ಶ್ರೀ ಮಹಾಲಿಂಗೇಶ್ವರ ದೇವರಿಗೆ ಸ್ವರ್ಣ ಕವಚ ನಿರ್ಮಾಣದ ಸಂಕಲ್ಪಕ್ಕೆ ಭಕ್ತರ ಸಹಕಾರ – ಐವರಿಂದ ತಲಾ 1 ಪವನ್ ನಂತೆ 5 ಪವನ್ ಸ್ವರ್ಣ ಸಮರ್ಪಣೆ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸ್ವರ್ಣ ಕವಚ ನಿರ್ಮಾಣ ಮಾಡುವ ಕುರಿತು ಶಾಸಕರ ಸಂಕಲ್ಪದಂತೆ ಭಕ್ತರಿಂದ ಸಹಕಾರ ಸಿಗುತ್ತಿದ್ದು, ಮೇ.12ರಂದು ಐವರು ಭಕ್ತರು ತಲಾ 1 ಪವನ್ ನಂತೆ 5 ಪವನ್ ಸ್ವರ್ಣವನ್ನು ದೇವರಿಗೆ ಸಮರ್ಪಣೆ ಮಾಡಿದ್ದಾರೆ.


ದೇವಳದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಜಯಶ್ರೀ ದಂಪತಿ ಪುತ್ರ ವರುಣ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ರಾಧಾಕೃಷ್ಣ ನಾೖಕ್‌, ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರೂ ಮತ್ತು ಸಮಿತಿ ಸದಸ್ಯರೂ ಆಗಿರುವ ಎ ವಸಂತ ಕೆದಿಲಾಯ, ಆದರ್ಶ ನಾೖಕ್‌ ಉಪ್ಪಿನಂಗಡಿ, ಭರತ್ ಕುಮಾರ್ ಆರಿಗ ಪಟ್ಟೆಗುತ್ತು ಅವರು ತಲಾ 1 ಪವನ್ ಸ್ವರ್ಣವನ್ನು ದೇವರ ಸ್ವರ್ಣ ಕವಚದ ಬಾಬ್ತು ಸಮರ್ಪಣೆ ಮಾಡಿದರು.

ಶಾಸಕ ಅಶೋಕ್ ಕುಮಾರ್ ರೈ ಅವರು ಸ್ವರ್ಣ ಸಮರ್ಪಣೆ ಮಾಡಿದವರನ್ನು ಗೌರವಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ‌ ಅಧ್ಯಕ್ಷ ಈಶ್ಚರ ಭಟ್ ಪಂಜಿಗುಡ್ಡೆ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.

ನನ್ನ ವೈಯುಕ್ತಕ ನೆಲೆಯಲ್ಲಿ 5 ಪವನ್ ಸ್ವರ್ಣ ನೀಡುತ್ತೇನೆ
ಮಹಾಲಿಂಗೇಶ್ವರ ದೇವರಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ 10 ಕೆ. ಜಿ ಬಂಗಾರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಭಕ್ತರಿಂದ ಶ್ರೀ ದೇವರ ಸ್ವರ್ಣ ಕವಚಕ್ಕೆ ಸಹಕಾರ ಬೇಕು. ಅದೇ ರೀತಿ ನಾನು ವೈಯುಕ್ತಿಕ ನೆಲೆಯಲ್ಲಿ 5 ಪವನ್ ಚಿನ್ನವನ್ನು ನೀಡುತ್ತೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.

LEAVE A REPLY

Please enter your comment!
Please enter your name here