಲ ಜೋಶಿ, ಚೆಂಡೆ ಮತ್ತು ಮದ್ದಳೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ ಪ್ರಚೇತ್ ಆಳ್ವ, ಜ್ಯೋತಿರಾದಿತ್ಯ, ಪ್ರಮಥ್, ರಿಷಭ್ ರಾಮ್, ಸುಧನ್ವ, ಅನೀಶ್, ಗೌತಮ್, ಶ್ರೀಯಾ, ಆಯುಷ್, ಸಮರ್ಥ್ ಹಾಗೂ ಪ್ರತಿಷ್ಠಾನದ ಇತರ ವಿದ್ಯಾರ್ಥಿಗಳು ಸಹಕರಿಸಿದರು.



ಅರ್ಥಧಾರಿಗಳಾಗಿ ಗುಂಡ್ಯಡ್ಕ ಈಶ್ವರ ಭಟ್, ಭಾಸ್ಕರ ಶೆಟ್ಟಿ, ಗುಡ್ಡಪ್ಪ ಬಲ್ಯ, ಪ್ರಸನ್ನ ಕುಮಾರ್ ಬಳ್ಳಾಲ್, ಡಾ. ಗೀತಾ ಕುಮಾರಿ, ಪ್ರಚೇತ್ ಆಳ್ವ, ಪ್ರವೀಣ್ ಬಲ್ಯಾಯ ಪಾಲ್ಗೊಂಡರು. ಪ್ರತಿಷ್ಠಾನದ ವಿದ್ಯಾರ್ಥಿ ವಿರಾಜಿತ್‌ನ ಹುಟ್ಟುಹಬ್ಬದ ಪ್ರಯುಕ್ತ ತಿಂಗಳ ತಾಳಮದ್ದಳೆಯ ಪ್ರಾಯೋಜಕತ್ವವನ್ನು ವಹಿಸಿದ ಮಾಜಿ ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ದಂಪತಿಗಳಿಗೆ ಹಿರಿಯ ಯಕ್ಷಗಾನ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ ಶಾಲು ಹಾಕಿ ಅಭಿನಂದಿಸಿದರು.
ಸಂಘದ ಸದಸ್ಯರಾದ ವಸಂತ ನಾಯಕ್ ಅಜೇರು, ಬಾಲಸುಬ್ರಹ್ಮಣ್ಯ ಶರ್ಮ, ಅನಂತ ನಾರಾಯಣ, ರಾಮಕೃಷ್ಣ ನಾಯಕ್, ರಾಮಚಂದ್ರ, ಗಣೇಶ್ ಡಿ.ಎಸ್., ರಾಮ್ ಪ್ರಕಾಶ್, ಹರೀಶ್ ಎ ಪುಣಚ ಮೊದಲಾದವರು ಸಹಕರಿಸಿದರು. ಪ್ರಸನ್ನ ಕುಮಾರ್ ಬಳ್ಳಾಲ್ ಸ್ವಾಗತಿಸಿ, ಸಂಘದ ಕಾರ್ಯದರ್ಶಿ ಶಂಕರ ಭಟ್ ಧನ್ಯವಾದಗೈದರು. ರಾಮ ಕೆ. ಕಾರ್ಯಕ್ರಮ ನಿರೂಪಿಸಿದರು.










