ಪ್ರಗತಿ ಸ್ಟಡಿ ಸೆಂಟರ್‌ನ ಮೊಂಟೆಸರಿ ವಿದ್ಯಾರ್ಥಿಗಳಿಗೆ ಶೇ.100 ಉದ್ಯೋಗದಲ್ಲಿ ಭದ್ರತೆ: ರಾಜ್ಯದ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕಿಯರಾಗಿ ನೇಮಕ

0

ಪುತ್ತೂರು: ಇಂದಿನ ಯುಗದಲ್ಲಿ ಮಕ್ಕಳ ಪ್ರಾಥಮಿಕ ಶಿಕ್ಷಣ ಹಾಗೂ ವೈಯಕ್ತಿಕ ಬೆಳವಣಿಗೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣದೊಂದಿಗೆ ಬೆಳೆಸಲು ನರ್ಸರಿ ಶಿಕ್ಷಣದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನರ್ಸರಿ ಶಿಕ್ಷಕಿಯರಿಗೆ ಅತ್ಯುತ್ತಮ ತರಬೇತಿ ನೀಡುವುದು ಅತ್ಯಾವಶ್ಯಕವಾಗಿದೆ. ಇತ್ತೀಚಿಗೆ ಎಲ್ಲಾ ಕಡೆಗಳಲ್ಲಿ ನರ್ಸರಿ ತರಬೇತಿ ಕೋರ್ಸ್ ಜನಪ್ರೀಯವಾಗಿದ್ದು, ಯುವತಿಯರು ಈ ಕ್ಷೇತ್ರದಲ್ಲಿ ಉದ್ಯೋಗ ಅವಕಾಶಗಳಿಗಾಗಿ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ.


ಈ ಅರಿವಿನೊಂದಿಗೆ ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯು ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸ್‌ನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಮಕ್ಕಳಿಗೆ ಭಾವಪೂರ್ಣ ಶಿಕ್ಷಣ ನೀಡಬಲ್ಲ ಸಮರ್ಪಕ ಶಿಕ್ಷಕರನ್ನು ರೂಪಿಸುತ್ತಿದೆ. ನರ್ಸರಿ ತರಬೇತಿ ಕೋರ್ಸ್ ಎಂದರೆ ಮಕ್ಕಳ ಶಿಕ್ಷಣ ಮತ್ತು ನೈತಿಕ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ನೈಪುಣ್ಯತೆ ಮತ್ತು ತಂತ್ರಗಳನ್ನು ಕಲಿಸುವ ಒಂದು ವಿಶಿಷ್ಟ ತರಬೇತಿ ಕ್ರಮವಾಗಿದೆ. ಈ ತರಬೇತಿಯಲ್ಲಿ ಮಕ್ಕಳ ಮನೋವಿಜ್ಞಾನ, ಮಕ್ಕಳ ಭಾಷಾ ಅಭಿವೃದ್ಧಿ, ಗಣಿತದ ಪ್ರಾಥಮಿಕ ಅರಿವು, ವಿಜ್ಞಾನ ಮತ್ತು ಪರಿಸರ ಜ್ಞಾನ, ನೈತಿಕ ಶಿಕ್ಷಣ, ಸೃಜನಾತ್ಮಕ, ಸಾಂಸ್ಕ್ರತಿಕ ಚಟುವಟಿಕೆಗಳು, ಶಾರೀರಿಕ- ಮಾನಸಿಕ ಬೆಳವಣಿಗೆ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ನೈತಿಕ ಮೌಲ್ಯಗಳ ಬೋಧನೆಗೆ ಹೆಚ್ಚು ಒತ್ತು ನೀಡುಲಾಗುತ್ತದೆ.


ಕೋರ್ಸ್‌ನ ವಿಷೇಶ ಆಕರ್ಷಣೆ :

ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯು NTT ಕೋರ್ಸ್‌ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ SEN ಶಿಕ್ಷಣ(ವಿಶೇಷ ಶೈಕ್ಷಣಿಕ ಅಗತ್ಯತೆಗಳು) ಮಕ್ಕಳಿಗಾಗಿ ವಿಶೇಷ ಬೋಧನ ವಿಧಾನದ ತರಬೇತಿಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಶಿಕ್ಷಕರು ಸಾಮಾನ್ಯ ಮಕ್ಕಳ ಜೊತೆಗೆ ವಿಶೇಷ ಅಗತ್ಯವಿರುವ ಮಕ್ಕಳನ್ನು ಸಮಾನವಾಗಿ ಕಲಿಸುವ ಸಾಮರ್ಥ್ಯವನ್ನು ಪಡೆಯುತ್ತಾರೆ.


