ವಿಟ್ಲ:ಕಾರಲ್ಲಿ ಅಕ್ರಮ ಪೆಟ್ರೋಲ್‌ ಸಾಗಾಟ – ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

0

ಪುತ್ತೂರು:ಕಾರೊಂದರಲ್ಲಿ ಅಕ್ರಮ ಪೆಟ್ರೋಲ್ ಸಾಗಾಟ ಪ್ರಕರಣದಲ್ಲಿ 34 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.


14.10.1992ರಂದು ಕಾರೊಂದರಲ್ಲಿ ಅಕ್ರಮ ಪೆಟ್ರೋಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಮಂಜೇಶ್ವರ ನಿವಾಸಿ ಇಬ್ರಾಹಿಂ (28ವ.)ಹಾಗೂ ಸಿದ್ದೀಕ್ ಎಂಬಾತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಕಲಂ 3 ಮತ್ತು ಕಲಂ 23 ಪೆಟ್ರೋಲಿಯಂ ಕಾಯ್ದೆಯಡಿ ಪ್ರಕರಣ (ಅ.ಕ್ರ.124/1992) ದಾಖಲಾಗಿತ್ತು. ಆರೋಪಿ ಸಿದ್ದೀಕ್ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ವಿಟ್ಲ ಠಾಣಾ ಪ್ರೊಬೇಶನರ್ ಪಿಎಸ್‌ಐ ಸಿದ್ದಪ್ಪ, ಎಎಸ್‌ ಐ1 ಜಯರಾಮ್,ಕಾನ್‌ಸ್ಟೇಬಲ್ ಗಳಾದ ಗೋಪಾಲ್, ಯಂಕಪ್ಪ, ಶ್ರೀಶೈಲ್ ಜೋರಾಪುರರವರುಗಳ ತಂಡ ಕನ್ಯಾನ ಗ್ರಾಮದ ಕಬ್ಬಿನ ಮೂಲೆ ಎಂಬಲ್ಲಿ ಮೇ 11ರಂದು ರಾತ್ರಿ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here