ಪುತ್ತೂರಿನಲ್ಲಿ ಅಪಘಾತ ತಡೆಗೆ ಮೃತ್ಯುಂಜಯ ಜಪ – ಮೇ 12ರಂದು ಮಹಾಲಿಂಗೇಶ್ವರ ಸನ್ನಿಧಾನದಲ್ಲಿ ವಿಶೇಷ ಪೂಜೆ

0

  • ಪುತ್ತೂರು: ಪುತ್ತೂರು ಪರಿಸರದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಅಪಘಾತಗಳ ಹಿನ್ನೆಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಮೇ 12ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಮೃತ್ಯುಂಜಯ ಸೂಕ್ತ ಜಪ ನಡೆಯಲಿದೆ.
  • ಶಾಸಕ ಅಶೋಕ್ ಕುಮಾರ್ ರೈ ಅವರ ಸೂಚನೆಯಂತೆ ಬೆಳಿಗ್ಗೆ 9.30 ರಿಂದ 11.30ರವರೆಗೆ ದೇವಸ್ಥಾನದ ಸನ್ನಿಧಾನದಲ್ಲಿ 1008 ಸಂಖ್ಯೆಯ ಮೃತ್ಯುಂಜಯ ಸೂಕ್ತ ಜಪವನ್ನು ಅನೇಕ ವೈದಿಕರು ಪಠಿಸಲಿದ್ದಾರೆ. ಪ್ರಧಾನ ಅರ್ಚಕ ವಸಂತ ಕೆದಿಲಾಯ ಮತ್ತು ಜಯರಾಮ ಜೋಯಿಸರ ನೇತೃತ್ವದಲ್ಲಿ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.

LEAVE A REPLY

Please enter your comment!
Please enter your name here