ಕೋರ್ಸ್ ಅರ್ಹತೆ:-
ನರ್ಸರಿ ತರಬೇತಿ ಕೋರ್ಸ್ 1 ವರ್ಷದ ಅವಧಿಯ ಕೋರ್ಸ್ ಆಗಿದ್ದು, ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಅಥವಾ ಪದವಿದರರಿಗೆ ಈ ತರಬೇತಿಯನ್ನು ಪಡೆಯಬಹುದಾಗಿದೆ. ತರಬೇತಿಯ ಜೊತೆಗೆ ನಮ್ಮ ಸಂಸ್ಥೆಯಲ್ಲಿ ಒಂದು ವರ್ಷದ ಉಚಿತ Diploma in Computer Skill ಹಾಗೂ Spoken English ತರಬೇತಿಯನ್ನು ಸಹ ನೀಡಲಾಗುವುದು. ಈ ತರಬೇತಿಯನ್ನು ಪೂರ್ಣಗೊಳಿಸಿದ ಶಿಕ್ಷಕಿಯರಿಗೆ IATE (Indian Association of Teacher Educators) ಹಾಗೂ IMS (International Montessori Society) ಇವರ ಮಾನ್ಯತೆ ಹೊಂದಿರುವ ಪ್ರಮಾಣಪತ್ರವನ್ನು ಭಾರತ ಸರ್ಕಾರದ Ministry of Corporate Affairs ಅಡಿಯಲ್ಲಿ ನೋಂದಾಯಿತವಾದ Winstud Academy ವತಿಯಿಂದ ನೀಡಲಾಗುತ್ತದೆ.


ಈ ಕೋರ್ಸ್‌ನ ಉದ್ಯೋಗ ಅವಕಾಶಗಳು:

ಈ ಕೋರ್ಸ್‌ನಿಂದ ದೇಶ-ವಿದೇಶಗಳಲ್ಲಿ ನರ್ಸರಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ, ಸ್ವತಃ ಪ್ಲೆ- ಸ್ಕೂಲ್ ಅಥವಾ ಡೇ ಕೇರ್ ಕೇಂದ್ರ ಆರಂಭಿಸುವ ಅವಕಾಶ, ಅಥವಾ ನರ್ಸರಿ ತರಬೇತಿ ಕೇಂದ್ರವನ್ನು ತೆರೆಯುವ ಅವಕಾಶವನ್ನು ಪಡೆಯಬಹುದು.

ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯ ನರ್ಸರಿ ಟೀಚರ್ ತರಬೇತಿಯ (N.T.T)ವಿಭಾಗದ ಎಲ್ಲಾ ವಿದ್ಯಾರ್ಥಿಗಳು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ರಾಜ್ಯದ ವಿವಿಧ ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶಿಕ್ಷಕಿಯರಾಗಿ ನೇಮಕವಾಗಿರುವುದು ಸಂತಸ ಸಂಗತಿಯಾಗಿದ್ದು, ಸಂಸ್ಥೆಗೆ ಹೆಮ್ಮೆಯನ್ನು ತಂದು ಕೊಟ್ಟಿದೆ.
ಜುಲೈ ೦2-೦7-2026ರಂದು ತರಗತಿಗಳು ಆರಂಭಗೊಳ್ಳಿದ್ದು, ಕೆಲವೇ ಸೀಮಿತ ಸೀಟ್‌ಗಳು ಲಭ್ಯವಿರುತ್ತದೆ.

ಆಸಕ್ತರಿಗೆ ವಾರದ ಎಲ್ಲಾ ದಿನಗಳಲ್ಲಿ ಹಾಗೂ ಉದ್ಯೋಗಸ್ತರಿಗೆ ಶನಿವಾರ ಅಪರಾಹ್ನ ಸರ್ಕಾರಿ ರಜೆ ದಿನಗಳಂದು ಹಾಗೂ ದೂರದ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ವ್ಯವಸ್ಥೆಯೊಂದಿಗೆ ತರಬೇತಿಗಳು ಲಭ್ಯವಿರುತ್ತದೆ. 2026-27ನೇ ಸಾಲಿನ ಮೊಂಟೆಸರಿ ಶಿಕ್ಷಕಿಯರ ತರಬೇತಿಯ ದಾಖಲಾತಿ ಆರಂಭಗೊಂಡಿದ್ದು, ಆಸಕ್ತರು ಕೂಡಲೇ ಪ್ರಗತಿ ಸ್ಟಡಿ ಸೆಂಟರ್‌ನ ಕಛೇರಿಗೆ ಅಥವಾ ದೂರವಾಣಿ ಸಂಖ್ಯೆ 9448536143, 9900109490, 8123899490, 9480106274 ಗೆ ಸಂಪರ್ಕಸಿಬಹುದು. ಸಂಸ್ಥೆಯು ಭಾನುವಾರವು ತೆರೆದಿರುತ್ತದೆ.

LEAVE A REPLY

Please enter your comment!
Please enter your name here