ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎನ್‌ಸಿಸಿ ವಾರ್ಷಿಕ ತರಬೇತಿ ಶಿಬಿರ – ಗ್ರೂಪ್‌ ಕಮಾಂಡರ್ ಕರ್ನಲ್‌ ವಿರಾಜ್‌ ಕಾಮತ್‌ ಭೇಟಿ

0

ಪುತ್ತೂರು: ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಏಕತೆ ಹಾಗೂ ಸ್ವಯಂ ಶಿಸ್ತು ಇವುಗಳನ್ನು ರೂಢಿಸಿ, ಬೆಳೆಸಿ ರಾಷ್ಟ್ರ ಸೇವೆಗೆ ಅಣಿಗೊಳಿಸುವ ಯೋಜನೆಯಾದ ಎನ್.ಸಿ.ಸಿ ಯ ವಿಶೇಷ ಕಾರ್ಯಯೋಜನೆಗಳಲ್ಲಿ ಒಂದಾದ “ವಾರ್ಷಿಕ ತರಬೇತಿ ಶಿಬಿರವು ಮೇ 5ರಿಂದ ಮೇ 15ರವರೆಗೆ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ನಡೆಯುತ್ತಿದ್ದು, ಮೇ 9 ರಂದು ಎನ್‌ಸಿಸಿ ಮಂಗಳೂರಿನ ಗ್ರೂಪ್‌ ಕಮಾಂಡರ್‌ ಕರ್ನಲ್‌ ವಿರಾಜ್‌ ಕಾಮತ್‌ ಭೇಟಿ ನೀಡಿ ಶಿಬಿರ ಪರಿಶೀಲಿಸಿ, ಅಚ್ಚುಕಟ್ಟಿನ ವ್ಯವಸ್ಥೆ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.


ಈ ಶಿಬಿರದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ರಾಷ್ಟ್ರೀಯ ವಿಪತ್ತುಗಳ ಜರುಗಿದಾಗ ಕೂಡಲೇ ಸ್ಪಂದಿಸುವ ಯುವವಿದ್ಯಾರ್ಥಿ ಸಮೂಹವನ್ನು ತಯಾರು ಮಾಡುವ YUVA AAPDA MITRA  ತರಬೇತಿಯನ್ನು ಕಾಲೇಜು ವಿಭಾಗದ ಆಯ್ದ N.C.C. Cadet ಗಳಿಗೆ ಆಯೋಜಿಸಲಾಗಿರುತ್ತದೆ.


19 KARNATAKA BATALION MADIKERI ಇದರ ಮಾರ್ಗದರ್ಶನದಲ್ಲಿ ಶಿಬಿರವು ನಡೆಯುತ್ತಿದೆ. ಗ್ರೂಪ್‌ ಕಮಾಂಡರ್‌ ಭೇಟಿ ವೇಳೆ ಶಿಬಿರದ ಮಾರ್ಗದರ್ಶಕರಾದ 19 ಕರ್ನಾಟಕ ಬೆಟಾಲಿಯನ್‌ ಮಡಿಕೇರಿ ಇದರ ಕಮಾಂಡಿಂಗ್‌ ಆಫೀಸರ್‌ ಕರ್ನಲ್‌ ರೆಜಿತ್‌ ಮುಕುಂದನ್‌, ಆಡಳಿತಾಧಿಕಾರಿ ಲೆ. ಕರ್ನಲ್‌ ಶ್ರೀನಿವಾಸನ್‌, ಸುಬೇದಾರ್‌ ಮೇಜರ್‌ ಶಿಜು, ಎಎನ್‌ಒ ಭಾಮಿ ಅತುಲ್‌ ಶೆಣೈ ಹಾಜರಿದ್ದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್‌, ಶಾಲಾ ಮುಖ್ಯಗುರು ಸತೀಶ್‌ ಕುಮಾರ್‌ ರೈ, ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಮಂಕುಡೆ, ಶಿಕ್ಷಕ ವೃಂದ ಉಪಸ್ಥಿತರಿದ್ದರು.


ಶಿಬಿರದಲ್ಲಿ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 22 ಪ್ರೌಢಶಾಲೆಗಳು ಹಾಗೂ 5 ಪದವಿ ಮಹಾವಿದ್ಯಾಲಯಗಳ 670 ಎನ್.ಸಿ.ಸಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸುತ್ತಿದ್ದಾರೆ. ಎನ್.ಸಿ.ಸಿ ಹೊಂದಿರುವ ವಿವಿಧಾ ಶಾಲಾ-ಕಾಲೇಜುಗಳ 20 ಎನ್.ಸಿ.ಸಿ ಅಧಿಕಾರಿಗಳು, ಸುಮಾರು 20 ಮಂದಿ ಭೂಸೇನಾ ಅಧಿಕಾರಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. 

LEAVE A REPLY

Please enter your comment!
Please enter your name here