






ಪುತ್ತೂರು: ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ನಿರ್ಮಾಣದ ಕನ್ನಡ ಚಲನಚಿತ್ರ ’ಮಂಗಮಾಯ’ ಮೇ.8ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರು, ವ್ಯವಸ್ಥಾಪಕರು ಆಗಿರುವ ಪ್ರಸನ್ನ ಪುತ್ತೂರು ಮತ್ತು ಅವರ ಸಹೋದರ ಕಲಾ ನಿರ್ದೇಶಕರಾಗಿರುವ ಪ್ರಸಾದ್ ಪುತ್ತೂರು ಅವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ಸಣ್ಣ ವೆಚ್ಚದ, ನೈಜ ಘಟನೆ ಆಧಾರಿತ, ಒಂದೇ ದಿನ ನಡೆಯವ ಕಥಾ ಹಂದರವಾಗಿದ್ದು, ಯಾವುದೇ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ, ಒಂದೇ ಲೊಕೇಷನ್ ಮತ್ತು ಒಂದೇ ಶೆಡ್ಯೂಲ್ನಲ್ಲಿ ಶೂಟ್ ಮಾಡಲ್ಪಟ್ಟ ಚಲನಚಿತ್ರ ಇದಾಗಿದೆ. ಹಲವು ಕರಾವಳಿಯ ಕಲಾವಿದರುಗಳ, ತಂತ್ರಜ್ಞರ ಸಮಾಗಮದಲ್ಲಿ ಈ ಚಿತ್ರವು ಕರಾವಳಿ ಕನ್ನಡದ ಭಾಷ ಸೊಗಡು ಇರುವ ಚಿತ್ರವಾಗಿದೆ ಎಂದವರು ಹೇಳಿದರು.



43 ದಿನದಲ್ಲಿ ನಡೆದ ಚಿತ್ರ
ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ಉದ್ಯೋಗ ಅರಸಿ ಬೇಸತ್ತ ನಾಯಕ ಮತ್ತು ಕೊನೆಗೆ ಲಾಡ್ಜ್ವೊಂದರಲ್ಲಿ ರೂಮ್ಬಾಯ್ ಆಗಿ ಕೆಲಸ ನಿರ್ವಹಿಸುವ ಮೂಲಕ ಒಟ್ಟು ಚಿತ್ರದಲ್ಲಿ ಲಾಡ್ಜ್ನ ಚಿತ್ರಣವೇ ಹೆಚ್ಚು ಕಾಣಸಿಗುವ ಮೂಲಕ ಥ್ರಿಲ್ಲರ್ ಮತ್ತು ಸಸ್ಪೆನ್ಸ್ ಇರುತ್ತದೆ. ಮೈಸೂರು ವಿದ್ಯಾರಣ್ಯಪುರದ ಲಾಡ್ಜ್ನಲ್ಲಿ ಶೂಟಿಂಗ್ ಮಾಡಲಾಗಿದ್ದು, ಕೇವಲ 43 ದಿನದಲ್ಲಿ ಶೂಟಿಂಗ್ ನಡೆದಿದೆ ಎಂದು ಚಿತ್ರ ತಂಡ ತಿಳಿಸಿದೆ. ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ಮಾರ್ಕೆಟಿಂಗ್ ಮತ್ತು ಸೋಶಿಯಲ್ ಫಿಲ್ಮ್ ಇಂಡಿಯಾ ಸಂಸ್ಥೆಯ ಹರ್ಷ ಕಟ್ಟಿಮನಿ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.
ಪುತ್ತೂರು ಮರೀಲ್ನ ಪ್ರಸಾದ್
ಪ್ರಸಾದ್ ಅವರು ಮೂಲತಃ ಮರೀಲ್ನವರಾಗಿದ್ದು, ಮೈಸೂರಿನಲ್ಲಿ ಕಲಾ ಪದವಿ ಮುಗಿಸಿ, ಸಿನಿಮಾ ಕ್ಷೇತ್ರದಲ್ಲಿ ವೃತ್ತಿ ಆರಂಭಿಸುವ ಆಸಕ್ತಿಯೊಂದಿಗೆ ಕಾಶಿನಾಥ್ ಅವರ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸಿ ತದನಂತರ ಹತ್ತಾರು ಸಿನಿಮಾಗಳಲ್ಲಿ ನಟನೆ, ವಿಡಿಯೋಗ್ರಫಿ, ಸ್ಕ್ರೀಫ್ಟ್, ಆರ್ಟ್, ನಿರ್ದೇಶಕರಾಗಿ ದುಡಿದಿದ್ದಾರೆ. ಇದು ಅವರ ನಿದೇಶನದ ಚೊಚ್ಚಲ ಚಿತ್ರವಾಗಿದೆ










