






ಪುತ್ತೂರು: ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ತಿಂಗಳಾಡಿ ಇಲ್ಲಿ ಮಜ್ಲಿಸುನ್ನೂರ್, ಸ್ಮಾರ್ಟ್ ಟಿ.ವಿ ಉದ್ಘಾಟನೆ ಹಾಗೂ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ ಸಮಾರಂಭ ಸಂಸ್ಥೆಯ ಅಧ್ಯಕ್ಷ ಸಿದ್ದೀಕ್ ಸುಲ್ತಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೌಲಾನಾ ಫಾರೂಕ್ ಸಅದಿ ಮಜ್ಲಿಸುನ್ನೂರ್‌ಗೆ ನೇತೃತ್ವ ನೀಡಿದರು. ಕೂಡುರಸ್ತೆ ಮುದರ್ರಿಸ್ ಅಶ್ರಫ್ ದಾರಿಮಿ, ತ್ಯಾಗರಾಜ ಖತೀಬ್ ಮಹಮ್ಮದ್ ದಾರಿಮಿ, ತಿಂಗಳಾಡಿ ಖತೀಬ್ ಮನ್ಸೂರ್ ಫೈಝಿ ಶುಭ ಹಾರೈಸಿದರು. ಸಂಸ್ಥೆಯ ಶಿಕ್ಷಕ ಅಬ್ದುಲ್ ಸತ್ತಾರ್ ಕೌಸರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.



ಅತಿಥಿಗಳು ಸ್ಮಾರ್ಟ್ ಟಿ. ವಿ ಉದ್ಘಾಟಿಸಿದರು. ಪವಿತ್ರ ಹಜ್ ಯಾತ್ರೆಗೆ ತೆರಳುತ್ತಿರುವ ಫಾರೂಕ್ ಸಅದಿ ಹಾಗೂ ಅಮಾನ್ ಕಣ್ಣೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿ ಪಿ.ಕೆ ಮಹಮ್ಮದ್ ಕೂಡುರಸ್ತೆ, ಹಿದಾಯತ್ ಕಣ್ಣೂರು, ಉಮರ್ ಅಝ್ಹರಿ, ಮಹಮ್ಮದ್ ಹಾಜಿ ಉಪಸ್ಥಿತರಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದರ್ಬೆ, ಕೋಶಾಧಿಕಾರಿ ಮಹಮ್ಮದ್ ಕುಂಞಿ ಪಟ್ಟೆ, ಉಪಾಧ್ಯಕ್ಷ ಅಬ್ದುಲ್ಲ ಪಟ್ಟೆ, ಕಾರ್ಯದರ್ಶಿ ಲತೀಫ್ ಆದ್ರೋಡಿ, ಇಬ್ರಾಹಿಂ ಹಾಜಿ ದರ್ಬೆ, ಲತೀಪ್ ಅಂಙತ್ತಡ್ಕ, ರಝಾಕ್ ದರ್ಬೆ, ಸಯೀದ್ ಬೇರಿಕೆ, ಹಾರಿಸ್ ಬೋಳೋಡಿ, ಶಕೀಲ್ ಹಾಗೂ ಮದ್ರಸ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.












