







ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್, ಕೆಮ್ಮಾಯಿ ಮತ್ತು ವಾಟರ್ ಸಪ್ಲೆ ಫೀಡರ್ ನಲ್ಲಿ ಮೇ 05 ರಂದು ಪೂರ್ವಾಹ್ನ 10ರಿಂದ ಅಪರಾಹ್ನ 5:30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.


ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೆಎಸ್‌ಆರ್‌ಟಿಸಿ, ಟ್ಯಾಕ್ಸಿ ಸ್ಟಾಂಡ್. ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್, ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ. ದರ್ಜೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರೋಡ್, ಎ.ಪಿ.ಎಂ.ಸಿ.ರೋಡ್, ಸಾಮೆತ್ತಡ್ಕ, ಎಂ.ಟಿ. ರೋಡ್, ಚಿಕ್ಕಪುತ್ತೂರು, ಮಡಿವಾಳಕಟ್ಟೆ, ಕೋರ್ಟ್ ರೋಡ್, ಮಿನಿ ವಿಧಾನ ಸೌಧ, ಚೇತನಾ ಹಾಸ್ಪಿಟಲ್, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರಕಾರಿ ಆಸ್ಪತ್ರೆ, ಕರ್ಮಲ, ಬೊಳ್ಳಾರು, ಬೀರ್ನಹಿತ್ತು, ಚಿಕ್ಕಮುಡ್ಯೂರು, ಕೆಮ್ಮಾಯಿ ಮಹಾವಿಷ್ಣು ದೇವಸ್ಥಾನ, ಬಡಾವು, ಸಾಲ್ಮರ ಮತ್ತು ನೆಕ್ಕಿಲಾಡಿ ನೀರು ಸರಬರಾಜು ಘಟಕ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.



ಪುತ್ತೂರು-ಬೊಳುದಾರು ಎಂಬಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ವಿದ್ಯುತ್ ಮಾರ್ಗದ ಸ್ಥಳಾಂತರ ಕಾಮಗಾರಿ ಇರುವುದರಿಂದ, ಮೇ 5ರಂದು ಪೂರ್ವಾಹ್ನ 10 ರಿಂದ ಸಾಯಂಕಾಲ 5:30 ಗಂಟೆಯವರೆಗೆ ಪುತ್ತೂರು-ಕಡಬ-ಸುಬ್ರಹ್ಮಣ್ಯ ಹಾಗೂ 33ಕೆ.ವಿ ಪುತ್ತೂರು-ಸವಣೂರು-ನೆಲ್ಯಾಡಿ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ 33/11 ಕೆವಿ ಕಡಬ ವಿದ್ಯುತ್ ಉಪಕೇಂದ್ರ, 33/11ಕೆವಿ ನೆಲ್ಯಾಡಿ ವಿದ್ಯುತ್ ಉಪಕೇಂದ್ರ ಹಾಗೂ 33/11ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲಾ 11 ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಹಾಗೂ 33/11ಕೆವಿ ಬಿಂದು ವಿದ್ಯುತ್ ಉಪಕೇಂದ್ರರವರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.










