ಉರ್ಲಾಂಡಿ: ಶ್ರೀ ನಾಗ ರಕ್ತೇಶ್ವರಿ ಭೈರವ ದೈವಾದಿಗಳ ಬನದಲ್ಲಿ 19ನೇ ವರ್ಷದ ಪ್ರತಿಷ್ಠಾ ಮಹೋತ್ಸವ

0

ಪುತ್ತೂರು: ಉರ್ಲಾಂಡಿ ಬೈಪಾಸ್ ರಸ್ತೆಯ ಬಳಿಯ ಶ್ರೀ ನಾಗ ರಕ್ತೇಶ್ವರಿ ಭೈರವ ವಾದಿಗಳ ಸ್ಥಾನ (ಬನ)ದಲ್ಲಿ 19ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಬಹಳ ವಿಜ್ರಂಭಣೆಯಿಂದ ನಡೆಯಿತು.


ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ನಾಗದೇವರಿಗೆ ರಕ್ತೇಶ್ವರಿ ಮತ್ತು ಗುಳಿಗ ವೈವಗಳಿಗೆ ಅಭಿಷೇಕ ಮತ್ತು ತಂಬಿಲಗಳು ಕುಕ್ಕಾಡಿ ತಂತ್ರಿ ಪ್ರೀತಮ್ ಪುತ್ತೂರಾಯ ಅವರ ನೇತೃತ್ವದಲ್ಲಿ ನಡೆಯಿತು. ಆನಂತರ ಮಹಾಪೂಜೆ ನಡೆದು ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು. ಸಂಜೆ ಸಾರ್ವಜನಿಕ ದುರ್ಗಾ ಪೂಜೆ ಮತ್ತು ಸರಸ್ವತಿ ಭಜನಾ ಮಂದಿರದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.

ನೂರಾರು ಜನ ಭಕ್ತಾದಿಗಳು ಭಾಗವಹಿಸಿ ವಿವಿಧ ಸೇವೆಗಳನ್ನು ಮಾಡಿಸಿ ದೇವರ ಕೃಪೆಗೆ ಪಾತ್ರರಾದರು ಆಡಳಿತ ಸಮಿತಿಯ ಅಧ್ಯಕ್ಷ ಲೋಕೇಶ ಹೆಗ್ಡೆ. ಯು, ಕಾರ್ಯದರ್ಶಿ ಗಣೇಶ ಹೆಗ್ಡೆ, ಖಜಾಂಚಿ ನಾರಾಯಣ ಹೆಗ್ಡೆ, ರಘುರಾಮ ಹೆಗ್ಡೆ, ಉಮಾಕಾಂತ, ಶ್ರೀಕಾಂತ, ಯೋಗೀಶ್, ಸೂರ್ಯನಾರಾಯಣ, ಶಿವಾನಂದ, ಪ್ರವೀಣ, ರಾಜೇಶ್ ಹೆಗ್ಡೆ, ಮೊದಲಾದವರು ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು. ಮಹಾಲಸಾ ಕಟ್ಟಡದವರು ಅನ್ನದಾನದ, ಗಣೇಶ ಹೆಗ್ಡೆಯವರು ಉಪಹಾರದ ಮತ್ತು ರಾಜೇಶ್ ಪಾನೀಯದ ವ್ಯವಸ್ಥೆ ಮಾಡಿದ್ದರು. ಹಿಂದು ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here