ಬೆಳಂದೂರು: ಮೂರು ದಿನಗಳಿಂದ ರಸ್ತೆಯಲ್ಲೇ ಬಿದ್ದುಕೊಂಡಿದೆ ವಿದ್ಯುತ್ ತಂತಿ!

0

ಪುತ್ತೂರು: ಬೆಳಂದೂರು ಗ್ರಾಮದ ಬೊಟ್ಟತ್ತಾರು ಎಂಬಲ್ಲಿ ರಸ್ತೆ ಮದ್ಯೆ ವಿದ್ಯುತ್ ತಂತಿ ಕಡಿದು ಬಿದ್ದಿದ್ದು ಕಳೆದ ಮೂರು ದಿನಗಳಿಂದ ತಂತಿ ಅಲ್ಲೇ ಇದ್ದರೂ ಸಂಬಂಧಪಟ್ಟ ಮೆಸ್ಕಾಂ ಇಲಾಖೆ ಅದನ್ನು ತೆರವು ಮಾಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.


ಇದರಿಂದಾಗಿ ಬೊಟ್ಟತ್ತಾರು ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಕೈಕೊಟ್ಟಿದ್ದು ಜನರು ತೀವ್ರ ತೊಂದರೆ ಎದುರಿಸುವಂತಾಗಿದೆ.ವಿದ್ಯುತ್ ಕಡಿತದಿಂದ ಸ್ಥಳೀಯವಾಗಿ ನೀರಿನ ಸಮಸ್ಯೆ ಉಂಟಾಗಿದ್ದು, ಇದೇ ರಸ್ತೆಯನ್ನು ಉಪಯೋಗಿಸುವ ಸ್ಥಳೀಯ ಹಲವು ಮನೆಯವರಿಗೆ ತೊಂದರೆಯಾಗಿದೆ. ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಿಸಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಮೇ.8ರಂದು ಗಾಳಿ ಮಳೆಗೆ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿ ಮುರಿದು ಬಿದ್ದಿದೆ.ಮೂರು ದಿನಗಳಿಂದ ರಸ್ತೆಯಲ್ಲೇ ವಿದ್ಯುತ್ ತಂತಿ ಬಿದ್ದುಕೊಂಡಿದ್ದರೂ ಮೆಸ್ಕಾಂ ಇಲಾಖೆಯವರು ಅದನ್ನು ಸರಿಪಡಿಸುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿರುವ ಸ್ಥಳೀಯರು ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here