ಮೇ, ಜೂನ್ ತಿಂಗಳ ಅಕ್ಕಿ ಮೇ ತಿಂಗಳಿನಲ್ಲಿ ವಿತರಣೆ : ಕಾರ್ಡ್‌ದಾರರಿಗೆ ಎರಡು ಬಾರಿ ಬಯೋ ದೃಢೀಕರಣ

0

ಪುತ್ತೂರು: ರಾಷ್ಟ್ರೀಯ ಆಹಾರ ಭದ್ರತಾ ಪೋರ್ಟಲ್ ಮುಖಾಂತರ ಪಡಿತರ ಚೀಟಿದಾರರಿಗೆ ನೀಡಲಾಗುತ್ತಿರುವ ಮೇ ಹಾಗೂ ಜೂನ್ ತಿಂಗಳ ಅಕ್ಕಿಯನ್ನು ಮೇ ತಿಂಗಳಲ್ಲೇ ವಿತರಿಸಲು ನಿರ್ಧರಿಸಲಾಗಿದ್ದು, ಪ್ರತೀ ಕಾರ್ಡ್‌ದಾರರು ಎರಡು ಬಾರಿ ಬಯೋ ದೃಢೀಕರಣ ನೀಡುವುದು ಕಡ್ಡಾಯವಾಗಿದೆ.

ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಮೇ ಹಾಗೂ ಜೂನ್ ತಿಂಗಳಿನಲ್ಲಿ ನೀಡಲಾಗುವ ತಲಾ 5 ಕೆಜಿ ಅಕ್ಕಿಯನ್ನು ಮೇ ತಿಂಗಳಲ್ಲೇ ಒಟ್ಟಿಗೆ ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ಎರಡು ತಿಂಗಳ ಅಕ್ಕಿಯನ್ನು ಒಂದೇ ಬಾರಿ ವಿತರಿಸುತ್ತಿರುವ ಕಾರಣ, ಫಲಾನುಭವಿಗಳು ನ್ಯಾಯಬೆಲೆ ಅಂಗಡಿಯಲ್ಲಿ ಮೇ ತಿಂಗಳ ಅಕ್ಕಿಗೆ ಒಂದು ಬಾರಿ ಮತ್ತು ಜೂನ್ ತಿಂಗಳ ಅಕ್ಕಿಗೆ ಮತ್ತೊಮ್ಮೆ ಹೀಗೆ ಒಟ್ಟು ಎರಡು ಬಾರಿ ಬೆರಳಚ್ಚು ಮೂಲಕ ಬಯೋ ದೃಢೀಕರಣ ನೀಡಬೇಕಾಗುತ್ತದೆ.

LEAVE A REPLY

Please enter your comment!
Please enter your name here