






ಪುತ್ತೂರು: ಪುತ್ತೂರು -ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿಯಿಂದ ಚತುಷ್ಪಥ ರಸ್ತೆ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ 13 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಪುತ್ತೂರಿನ ಬೊಳುವಾರಿನಿಂದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಈ ರಸ್ತೆ ನೆಕ್ಕಿಲಾಡಿ ತನಕ ಚತುಷ್ಪಥ ರಸ್ತೆಯಾಗಿ ಅಭಿವೃದ್ದಿ ಹೊಂದುತ್ತಿದ್ದು ಈ ಕಾಮಗಾರಿಗೆ ಅನುದಾನವೂ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಇದೇ ರಸ್ತೆಯ ನೆಕ್ಕಿಲಾಡಿ ಪೆಟ್ರೋಲ್ ಪಂಪ್ ಬಳಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದ ಬಳಿಕ ಅಲ್ಲಿಂದ ಉಪ್ಪಿನಂಗಡಿ ಪೇಟೆಯಾಗಿ ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯನ್ನು ಸಂಪರ್ಕ ಮಾಡಲಿದ್ದು ಪುತ್ತೂರು ವಿಧಾನಸಭಾ ಕ್ಷೆತ್ರ ವ್ಯಾಪ್ತಿಯೊಳಗೆ ಈ ಕಾಮಗಾರಿ ನಡೆಯಲಿದೆ. ಸುಮಾರು 13 ಕೋಟಿ ರೂ ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಶಾಸಕರು ಈ ಹಿಂದೆ ವಾಗ್ದಾನ ನೀಡಿದಂತೆ ಉಪ್ಪಿನಂಗಡಿಯಿಂದ ಗುರುವಾಯನಕೆರೆ ಸಂಪರ್ಕ ರಾಜ್ಯ ಹೆದ್ದಾರಿಗೆ ಉಪ್ಪಿನಂಗಡಿ ಪೇಟೆಯ ರಸ್ತೆಗೆ ಸ್ವಾತಂತ್ರ್ಯ ಹೋರಾಟಗಾರರೋರ್ವರ ಹೆಸರು ನಾಮಕರಣವಾಗಲಿದೆ. ಇದು ಬಹುಕಾಲದ ಬೇಡಿಕೆಯಾಗಿದ್ದು ಈ ಹಿಂದೆ ಅಶೋಕ್ ರೈ ಶಾಸಕರಾಗುವ ಮೊದಲು ಇದೇ ರಸ್ತೆಗೆ ಅನುದಾನ ಮಂಜೂರಾಗಿದೆ ಆದರೆ ಅನುದಾನ ಬಿಡುಗಡೆಯಾಗಿರಲಿಲ್ಲ. ಇದೀಗ ಶಾಸಕರ ಪ್ರಯತ್ನದ ಮೂಲಕ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಶೀಘ್ರ ಪ್ರಾರಂಭವಾಗುವ ಮೂಲಕ ಬಹುಕಾಲದ ಬೇಡಿಕೆಯೊಂದು ಈಡೇರಲಿದೆ.



ಲೋಕೋಪಯೋಗಿ ಇಲಾಖೆಯಿಂದ 13 ಕೋಟಿ ಅನುದಾನ ಬಿಡುಗಡೆಯಾಗಿದ್ದು ಪುತ್ತೂರು ಉಪ್ಪಿನಂಗಡಿ ರಸ್ತೆಯ ನೆಕ್ಕಿಲಾಡಿಯಿಂದ ಹೈವೇ ಸಂಪರ್ಕ ಮಾಡಿ ಉಪ್ಪಿನಂಗಡಿ ಪೇಟೆಯ ಮೂಲಕ ಹಾದು ಹೋಗುವ ಉಪ್ಪಿನಂಗಡಿ ಗುರುವಾಯನಕೆರೆ ರಸ್ತೆ ಚತುಷ್ಪಥವಾಗಿ ಅಭಿವೃದ್ದಿ ಹೊಂದಲಿದೆ. ಈ ರಸ್ತೆ ಅಭಿವೃದ್ದಿಯಾಗಬೇಕೆಂಬುದು ಬಹುಕಾಲದ ಬೇಡಿಕೆಯೂ ಆಗಿದ್ದು ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ.
ಅಶೋಕ್ ರೈ, ಶಾಸಕರು ಪುತ್ತೂರು










