







ಪುತ್ತೂರು: ನಗರ ಸಭಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ, ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಪುತ್ತೂರು ನಗರ ಕಾಂಗ್ರೆಸ್ ಸಮಿತಿಯ ಪುನರ್ರಚನೆ ಮಾಡಲಾಗಿದ್ದು 10 ವಲಯಗಳಿಗೆ ಅಧ್ಯಕ್ಷ ನೇಮಕ ಮಾಡಲಾಗಿದೆ.



ಶಾಸಕ ಅಶೋಕ್ ಕುಮಾರ್ ರೈಯವರ ಸೂಚನೆಯಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಅಳ್ವ ಅವರು ನಗರಸಭಾ ವ್ಯಾಪ್ತಿಯನ್ನು 10 ವಲಯಗಳಾಗಿ ವಿಂಗಡಿಸಿ ಎಲ್ಲಾ ವಲಯಗಳಿಗೆ ಅಧ್ಯಕ್ಷರನ್ನು ನೇಮಕಗೊಳಿಸಿ ಅದೇಶಿಸಿದ್ದಾರೆ.



ಶಿವನಗರ, ಸಿಟಿಗುಡ್ಡೆ, ಪಡ್ಡಯೂರು, ಮಂಜಲ್ಪಡ್ಪು ವಾರ್ಡ್ಗಳ ನೆಹರು ನಗರ ವಲಯಕ್ಕೆ ಲೋಕೇಶ್ ಪಡ್ಡಯೂರು, ಅನೆಮಜಲು, ಬನ್ನೂರು ಕರ್ಮಲ, ಬನ್ನೂರು ಕಟ್ಟೆ ವಾರ್ಡ್ಗಳ ಬನ್ನೂರು ವಲಯಕ್ಕೆ ರೋಶನ್ ರೈ ಬನ್ನೂರು, ಕೆಮ್ಮಾಯಿ, ಕೇಪುಲು ಸಾಲ್ಮರ ವ್ಯಾಪ್ತಿಯ ಕೆಮ್ಮಾಯಿ ವಲಯಕ್ಕೆ ಹರೀಶ್ ಆಚಾರ್ಯ, ಬಲ್ನಾಡು, ನೆಲ್ಲಿಗುಂಡಿ, ತೆಂಕಿಲ ವಾರ್ಡ್ಗಳ ಬಪ್ಪಳಿಗೆ ವಲಯಕ್ಕೆ ಮೊನು ಬಪ್ಪಳಿಗೆ, ಸೂತ್ರಬೆಟ್ಟು, ಸಾಮೆತಡ್ಕ, ಕಾವೇರಿಕಟ್ಟೆಗಳ ಸಾಮೆತಡ್ಕ ವಲಯಕ್ಕೆ ಮುಖೇಶ್ ಕೆಮ್ಮಿಂಜೆ, ಕೆಮ್ಮಿಂಜೆ, ಮೊಟ್ಟೆತಡ್ಕ, ಸಿಂಹವನಗಳ ಕೆಮ್ಮಿಂಜೆ ವಲಯಕ್ಕೆ ಕೆ.ಎಂ ಅಬ್ದುಲ್ಲ, ನೆಲ್ಲಿಕಟ್ಟೆ, ಬೊಳ್ವಾರು, ಕೊರ್ಟ್ರೋಡುಗಳ ನೆಲ್ಲಿಕಟ್ಟೆ ವಲಯಕ್ಕೆ ದಾಮೋದರ ಭಂಡಾರ್ಕರ್, ಪಡೀಲು, ಹಾರಾಡಿ, ಕೊಂಬೆಟ್ಟು ವಾರ್ಡ್ಗಳ ಹಾರಾಡಿ ವಲಯಕ್ಕೆ ರೋಷನ್ ಭಂಡಾರಿ, ಪರ್ಲಡ್ಕ, ಬೀರಮಲೆ, ಪಾಂಗ್ಲಾಯಿ ವಾರ್ಡ್ಗಳ ಪರ್ಲಡ್ಕ ವಲಯಕ್ಕೆ ಗೋಪಾಲಕೃಷ್ಣ ನಾೖಕ್, ಬೆದ್ರಾಳ, ಮರೀಲ್, ಕರಿಯಾಲ ವಾರ್ಡ್ಗಳ ಬೆದ್ರಾಳ ವಲಯಕ್ಕೆ ಜಾನ್ಸಿರಿಲ್ ರೋಡ್ರಿಗಸ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.
ಮುಂದಿನ ನಗರ ಸಭಾ ಚುನಾವಣೆಯ ಗುರಿಯಾಗಿಟ್ಟುಕೊಂಡು ಪಕ್ಷ ಸಂಘಟಿಸಿ, ಬಲಪಡಿಸುವ ಉದ್ದೇಶದಿಂದ ನಗರ ಕಾಂಗ್ರೆಸ್ನ್ನು ಪುನರ್ ರಚಿಸಲಾಗಿದೆ. 27 ವಾರ್ಡ್ಗಳಿಗೆ 10 ವಲಯಗಳನ್ನಾಗಿ ರಚಿಸಿಕೊಂಡು ಅವುಗಳಿಗೆ ಅಧ್ಯಕ್ಷರ ನೇಮಕ ಮಾಡಲಾಗಿದೆ. ಶಾಸಕ ಅಶೋಕ್ ಕುಮಾರ್ ರೈಯವರ ಅಭಿವೃದ್ಧಿಯ ವೇಗಕ್ಕೆ ಒತ್ತು ನಿಡುವುದು ಹಾಗೂ ಪಕ್ಷ ಸಂಘಟಿಸಿ ನಗರ ಸಭಾ ಚುನಾವಣೆಯಲ್ಲಿ ಬಹುಮತ ಪಡೆಯುವುದು ಉದ್ದೇಶ ಎಂದು ಕೃಷ್ಣಪ್ರಸಾದ್ ಆಳ್ವ ತಿಳಿಸಿದ್ದಾರೆ.









