ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೈಕೋರ್ಟ್ ನ್ಯಾಯಾಧೀಶರಾದ ಇ.ಎಸ್ ಇಂದಿರೇಶ್, ವಿ ಶ್ರೀಶಾನಂದ ಭೇಟಿ

0

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ| ಇ.ಎಸ್ ಇಂದಿರೇಶ್ ಮತ್ತು ನ್ಯಾ| ವಿ. ಶ್ರೀಶಾನಂದ ಅವರು ಭೇಟಿ ನೀಡಿ ಶ್ರೀ ದೇವರ ದರುಶನ ಪಡೆದರು.


ಬೆಳಿಗ್ಗೆ ದೇವಳಕ್ಕೆ ಆಗಮಿಸಿದ ಅವರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಮಾರ್ಗದರ್ಶನದಲ್ಲಿ ಶ್ರೀ ದೇವರಿಗೆ ಶುದ್ಧ ಎಳ್ಳೆಣ್ಣೆ ಸಮರ್ಪಣೆ ಮಾಡಿ, ತುಪ್ಪದ ದೀಪ ಬೆಳಗಿಸಿದರು. ಬಳಿಕ ಶ್ರೀ ದೇವರ ಸತ್ಯಧರ್ಮ ನಡೆಯಲ್ಲಿ ಅವರಿಗೆ ಪ್ರಸಾದ ನೀಡಿ ದೇವಳದ ಗೌರವಾರ್ಥವಾಗಿ ಶಲ್ಯ ತೊಡಿಸಿ ಗೌರವಿಸಲಾಯಿತು.

ಈ ಸಂದರ್ಭ ಪುತ್ತೂರು ನ್ಯಾಯಾಲಯದ ನ್ಯಾಯಾಧೀಶ ದೇವರಾಜ್ ವೈ ಹೆಚ್, ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ, ವಕೀಲರುಗಳಾದ ಮಹೇಶ್ ಕಜೆ, ಭಾಸ್ಕರ ಕೋಡಿಂಬಾಳ, ನರಸಿಂಹಪ್ರಸಾದ್ ಸಹಿತ ಇತರ ವಕೀಲರು ಮತ್ತು ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನ್ಯಾಯಾಧೀಶರ ಮುಂದೆ ವೇದ ಪಠಣ:
ದೇವಳದಲ್ಲಿ ನಡೆಯುವ ವೇದ ಪಾಠ ಶಿಬಿರದ ವಿದ್ಯಾರ್ಥಿಗಳು ನ್ಯಾಯಾಧೀಶರ ಮುಂದೆ ವೇದ ಪಠಿಸಿದರು. ಈ ಸಂದರ್ಭ ನ್ಯಾಯಾಧೀಶರು ಕೂಡಾ ಧ್ವನಿಗೂಡಿಸಿದರು.

LEAVE A REPLY

Please enter your comment!
Please enter your name here