ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಕುಮಾರ ಕೆ.ಜೆ ಅವರು ಕರ್ತವ್ಯಕ್ಕೆ ಹಾಜರಿ

0

ಬಡಗನ್ನೂರು: ಕಡಬ ತಾಲೂಕು ಕೊಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕ ಕುಮಾರ ಕೆ.ಜೆ ರವರು ಇಲಾಖಾ ಆದೇಶದಂತೆ ಪದೋನ್ನತಿ ಪಡೆದು ಬಡಗನ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಇವರು ಕೊಣಾಜೆಯಲ್ಲಿ ಸಹಶಿಕ್ಷಕರಾಗಿ, ಬಂಟ್ರ, ಕಡಬ, ನೂಜಿಬಾಳ್ತಿಲ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಕರ್ತವ್ಯವನ್ನು ನಿರ್ವಹಿಸಿದ್ದರು.

ನೂತನ ಕರ್ತವ್ಯಕ್ಕೆ ಹಾಜರಾದ  ಮುಖ್ಯ ಶಿಕ್ಷಕ ಕುಮಾರ್ ಕೆ.ಜೆ ರವರಿಗೆ ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷ ಗಿರೀಶ್ ಗೌಡ ಕನ್ನಯ ಹೂಗುಚ್ಛ ನೀಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶಾಲಾ ಪದವೀಧರ ಶಿಕ್ಷಕಿ ವಿಜಯಲಕ್ಷ್ಮಿ, ಉಪಾಧ್ಯಕ್ಷೆ  ಸುಲೋಚನ ಡಿ,  ಸುನೀತಾ ಎ,ವಿಜಯಲಕ್ಷ್ಮಿ, ಲತಾಕುಮಾರಿ, ಚಂದ್ರಿಕಾ, ಪ್ರೇಮಾ ಕೆ, ದಾಮೋದರ ಪಿ, ಶೋಭಾ ಹಾಗೂ ಕೊಣಾಜೆ ಶಾಲಾ ಮುಖ್ಯಗುರು ರಾಮಕೃಷ್ಣ ಕೆ, ಚೆನ್ನಾವರ ಶಾಲಾ ಮುಖ್ಯ ಗುರು ಮಲ್ಲೇಶಯ್ಯ‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here