






ಪುತ್ತೂರು: ಸಂಗ್ರಹ ಸಾಕ್ಯಗಳ ಸುಧಾರಣಾ ಸಲಹಾ ಸಮಿತಿ ಸದಸ್ಯರಾಗಿರುವ ಹೈಕೋರ್ಟ್ ನ ಹಿರಿಯ ವಕೀಲ ಎಸ್.ರಾಜಶೇಖರ್ ಹಿಲ್ಯಾರ್ ಅವರು ಮೇ 9ರಂದು ದೆಹಲಿಯಲ್ಲಿ ನಡೆದ ಅಖಿಲ ಭಾರತ ಸ್ಟಾಕ್ ವಿಟ್ನೆಸ್ ರೀಫಾರ್ಮ್ಸ್ ಎಕ್ಸ್‌ಪರ್ಟ್ ಕಮಿಟಿಯ ಸಭೆಯಲ್ಲಿ ಭಾಗವಹಿಸಿದರು.


ಈ ಸಭೆಯಲ್ಲಿ ದೇಶದಾದ್ಯಂತ ಸ್ಟಾಕ್ ವಿಟ್ನೆಸ್ ವ್ಯವಸ್ಥೆಯ ಸುಧಾರಣೆ ಹಾಗೂ ಬಲವರ್ಧನೆಗೆ ಸಂಬಂಧಿಸಿದ ಮಹತ್ವದ ವಿಷಯಗಳ ಕುರಿತು ಸವಿಸ್ತಾರ ಚರ್ಚೆಗಳು ನಡೆಯಿತು. ಸಭೆಯಲ್ಲಿ ಎಸ್. ರಾಜಶೇಖರ್ ಹಿಲ್ಯಾರ್ ಅವರು ಮಂಡಿಸಿದ ಅಮೂಲ್ಯ ಅಭಿಪ್ರಾಯಗಳು ಹಾಗೂ ಸೂಕ್ಷ್ಮ ಒಳನೋಟಗಳಿಗೆ ಸಮಿತಿಯ ಸದಸ್ಯರು ಅತ್ಯಂತ ಸಂತೋಷ ವ್ಯಕ್ತಪಡಿಸಿ ಮೆಚ್ಚುಗೆ ಸೂಚಿಸಿದರು.



ಈ ಪ್ರತಿಷ್ಠಿತ ಸಮಿತಿಯಲ್ಲಿ ಅವರ ಭಾಗವಹಿಸುವಿಕೆ, ಕಾನೂನು ಹಾಗೂ ಸಂಸ್ಥಾತ್ಮಕ ಸುಧಾರಣೆಗಳ ಕಡೆಗಿನ ಅವರ ನಿಷ್ಠೆ ಮತ್ತು ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ.ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಪಿ.ಪಿ.ಹೆಗ್ಡೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.










